ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ನಡೆದ 10 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಆಚರಣೆಯ ನೇತೃತ್ವವನ್ನ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಹಿಸಿದ್ದರು. ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆ 2024 ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಅವರು ವಿವಿಧ ಆಸನಗಳನ್ನು ಪ್ರದರ್ಶಿಸಿದರು.
ನಂತರ, ಪ್ರಧಾನಿ ದಾಲ್ ಸರೋವರದಿಂದ ತಮ್ಮ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
https://x.com/narendramodi/status/1803996122999853182
ಶ್ರೀನಗರದ ಶೇರ್-ಇ-ಕಾಶ್ಮೀರ್ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್ (SKICC)ನಲ್ಲಿ ನಡೆದ 10 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಕಳೆದ 10 ವರ್ಷಗಳಲ್ಲಿ, ಯೋಗದ ವಿಸ್ತರಣೆಯು ಯೋಗಕ್ಕೆ ಸಂಬಂಧಿಸಿದ ಗ್ರಹಿಕೆಯನ್ನು ಬದಲಾಯಿಸಿದೆ… ಇಂದು, ಜಗತ್ತು ಹೊಸ ಯೋಗ ಆರ್ಥಿಕತೆಯನ್ನು ಎದುರು ನೋಡುತ್ತಿದೆ. ಭಾರತದಲ್ಲಿ, ಹೃಷಿಕೇಶ ಮತ್ತು ಕಾಶಿಯಿಂದ ಕೇರಳದವರೆಗೆ, ಯೋಗ ಪ್ರವಾಸೋದ್ಯಮದ ಹೊಸ ಸಂಪರ್ಕವನ್ನ ನೋಡಲಾಗುತ್ತಿದೆ. ಭಾರತ ಮತ್ತು ವಿಶ್ವದಾದ್ಯಂತದ ಜನತೆಗೆ ಶುಭ ಕೋರಿದ ಅವರು, ಒಂದು ದಶಕದ ಮಹತ್ವದ ಘಟನೆಗಳ ನಂತರ ಅಂತಾರಾಷ್ಟ್ರೀಯ ಯೋಗ ದಿನ ಮುಕ್ತಾಯಗೊಂಡಿದೆ” ಎಂದರು.
https://x.com/narendramodi/status/1803975853115912203