ನವದೆಹಲಿ: ಸಂಘರ್ಷ ಪೀಡಿತ ಉಕ್ರೇನ್ ಗೆ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯು “ಸಂಭಾವ್ಯವಾಗಿ ಸಹಾಯಕವಾಗಿದೆ” ಎಂದು ಯುನೈಟೆಡ್ ಸ್ಟೇಟ್ಸ್ ಹೇಳಿದೆ ಎಂದು ಶ್ವೇತಭವನವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎಫ್ ಪಿ ವರದಿ ಮಾಡಿದೆ. ಪೋಲೆಂಡ್ ನಿಂದ ಏಳು ಗಂಟೆಗಳ ಸುದೀರ್ಘ ರೈಲು ಪ್ರಯಾಣದ ನಂತರ ಪ್ರಧಾನಿ ಮೋದಿ ಇಂದು ಉಕ್ರೇನ್ ಗೆ ಆಗಮಿಸಿದರು. 1992 ರಲ್ಲಿ ದ್ವಿಪಕ್ಷೀಯ ಸಂಬಂಧಗಳು ಸ್ಥಾಪನೆಯಾದ ನಂತರ ದೇಶಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ನಾಯಕರಾಗಿದ್ದಾರೆ.
ಕೀವ್ ಅಂತರರಾಷ್ಟ್ರೀಯ ಗಡಿಯನ್ನು ದಾಟಿ ಕುರ್ಸ್ಕ್’ನಲ್ಲಿರುವ ಹಲವಾರು ರಷ್ಯಾದ ವಸಾಹತುಗಳ ನಿಯಂತ್ರಣವನ್ನ ತೆಗೆದುಕೊಳ್ಳುವುದರೊಂದಿಗೆ ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷವು ಹೊಸ ಹಂತವನ್ನು ಪ್ರವೇಶಿಸಿರುವ ಸಮಯದಲ್ಲಿ ಪ್ರಧಾನಿಯವರ ಭೇಟಿ ಬಂದಿದೆ.
ಪ್ರಧಾನಿ ಮೋದಿಯವರ ಉಕ್ರೇನ್ ಪ್ರವಾಸವು “ನ್ಯಾಯಯುತ ಶಾಂತಿಗಾಗಿ ಅಧ್ಯಕ್ಷ (ವೊಲೊಡಿಮಿರ್) ಜೆಲೆನ್ಸ್ಕಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿರುವ ಸಂಘರ್ಷವನ್ನ ಕೊನೆಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಸಾಧ್ಯವಾದರೆ, ಅದು ಸಹಾಯಕವಾಗಲಿದೆ ಎಂದು ನಾವು ಭಾವಿಸುತ್ತೇವೆ” ಎಂದು ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ಸುದ್ದಿಗಾರರಿಗೆ ತಿಳಿಸಿದರು.
BREAKING : ಭಾರತದ ರೇಸ್ ವಾಕರ್, ಒಲಿಂಪಿಯನ್ ‘ಭಾವನಾ ಜಾಟ್’ಗೆ 16 ತಿಂಗಳ ನಿಷೇಧ ಹೇರಿದ ‘NADA’
BREAKING : ವಾಲ್ಮೀಕಿ ಹಗರಣ : ಮಾಜಿ ಎಂಡಿ ಪದ್ಮಾನಾಭ್, ಸತ್ಯನಾರಾಯಣ 7 ದಿನ ‘ED’ ಕಸ್ಟಡಿಗೆ
ಭಾರತದ ಅತ್ಯಂತ ‘ಜನಪ್ರಿಯ ಮುಖ್ಯಮಂತ್ರಿ ಪಟ್ಟಿ’ಯಲ್ಲಿ ‘ಯೋಗಿ’ಗೆ ಅಗ್ರ ಪಟ್ಟ ; ಇಲ್ಲಿದೆ ‘ಸಮೀಕ್ಷೆ’ ಲಿಸ್ಟ್!