ನವದೆಹಲಿ: ಮಾಸ್ಕೋದಲ್ಲಿ ಮೇ 9 ರಂದು ನಡೆಯಲಿರುವ ರಷ್ಯಾದ ವಿಜಯ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವುದಿಲ್ಲ ಎಂದು ಕ್ರೆಮ್ಲಿನ್ ವಕ್ತಾರರು ಬುಧವಾರ ಸುದ್ದಿ ಸಂಸ್ಥೆ ರಾಯಿಟರ್ಸ್ಗೆ ತಿಳಿಸಿದ್ದಾರೆ.
ಪ್ರಧಾನಿಯವರ ನಿರ್ಧಾರದ ಹಿಂದಿನ ಕಾರಣವನ್ನು ರಷ್ಯಾದ ಅಧಿಕಾರಿಗಳು ನಿರ್ದಿಷ್ಟಪಡಿಸದಿದ್ದರೂ, ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಯುದ್ಧ ಭೀತಿ ನಿರ್ಮಾಣವಾಗಿದೆ. ಈ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾ ಪ್ರವಾಸ ರದ್ದುಗೊಳಿಸಿದ್ದಾಗಿ ಹೇಳಲಾಗುತ್ತಿದೆ. ಈ ಬೆಳವಣಿಗೆಯ ಬಗ್ಗೆ ಭಾರತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಎರಡನೇ ಮಹಾಯುದ್ಧದಲ್ಲಿ ನಾಜಿ ಜರ್ಮನಿಯ ವಿರುದ್ಧದ ವಿಜಯದ 80ನೇ ವಾರ್ಷಿಕೋತ್ಸವದ ಅಂಗವಾಗಿ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ನಾಯಕರು ರಷ್ಯಾಕ್ಕೆ ಬರುವ ನಿರೀಕ್ಷೆಯಿದೆ. ವಿಕ್ಟರಿ ಡೇ ಎಂಬುದಾಗಿ ರಷ್ಯಾ ಆಚರಣೆ ಮಾಡುತ್ತಿದೆ. ಇಂತಹ ಆಚರಣೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಬೇಕಾಗಿತ್ತು.
ಮಂಗಳೂರಲ್ಲಿ ಯುವಕನ ಹತ್ಯೆ ಸಮಾಜದ ಶಾಂತಿ ಕದಡುವ ದುಷ್ಟ ಶಕ್ತಿಗಳ ಕೃತ್ಯ: ಸಚಿವ ದಿನೇಶ್ ಗುಂಡೂರಾವ್
BIG NEWS : ದೇಶದಲ್ಲಿ ನಾಳೆಯಿಂದ 15 ಬ್ಯಾಂಕುಗಳ ವಿಲೀನ : ಖಾತೆದಾರರ ಮೇಲೆ ಏನು ಪರಿಣಾಮ ಬೀರುತ್ತದೆ?