ಭೋಪಾಲ್: ವಾರ್ಷಿಕ ಪರೀಕ್ಷೆಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಭೋಪಾಲ್ ನಲ್ಲಿ ಪ್ರಾರಂಭವಾಗುವ ಜಾಗತಿಕ ಹೂಡಿಕೆದಾರರ ಶೃಂಗಸಭೆಯ ವೇಳಾಪಟ್ಟಿಯನ್ನು ಬದಲಾಯಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಈ ನಡೆಗೆ ನೆಟ್ಟಿಗರು ಭಾರೀ ಮೆಚ್ಚುಗೆ, ಪ್ರಶಂಸೆ, ಶ್ಲಾಘನೆಯನ್ನು ವ್ಯಕ್ತ ಪಡಿಸಿದ್ದಾರೆ.
ಫೆಬ್ರವರಿ 24ರ ಇಂದು ನಡೆಯಲಿರುವ ‘ಇನ್ವೆಸ್ಟ್ ಮಧ್ಯಪ್ರದೇಶ – ಜಾಗತಿಕ ಹೂಡಿಕೆದಾರರ ಶೃಂಗಸಭೆ -2025’ ಗೆ ಮೋದಿ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮಕ್ಕೆ ಆಗಮಿಸೋದಕ್ಕೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯವಾದ ಕಾರಣ ತಮ್ಮ ಪ್ರಯಾಣದ ವೇಳಾಪಟ್ಟಿಯನ್ನೇ ಬದಲಾಯಿಸಿದ್ದಾರೆ. ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಪ್ರಧಾನಿ ತಮ್ಮ ಕಾರ್ಯಕ್ರಮವನ್ನು 15 ನಿಮಿಷಗಳವರೆಗೆ ವಿಸ್ತರಿಸಿದರು. ಬೆಳಿಗ್ಗೆ 9.45ಕ್ಕೆ ಹೊರಡಬೇಕಿದ್ದಂತ ವೇಳಾಪಟ್ಟಿಯನ್ನು ಬದಲಾಯಿಸಿ ಬೆಳಿಗ್ಗೆ 10 ಗಂಟೆಗೆ ಹೊರಟರು.
ಈ ಕಾರಣದಿಂದಾಗಿ ಇಂದು ಭೂಪಾಲ್ ನಲ್ಲಿ ನಡೆಯುತ್ತಿದ್ದಂತ ವಾರ್ಷಿಕ ಪರೀಕ್ಷೆಗೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಸರಿಯಾದ ಸಮಯದಲ್ಲಿ ತಲುಪೋದಕ್ಕೆ ಸಾಧ್ಯವಾಯಿತು. ಒಂದು ವೇಳೆ ಮೋದಿ ಬೆಳಿಗ್ಗೆ 9.45ಕ್ಕೆ ತೆರಳಿದ್ದರೇ, ಅವರ ಸಂಚಾರದ ಮಾರ್ಗದಲ್ಲಿ ಜೀರೋ ಟ್ರಾಫಿಕ್ಸ್ ವ್ಯವಸ್ಥೆ ಮಾಡಬೇಕಿದ್ದಂತ ಕಾರಣ ಸಂಚಾರ ದಟ್ಟಣೆಯಲ್ಲಿ ಸಿಲುಕಿ, ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗೆ ತೊಂದರೆ ಕೊಟ್ಟಂತೆ ಆಗುತ್ತಿತ್ತು.
ಆದರೇ ಮೋದಿ ವಿದ್ಯಾರ್ಥಿಗಳು ಯಾವುದೇ ತೊಂದರೆಗಳಿಲ್ಲದೆ ತಮ್ಮ ಪರೀಕ್ಷಾ ಕೇಂದ್ರಗಳನ್ನು ತಲುಪಲು ಅನುವು ಮಾಡಿಕೊಡುವ ನಿರ್ಧಾರವನ್ನು ಮೋದಿ ತೆಗೆದುಕೊಂಡರು.
ಮುಖ್ಯಮಂತ್ರಿ ಮೋಹನ್ ಯಾದವ್ ಅವರು ವಿದ್ಯಾರ್ಥಿಗಳ ಬಗ್ಗೆ ಪ್ರಧಾನಿಯವರ ಕಾಳಜಿಯನ್ನು ಶ್ಲಾಘಿಸಿದರು. ಅವರು ಯಾವಾಗಲೂ ವಿದ್ಯಾರ್ಥಿಗಳು ಮತ್ತು ಅವರ ಉಜ್ವಲ ಭವಿಷ್ಯದ ಬಗ್ಗೆ ಸಂವೇದನಾಶೀಲರಾಗಿದ್ದಾರೆ ಮತ್ತು ಕಾಲಕಾಲಕ್ಕೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅವರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತಾರೆ ಎಂದು ಹೇಳಿದರು.
ಮೋದಿಯವರ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮವು ಬಹಳ ಜನಪ್ರಿಯವಾಗಿದೆ ಮತ್ತು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದೆ ಎಂದು ಅವರು ಹೇಳಿದರು.
ಈ ಕಾರ್ಯಕ್ರಮವು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಲು ಮತ್ತು ಪರೀಕ್ಷೆಯ ಒತ್ತಡವನ್ನು ನಿಭಾಯಿಸಲು ಸಹಾಯ ಮಾಡುವ ಮೋದಿಯವರ ಉಪಕ್ರಮವಾಗಿದೆ.
ಮಂಡ್ಯ ಪೋಲೀಸರ ಭರ್ಜರಿ ಕಾರ್ಯಾಚರಣೆ: ಇಬ್ಬರು ಸರಗಳ್ಳರ ಬಂಧನ, 42 ಲಕ್ಷ ಮೌಲ್ಯದ ಚಿನ್ನಾಭರಣ ವಶ
BREAKING : ರಾಜ್ಯದ ವಾಹನ ಸವಾರರಿಗೆ ಗುಡ್ ನ್ಯೂಸ್ : ‘HSRP’ ನಂಬರ್ ಪ್ಲೇಟ್ ಅಳವಡಿಕೆ ಮಾ.31ರವರೆಗೆ ವಿಸ್ತರಣೆ
ಈ 2 ರೂಪಾಯಿ ‘ನಾಣ್ಯ’ ಇರುವವರಿಗೆ ಸೂಪರ್ ಆಫರ್! ಹಣದ ಮಳೆಯೇ ಸುರಿಸುತ್ತೆ, 5 ಲಕ್ಷ ರೂ. ನಿಮ್ಮ ಸ್ವಂತ