ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬಿಹಾರ ಪ್ರವಾಸದ ಎರಡನೇ ದಿನವಾದ ಸೋಮವಾರ (ಮೇ 13, 2024) ಪಾಟ್ನಾ ನಗರದ ತಖ್ತ್ ಶ್ರೀ ಹರ್ಮಂದಿರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದರು.
ಗುರುದ್ವಾರದಲ್ಲಿ ಬಂದಂತಹ ಭಕ್ತರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸಾದ ಹಂಚಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಇಲ್ಲಿನ ಲಂಗರ್ ನಲ್ಲಿ ಸೇವೆ ಸಲ್ಲಿಸಿದರು. ಅವರು ಪಂಗಟ್ ನಲ್ಲಿ ಕುಳಿತ ಭಕ್ತರಿಗೆ ಪ್ರಸಾದವನ್ನು ಹಂಚಿದ್ದಾರೆ.
#WATCH | PM Narendra Modi serves langar at Gurudwara Patna Sahib in Patna, Bihar pic.twitter.com/qhj5RuHTHh
— ANI (@ANI) May 13, 2024
ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 20 ನಿಮಿಷಗಳ ಕಾಲ ಇಲ್ಲಿಯೇ ಇದ್ದರು. ಅವರೊಂದಿಗೆ ರವಿಶಂಕರ್ ಪ್ರಸಾದ್ ಮತ್ತು ಅಶ್ವಿನಿ ಚೌಬೆ ಇದ್ದರು. ಇದೇ ಮೊದಲ ಬಾರಿಗೆ ಪ್ರಧಾನಿಯೊಬ್ಬರು ಪಾಟ್ನಾ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದ್ದಾರೆ.