Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವೈದ್ಯಕೀಯ: ಛಾಯ್ಸ್‌-2 ಅಭ್ಯರ್ಥಿಗಳಿಗೆ ಮುಂಗಡ ಶುಲ್ಕ ಪಾವತಿಯಲ್ಲಿ ಬದಲಾವಣೆ- ಕೆಇಎ

14/08/2025 6:34 PM

Watch Video: ಜಮ್ಮು-ಕಾಶ್ಮೀರದಲ್ಲಿ ಮೇಘಸ್ಪೋಟದಿಂದ 33 ಮಂದಿ ಸಾವು: ಇಲ್ಲಿವೆ ಭಯಾನಕ ವೀಡಿಯೋ

14/08/2025 6:03 PM

ಆ.16ರಂದು ‘ಕೃಷ್ಣ ಜನ್ಮಾಷ್ಟಮಿ’ ಹಿನ್ನಲೆ: ಬೆಂಗಳೂರಲ್ಲಿ ‘ಪ್ರಾಣಿವಧೆ, ಮಾಂಸ ಮಾರಾಟ’ ನಿಷೇಧ

14/08/2025 5:53 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದೇಶದ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ: ವಿಶೇಷತೆ ಏನು?
INDIA

ದೇಶದ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ: ವಿಶೇಷತೆ ಏನು?

By kannadanewsnow0906/04/2025 2:34 PM

ತಮಿಳುನಾಡು: ಆ ಪ್ರದೇಶಕ್ಕೆ ರೈಲು ಸಂಪರ್ಕ ಕಲ್ಪಿಸದೇ ಇದ್ದರೇ ಭಾರತದೊಂದಿಗೆ ಸಂಪರ್ಕವೇ ಇರುತ್ತಿರಲಿಲ್ಲ. ರೈಲು ಮಾರ್ಗದೊಂದಿಗೆ ಸಂಪರ್ಕ ಪಡೆದಂತ ಭಾರತದ ಭೂ ಭಾಗವೇ ರಾಮೇಶ್ವರಂ. ಈ ನಗರಕ್ಕೆ ಸಂಪರ್ಕ ಕಲ್ಪಿಸಿದ್ದೇ ಪಂಬನ್ ಸೇತುವೆ. ಕೆಲ ವರ್ಷಗಳಿಂದ ಸ್ಥಗಿತಗೊಂಡಿದ್ದ ರೈಲು ಸಂಚಾರಕ್ಕೆ ನೂತನ ಸಮುದ್ರ ರೈಲು ಸೇತುವೆ ಸಿದ್ಧಗೊಂಡಿದೆ. ಇಂತಹ ದೇಶದ ಮೊದಲ ಲಿಫ್ಟ್ ಸೇತುವೆ ರಾಮೇಶ್ವರಂನ ಪಂಬನ್ ಪ್ರಿಡ್ಜ್ ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು ಲೋಕಾರ್ಪಣೆಗೊಳಿಸಿದ್ದಾರೆ. ಅದರ ವಿಶೇಷತೆ ಏನು ಅಂತ ಮುಂದಿದೆ ಓದಿ.

ರಾಮೇಶ್ವರಂ ದ್ವೀಪಕ್ಕೆ ಭಾರತೀಯ ರೈಲ್ವೆಯಿಂದ ಸಂಪರ್ಕ

ಒಂದು ಕಾಲದಲ್ಲಿ ಆ ಭೂ ಭಾಗ ಸುತ್ತಲೂ ಸಮುದ್ರದಿಂದ ಆವೃತ್ತವಾಗಿ ದ್ವೀಪವಾಗಿತ್ತು. ಆ ದ್ವೀಪಕ್ಕೆ ಸಂಪರ್ಕ ಕಲ್ಪಿಸಿದ್ದು ರೈಲ್ವೆ ಸಾರಿಗೆ ಸಂಚಾರದ ಮೂಲಕ. ಈಗ ರಸ್ತೆ, ರೈಲು ಮಾರ್ಗದ ಮೂಲಕ ಜೊತೆಗೆ ಬೆಸೆದುಕೊಂಡಿರೋದೇ ರಾಮೇಶ್ವರಂ. ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂ ಪಟ್ಟಣಕ್ಕೆ ರೈಲು ಸಾರಿಗೆ ಮೂಲಕ ಮತ್ತೊಮ್ಮೆ ಸಂಪರ್ಕ ಕಲ್ಪಿಸಲು ನೈರುತ್ಯ ರೈಲ್ವೆ ಸಿದ್ಧವಾಗಿದೆ. ಇದಕ್ಕಾಗಿ ಭಾರತದ ಮೊದಲ ವರ್ಟಿಕಲ್ ಲಿಫ್ಟಿಂಗ್ ಸೇತುವೆಯನ್ನು ನಿರ್ಮಿಸಲಾಗಿದೆ.

1914ರಲ್ಲಿ ನಿರ್ಮಿಸಿದ್ದ ಸೇತುವೆ ಹಾನಿ

1914ರಲ್ಲಿ ರಾಮೇಶ್ವರಂ ದ್ವೀಪಕ್ಕೆ ಮೀಟರ್ ಗೇಜ್ ರೈಲ್ವೆ ಟ್ರ್ಯಾಕ್ ನಿರ್ಮಾಣ ಮಾಡಲಾಗಿತ್ತು. 1964ರಲ್ಲಿ ಉಂಟಾದಂತ ಚಂಡಮಾರುತಕ್ಕೆ ಸಿಕ್ಕು ರೈಲು ಸೇತುವೆ ಹಾನಿಯಾಗಿತ್ತು. ಆಗ ದುರಸ್ತಿಗೊಳಿಸಿ ರೈಲು ಮಾರ್ಗವನ್ನು ಮೀಟರ್ ಗೇಜ್ ನಿಂದ ಬ್ರಾಡ್ ಗೇಜ್ ಗೆ ಪರಿವರ್ತಿಸಲಾಗಿತ್ತು. ಹೀಗೆ ನಿರ್ಮಿಸಿದ್ದಂತ ಸೇತುವೆಗೆ 110 ವರ್ಷಗಳಾಗುತ್ತಿವೆ. ಇಷ್ಟು ಹಳೆಯ ಸೇತುವೆಯು ಅಲ್ಲಲ್ಲಿ ಹಾನಿಗೊಂಡ ಪರಿಣಾಮ ಹೊಸ ಸೇತುವೆಯನ್ನು ಅದರ ಪಕ್ಕದಲ್ಲೇ ನಿರ್ಮಿಸಲು ಕೇಂದ್ರ ರೈಲ್ವೆ ಸಚಿವಾಲಯ ಅನುಮೋದನೆ ನೀಡಿತು.

ಫೆಬ್ರವರಿ 2019ರಲ್ಲಿ ಕೇಂದ್ರ ರೈಲ್ವೆ ಸಚಿವಾಲಯವು ನೂತನ ಸೇತುವೆ ನಿರ್ಮಾಣಕ್ಕೆ ಅನುಮೋದನೆ ನೀಡಿತು. ಆ ಮೂಲಕ ಭಾರತದ ಮೊದಲ ವರ್ಟಿಕಲ್ ಲಿಫ್ಟಿಂಗ್ ಸೇತುವೆ ನಿರ್ಮಾಣಕ್ಕೆ ಮುನ್ನುಡಿ ಬರೆಯಲಾಯಿತು.

ಫೆಬ್ರವರಿ 2019ರಲ್ಲಿ ಭಾರತದ ಮೊದಲ ವರ್ಟಿಕಲ್ ಲಿಫ್ಟಿಂಗ್ ಸೇತುವೆ ನಿರ್ಮಾಣ ಆರಂಭ

ಕೇಂದ್ರ ರೈಲ್ವೆ ಸಚಿವಾಲಯವು ಬರೋಬ್ಬರಿ 531 ಕೋಟಿ ವೆಚ್ಚದಲ್ಲಿ ಭಾರತದ ಮೊದಲ ವರ್ಟಿಕಲ್ ಲಿಫ್ಟಿಂಗ್ ಸೇತುವೆ ನಿರ್ಮಾಣಕ್ಕೆ ಅನುಮೋದನೆ ನಂತ್ರ, ಫೆಬ್ರವರಿ 2019ರಲ್ಲಿ ಸೇತುವೆ ನಿರ್ಮಾಣ ಕಾರ್ಯ ಆರಂಭಗೊಂಡಿತು. ಸಮುದ್ರದ ಆಳದಲ್ಲಿ ಕಬ್ಬಿಣ ಹಾಗೂ ಸಿಮೆಂಟ್ ಬಳಸಿ ಕಂಬಗಳನ್ನು ನಿರ್ಮಾಣ ಮಾಡಿ ಸೇತುವೆಯನ್ನು ನಿರ್ಮಿಸಲಾಗಿದೆ. RVNLನ ಬಿ.ಕೆ ರೆಡ್ಡಿ ಕಂಪನಿಯು ರಾಮೇಶ್ವರಂ ಸಮುದ್ರ ತೀರದಲ್ಲಿ ವರ್ಟಿಕಲ್ ರೈಲು ಸೇತುವೆ ನಿರ್ಮಾಣವನ್ನು ಆರಂಭಿಸಿ, ನವೆಂಬರ್ 2024ರಲ್ಲಿ ಮುಕ್ತಾಯಗೊಳಿಸಿದೆ.

333 ಕಂಭಗಳ ಮೇಲೆ ರೈಲು ಸಂಚಾರ

333 ಕಂಭಗಳನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸಮುದ್ರದಲ್ಲಿ ಹುದುಗಿಸಿ ವರ್ಟಿಕಲ್ ಸೇತುವೆಯನ್ನು ನಿರ್ಮಿಸಲಾಗಿದೆ. 2.10 ಕಿಲೋಮೀಟರ್ ದೂರದ ಈ ರೈಲು ಸೇತುವೆ ಮೇಲೆ ಸುಮಾರು 75 ರಿಂದ 80 ಕಿಲೋಮೀಟರ್ ವೇಗದ ಮಿತಿಯಲ್ಲಿ ರೈಲು ಸಂಚಾರಕ್ಕೂ ಅನುಮತಿ ನೀಡಲಾಗಿದೆ.

3,38,014 ಬ್ಯಾಗ್ ಸಿಮೆಂಟ್ ಬಳಕೆ

38 ಮೀಟರ್ ಆಳದವರೆಗೆ ಸಮುದ್ರದಲ್ಲಿ ಸೇತುವೆಯ ಕಂಭಗಳನ್ನು ನೆಟ್ಟು ಸುನಾಮಿ ಸೇರಿದಂತೆ ಇತರೆ ಪ್ರಕೃತಿ ವಿಕೋಪಗಳಂತ ಸಂದರ್ಭದಲ್ಲೂ ಹಾನಿಯಾಗದಂತೆ 4500 ಎಂಟಿ ಸಾಮರ್ಥ್ಯದ ಸ್ಟೇನ್ ಲೆಸ್ ಸ್ಟೀಲ್ ಬಳಸಿ ಕಂಭಗಳನ್ನು ನಿರ್ಮಿಸಲಾಗಿದೆ. 25,000 ಸಿಯುಎಂ ಕ್ವಾಲಿಟಿಯ ಸಿಮೆಂಟ್ ಅನ್ನು ಕಂಭಗಳ ನಿರ್ಮಾಣಕ್ಕೆ ಬಳಸಲಾಗಿದೆ. 333 ಪಿಲ್ಲೋಗಳನ್ನು ನಿರ್ಮಿಸಲು 3,38,014 ಬ್ಯಾಗ್ ಸಿಮೆಂಟ್ ಬಳಕೆ ಮಾಡಲಾಗಿದೆ.

ತುಕ್ಕು ಹಿಡಿಯದಂತೆ ಜಿಂಕ್ ದ್ರಾವಣ ಲೇಪನ

ಸಮುದ್ರದ ಕಡಲ ಅಲೆಗಳ ಕೊರೆತ, ವಾತಾವರಣದಲ್ಲಿನ ಬದಲಾವಣೆ ಸೇರಿದಂತೆ ಇತರೆ ಕಾರಣಗಳಿಂದ ಬಹು ಬೇಗ ತುಕ್ಕು ಹಿಡಿದು ಪಿಲ್ಲೋಗಳು ಹಾನಿಗೊಳಗಾಗುತ್ತವೆ. ಹೀಗಾಗಿ ತುಕ್ಕು ಹಿಡಿಯುವುದನ್ನು ತಡೆಯಲು ಜಿಂಕ್ ಮೆಟಲಿಜಿನ್, ಎಪಿಲುಕ್ಸ್ ಜಿಂಕ್ ರಿಚ್ ಪ್ರೀಮೆರ್, ಎರಡು ಕೋಟ್ ಪಲಿಸಿಲೋಕ್ಸಿನ್ ಪೆಯಂಟ್ಸ್ ಅನ್ನು ಪ್ರತಿ ಕಂಬಗಳಿಗೂ ಮಾಡಲಾಗಿದೆ. ಯಾವೆಲ್ಲ ಕಂಬಗಳಿಗೆ ತುಕ್ಕು ಹಿಡಿದಿದ್ಯೋ ಅಂತ ಕಾಲ ಕಾಲಕ್ಕೆ ಪರಿಶೀಲಿಸಿ ಮರು ಲೇಪನ ಮಾಡಿ, ತುಕ್ಕು ಹಿಡಿಯೋದನ್ನು ತಡೆಯೋ ಕೆಲಸವನ್ನು ರೈಲ್ವೆ ಇಲಾಖೆ ಮಾಡಲಿದೆ.

ಸಮುದ್ರ ಸೇತುವೆಯ ಪ್ರಮುಖ ಆಕರ್ಷಣೆ ವರ್ಟಿಕಲ್ ಲಿಫ್ಟಿಂಗ್

ಇನ್ನೂ ರಾಮೇಶ್ವರಂ ಬಳಿಯಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವಂತ ಸಮುದ್ರ ಸೇತುವೆಯ ಪ್ರಮುಖ ಆಕರ್ಷಣೆ ವರ್ಟಿಕಲ್ ಲಿಫ್ಟಿಂಗ್. 17 ಮೀಟರ್ ಎತ್ತರದವರೆಗೆ ಕೇವಲ 5 ನಿಮಿಷ 30 ಸೆಕೆಂಡುಗಳಲ್ಲಿ ಸೇತುವೆಯ ಭಾಗವನ್ನು ಮೇಲೆತ್ತಬಹುದಾಗಿದೆ. ಇದರಿಂದ ರಾಮೇಶ್ವರಂನಿಂದ ಸಮುದ್ರಕ್ಕೆ ದೊಡ್ಡ ದೊಡ್ಡ ಬೋಟ್ ಗಳು ಮೀನುಗಾರಿಕೆಗೆ ತೆರಳೋದಕ್ಕೆ ಅನುಕೂಲ ಕಲ್ಪಿಸಲಾಗಿದೆ.

ತಿಂಗಳಿಗೆ ಒಂದೆರಡು ಬಾರಿ ಮಾತ್ರವೇ ವರ್ಟಿಕಲ್ ಸೇತುವೆಯನ್ನು ಮೇಲೆತ್ತಲಾಗುತ್ತದೆ. ಬಂದರು ಇಲಾಖೆಯಿಂದ ವರ್ಟಿಕಲ್ ಸೇತುವೆ ಬಳಸಿ ಹೋಗುವಂತೆ ಬೋಟ್ ಗಳ ಮಾಹಿತಿಯನ್ನು ರೈಲ್ವೆ ಇಲಾಖೆಗೆ ನೀಡಿದ ನಂತ್ರ, ಈ ಸೇತುವೆ ಹಾದು ಹೋಗೋದಕ್ಕೆ ಮೇಲೆತ್ತಿ ಅವಕಾಶ ನೀಡಲಾಗುತ್ತದೆ. ಆ ಮೂಲಕ ರಾಮೇಶ್ವರಂನ ಮೀನುಗಾರರು ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಲು ಅನುವಾಗಿದೆ.

ಅಂದಹಾಗೇ ಇದಕ್ಕೂ ಮೊದಲು ನಿರ್ಮಿಸಿದ್ದಂತ ಹಳೆಯ ಸೇತುವೆಯನ್ನು ಮಾನವ ಶಕ್ತಿಯನ್ನು ಬಳಸಿ ಸುಮಾರು ಅರ್ಧಗಂಟೆಯ ಸಮಯವನ್ನು ತೆಗೆದುಕೊಂಡು ಓಪನ್ ಮಾಡಬೇಕಿತ್ತು. ಆದರೇ ಹೊಸದಾಗಿ ನಿರ್ಮಿಸಿರುವಂತ ವರ್ಟಿಕಲ್ ಸೇತುವೆಯನ್ನು ಕೇವಲ 5 ನಿಮಿಷ 30 ಸೆಕೆಂಡ್ ಗಳಲ್ಲಿ ಬರೋಬ್ಬರಿ 17 ಮೀಟರ್ ಎತ್ತರದವರೆಗೆ ಮೇಲೆತ್ತಬಹುದಾಗಿದೆ.

ಒಮ್ಮೆ ವರ್ಟಿಕಲ್ ಲಿಫ್ಟಿಂಗ್ ಸೇತುವೆ ಎತ್ತಿ ಇಳಿಸಲು 120 ಕೆವಿ ವಿದ್ಯುತ್ ಬೇಕು

ಸಂಪೂರ್ಣ ವಿದ್ಯುತ್ ಚಾಲಿತ ವರ್ಟಿಕಲ್ ಲಿಫ್ಟಿಂಗ್ ಸೇತುವೆಯನ್ನು ಒಮ್ಮೆ ತೆರೆದು, ಮೀನುಗಾರಿಕೆಗೆ ತೆರಳುವಂತ ಬೋಟ್ ಗಳಿಗೆ ಅವಕಾಶ ಮಾಡಿಕೊಟ್ಟು, ಪುನಃ ರೈಲು ಸಂಚಾರಕ್ಕೆ ಕೆಳಗಿಳಿಸಿ ಅವಕಾಶ ನೀಡಲು 120 ಕೆವಿ ವಿದ್ಯುತ್ ಬೇಕು ಎಂಬುದು ಸೀನಿಯರ್ ಸೆಕ್ಷನ್ ಆಫೀಸರ್ ಮಾಹಿತಿ. ಹೀಗಾಗಿಯೇ ತಿಂಗಳಿಗೆ ಒಂದು ಎರಡು ಬಾರಿ ಇಲ್ಲವೇ ತುರ್ತು ಸಂದರ್ಭದಲ್ಲಿ ಇನ್ನೂ ಹೆಚ್ಚಿನ ಬಾರಿ ವರ್ಟಿಕಲ್ ಲಿಫ್ಟಿಂಗ್ ಸೇತುವೆಯನ್ನು ತೆರೆದು ಮುಚ್ಚಲಾಗುತ್ತದೆ ಎಂಬುದಾಗಿಯೂ ತಿಳಿಸಿದ್ದಾರೆ.

ಭಾರತದ ಮೊದಲ ವರ್ಟಿಕಲ್ ಲಿಫ್ಟಿಂಗ್ ಸೇತುವೆ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ಫೆಬ್ರವರಿ 2019ರಲ್ಲಿ 531 ಕೋಟಿ ರೂಪಾಯಿಯಲ್ಲಿ ಕೇಂದ್ರ ರೈಲ್ವೆ ಸಚಿವಾಲಯದಿಂದ ವರ್ಟಿಕಲ್ ಲಿಫ್ಟಿಂಗ್ ಸೇತುವೆ ನಿರ್ಮಾಣ ಕಾರ್ಯಕ್ಕೆ ಅನುಮೋದನೆ ನೀಡಲಾಯಿತು. ನವೆಂಬರ್ 2024ರಲ್ಲಿ ರೈಲ್ವೆ ಸೇತುವೆ ನಿರ್ಮಾಣ ಕಾಮಗಾರಿ ಮುಕ್ತಾಯಗೊಂಡಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮೇಶ್ವರಂನ ಪಂಬನ್ ಲಿಫ್ಟ್ ಸೇತುವೆಯನ್ನು ಸಾರ್ವಜನಿಕ ಸೇವೆಗೆ ಲೋಕಾರ್ಪಣೆಗೊಳಿಸಿದ್ದಾರೆ.

Rameswaram, Tamil Nadu: PM Narendra Modi inaugurates New Pamban Bridge – India’s first vertical lift sea bridge and flags off Rameswaram-Tambaram (Chennai) new train service, on the occasion of #RamNavami2025 pic.twitter.com/6ts8HNdwqy

— ANI (@ANI) April 6, 2025

ಇಂದಿನಿಂದ ರಾಮೇಶ್ವರಂಗೆ ರೈಲು ಸಂಚಾರವೂ ಪುನರಾರಂಭ

ಇನ್ನೂ ರಾಮೇಶ್ವರಂನ ಪಂಬಲನ್ ಸಮುದ್ರ ರೈಲು ಸೇತುವೆಯ ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿದೆ. ಈಗಾಗಲೇ ರೈಲ್ವೆ ಇಲಾಖೆಯಿಂದ ವರ್ಟಿಕಲ್ ಲಿಫ್ಟಿಂಗ್ ಸೇತುವೆಯ ಮೇಲೆ ರೈಲು ಸಂಚಾರದ ಪರೀಕ್ಷೆಯನ್ನು ನಡೆಸಲಾಗಿದೆ. ಜೊತೆಗೆ 75ರಿಂದ 80 ಕಿಲೋಮೀಟರ್ ವೇಗದಲ್ಲಿ ಈ ಸೇತುವೆಯ ಮೇಲೆ ಸಂಚಾರಕ್ಕೆ ಅನುಮತಿಸಲಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಜೊತೆಗೂಡಿ ನೂತನ ಪಂಬಲನ್ ವರ್ಟಿಕಲ್ ಲಿಫ್ಟಿಂಗ್ ಸೇತುವೆ ಲೋಕಾರ್ಪಣೆ ಗೊಳಿಸಿದ್ದಾರೆ. ಹೀಗಾಗಿ ರಾಮೇಶ್ವರಂಗೆ ರೈಲು ಸಂಚಾರ ಪುನರಾರಂಭಗೊಂಡಂತೆ ಆಗಿದೆ.

ದಿನವೊಂದಕ್ಕೆ 12 ರೈಲುಗಳು ಸಂಚಾರ ನಡೆಸಲಿವೆ ಎಂಬುದಾಗಿ ರೈಲ್ವೆ ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ. ಈ ಸಂಖ್ಯೆ ವಿಶೇಷ ರೈಲುಗಳು ಸೇರಿದರೇ 18ಕ್ಕೆ ಏರುವ ಸಾಧ್ಯತೆ ಇದೆ. ಆ ಮೂಲಕ ರಾಮೇಶ್ವರಕ್ಕೆ ಭಾರತದ ಇತರೆ ಪ್ರದೇಶಗಳಿಂದ ರೈಲು ಸಂಚಾರದ ಮೂಲಕ ತಲುಪುವಂತ ಕಾರ್ಯ ಹಲವು ವರ್ಷಗಳ ಬಳಿಕ ಶುರುವಾಗಲಿದೆ.

ಸೋ ರಾಮೇಶ್ವರ ಬಳಿಯ ಪಂಬಲನ್ ವರ್ಟಿಕಲ್ ಲಿಫ್ಟಿಂಗ್ ಸೇತುವೆ ನಾಳೆ ಲೋಕಾರ್ಪಣೆಗೊಂಡಿದೆ. ಪ್ರಯಾಣಿಕರಿಗೆ ರೈಲು ಸಂಚಾರದ ಸೇವೆಯೊಂದಿಗೆ ರಾಮೇಶ್ವರಕ್ಕೆ ತಲುಪುವ ಕಾರ್ಯ ಪುನರಾರಂಭಗೊಂಡಿದೆ.

ಪಂಬನ್ ವರ್ಟಿಕಲ್ ಸೇತುವೆ ನೋಡಲು ಹೋಗೋದು ಹೇಗೆ.?

ನೀವು ಬೆಂಗಳೂರಿನಿಂದ ವಿಮಾನ ಮಾರ್ಗದ ಮೂಲಕ ಮಧುರೈಗೆ ತೆರಳಿ, ಅಲ್ಲಿಂದ ರಾಮೇಶ್ವರಕ್ಕೆ ರಸ್ತೆ ಮಾರ್ಗದ ಮೂಲಕ ಸಂಚರಿಸಬಹುದು. ಇಲ್ಲವೇ ರೈಲಿನ ಮೂಲಕ ತೆರಳೋದಾದರೇ ಬೆಂಗಳೂರಿನಿಂದ ಮಧುರೈಗೆ ನೇರವಾಗಿ ರೈಲು ಸಂಚಾರದ ವ್ಯವಸ್ಥೆಯಿದೆ. ಮಧುರೈಗೆ ತೆರಳಿ ರಾಮೇಶ್ವರಕ್ಕೆ ಕಾರು, ಬಸ್ ಮೂಲಕ ತಲುಪಬಹುದಾಗಿದೆ.

ರಾಮೇಶ್ವರಕ್ಕೆ ತೆರಳುವ ಮಾರ್ಗ ಮಧ್ಯದಲ್ಲೇ ಪಂಬನ್ ಸಮುದ್ರ ಸೇತುವೆ ನೋಡಿಕೊಂಡು ಮುಂದೆ ಸಾಗಿದ್ರೆ ನಿಮಗೆ ಡಾ.ಎಪಿಜೆ ಅಬ್ದುಲ್ ಕಾಲಂ ಮೆಮೋರಿಯಲ್ ಹಾಲ್ ಸಿಗಲಿದೆ. ಅದನ್ನು ವೀಕ್ಷಿಸಿ ರಾಮೇಶ್ವರದಲ್ಲಿ ಡಾ.ಎಪಿಜೆ ಅಬ್ದುಲ್ ಕಾಲಂ ಮನೆಗೂ ಭೇಟಿ ನೀಡಬಹುದು. ಇದಲ್ಲದೇ ರಾಮೇಶ್ವರದಿಂದ ಭಾರತದ ಕೊನೆಯ ಭೂ ಭಾಗವಾಗಿರುವಂತ ಧನುಷ್ ಕೋಟಿಗೂ ಭೇಟಿ ನೀಡಿ ಬರಬಹುದಾಗಿದೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

Share. Facebook Twitter LinkedIn WhatsApp Email

Related Posts

Watch Video: ಜಮ್ಮು-ಕಾಶ್ಮೀರದಲ್ಲಿ ಮೇಘಸ್ಪೋಟದಿಂದ 33 ಮಂದಿ ಸಾವು: ಇಲ್ಲಿವೆ ಭಯಾನಕ ವೀಡಿಯೋ

14/08/2025 6:03 PM1 Min Read

BREAKING : ಅಪರೇಷನ್ ಸಿಂಧೂರ್ ; ಪಾಕಿಸ್ತಾನಕ್ಕೆ ನುಗ್ಗಿ ಉಗ್ರ ಶಿಬಿರ ದ್ವಂಸ ಮಾಡಿದ ಫೈಟರ್ ಪೈಲಟ್’ಗಳಿಗೆ ‘ವೀರ ಚಕ್ರ ಪ್ರಶಸ್ತಿ’

14/08/2025 5:32 PM1 Min Read

ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ 9 IAF ಅಧಿಕಾರಿಗಳಿಗೆ ವೀರ ಚಕ್ರ ಪದಕ

14/08/2025 5:20 PM1 Min Read
Recent News

ವೈದ್ಯಕೀಯ: ಛಾಯ್ಸ್‌-2 ಅಭ್ಯರ್ಥಿಗಳಿಗೆ ಮುಂಗಡ ಶುಲ್ಕ ಪಾವತಿಯಲ್ಲಿ ಬದಲಾವಣೆ- ಕೆಇಎ

14/08/2025 6:34 PM

Watch Video: ಜಮ್ಮು-ಕಾಶ್ಮೀರದಲ್ಲಿ ಮೇಘಸ್ಪೋಟದಿಂದ 33 ಮಂದಿ ಸಾವು: ಇಲ್ಲಿವೆ ಭಯಾನಕ ವೀಡಿಯೋ

14/08/2025 6:03 PM

ಆ.16ರಂದು ‘ಕೃಷ್ಣ ಜನ್ಮಾಷ್ಟಮಿ’ ಹಿನ್ನಲೆ: ಬೆಂಗಳೂರಲ್ಲಿ ‘ಪ್ರಾಣಿವಧೆ, ಮಾಂಸ ಮಾರಾಟ’ ನಿಷೇಧ

14/08/2025 5:53 PM

ಇದು ಅಷ್ಟ ಲಕ್ಷ್ಮಿಯರ ಮಹಾತ್ಮೆ: ಪೂಜಿಸಿ ನೋಡಿ ಅಷ್ಟೈಶ್ವರ್ಯ ಖಚಿತ

14/08/2025 5:47 PM
State News
KARNATAKA

ವೈದ್ಯಕೀಯ: ಛಾಯ್ಸ್‌-2 ಅಭ್ಯರ್ಥಿಗಳಿಗೆ ಮುಂಗಡ ಶುಲ್ಕ ಪಾವತಿಯಲ್ಲಿ ಬದಲಾವಣೆ- ಕೆಇಎ

By kannadanewsnow0914/08/2025 6:34 PM KARNATAKA 2 Mins Read

ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಹೋಮಿಯೋಪಥಿ ಕೋರ್ಸ್‌ನ ಮೊದಲ ಸುತ್ತಿನ ಸೀಟು ಹಂಚಿಕೆಗೆ ಛಾಯ್ಸ್‌ ದಾಖಲಿಸುವ ಪ್ರಕ್ರಿಯೆ ಇಂದಿನಿಂದ…

ಆ.16ರಂದು ‘ಕೃಷ್ಣ ಜನ್ಮಾಷ್ಟಮಿ’ ಹಿನ್ನಲೆ: ಬೆಂಗಳೂರಲ್ಲಿ ‘ಪ್ರಾಣಿವಧೆ, ಮಾಂಸ ಮಾರಾಟ’ ನಿಷೇಧ

14/08/2025 5:53 PM

ಇದು ಅಷ್ಟ ಲಕ್ಷ್ಮಿಯರ ಮಹಾತ್ಮೆ: ಪೂಜಿಸಿ ನೋಡಿ ಅಷ್ಟೈಶ್ವರ್ಯ ಖಚಿತ

14/08/2025 5:47 PM

ನ್ಯಾಯಾಲಯಗಳಲ್ಲಿ ಕನ್ನಡ ಭಾಷೆಯ ಬಳಕೆಗೆ ನಿರ್ಬಂಧವಿಲ್ಲ: ಹೈಕೋರ್ಟ್ ನ್ಯಾಯಮೂರ್ತಿ ನರೇಂದ್ರ ಪ್ರಸಾದ್

14/08/2025 5:38 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.