ಕೋಲ್ಕತ್ತಾ: ರಾಜಕೀಯ ರ್ಯಾಲಿಗಳ ಮೂಲಕ ಅಬ್ಬರಿಸುವ ಪ್ರಧಾನಿ ನರೇಂದ್ರ ಮೋದಿ ಅವರು ಈಗ ‘ವಲಾಗರ್’ (Vlogger) ಅವತಾರ ತಾಳಿದ್ದಾರೆ. ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆಯಲಿರುವ ಬೃಹತ್ ಸಮಾವೇಶಕ್ಕೂ ಮುನ್ನ ಪ್ರಧಾನಿಯವರು ವಿಮಾನ ನಿಲ್ದಾಣದಿಂದ ಸಮಾವೇಶದ ಸ್ಥಳದವರೆಗೆ ತಮ್ಮ ಪ್ರಯಾಣವನ್ನು ಸ್ವತಃ ವೀಡಿಯೋ ಚಿತ್ರೀಕರಿಸುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.
ಸಾಮಾನ್ಯವಾಗಿ ಕ್ಯಾಮೆರಾಗಳ ಮುಂದೆ ಕಾಣಿಸಿಕೊಳ್ಳುವ ಪ್ರಧಾನಿ, ಈ ಬಾರಿ ತಾವೇ ಕ್ಯಾಮೆರಾ ಹಿಡಿದು ಸಿಲಿಗುರಿಯ ರಸ್ತೆಗಳಲ್ಲಿ ನೆರೆದಿದ್ದ ಜನಸ್ತೋಮವನ್ನು ಚಿತ್ರೀಕರಿಸಿದ್ದಾರೆ. ಕಾರಿನ ಒಳಗಿನಿಂದ ರಸ್ತೆಯ ಎರಡೂ ಬದಿಯಲ್ಲಿ ನಿಂತಿದ್ದ ಅಭಿಮಾನಿಗಳನ್ನು ವೀಡಿಯೋ ಮಾಡಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
“ನಾನು ಈಗ ಸಿಲಿಗುರಿಯಲ್ಲಿದ್ದೇನೆ, ಇಲ್ಲಿನ ಜನರ ಉತ್ಸಾಹ ಅದ್ಭುತವಾಗಿದೆ” ಎಂದು ವೀಡಿಯೋದಲ್ಲಿ ವಲಾಗರ್ ಶೈಲಿಯಲ್ಲೇ ಮಾತನಾಡುತ್ತಾ ಜನರ ಪ್ರೀತಿಯನ್ನು ಜಗತ್ತಿಗೆ ತೋರಿಸಿದ್ದಾರೆ.ಯುವ ಪೀಳಿಗೆಗೆ ಹತ್ತಿರವಾಗಲು ಪ್ರಧಾನಿ ಮೋದಿ ಅವರು ಡಿಜಿಟಲ್ ಮಾಧ್ಯಮದ ಹೊಸ ಹೊಸ ವಿಧಾನಗಳನ್ನು ಬಳಸುತ್ತಿದ್ದಾರೆ. ಈ ‘ವಲಾಗ್’ (Vlog) ಅದರ ಒಂದು ಭಾಗವಾಗಿದ್ದು, ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತನ್ನ ಪ್ರಚಾರವನ್ನು ತೀವ್ರಗೊಳಿಸಿದ್ದು, ಪ್ರಧಾನಿಯವರ ಈ ವಿಭಿನ್ನ ಶೈಲಿಯ ಪ್ರಚಾರವು ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದೆ.
Just before my massive rally in Purba Bardhaman, which has just concluded…
Noon time. 🕛
Scorching heat. 🌞
But the enthusiasm of West Bengal is 🔝🔝🔝.
🪷 all the way all across the state. pic.twitter.com/JPm4G8GvF9
— Narendra Modi (@narendramodi) April 11, 2026








