ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಪದ್ಮಶ್ರೀ ಪ್ರಶಸ್ತಿ ಸಮಾರಂಭ -1 ರಲ್ಲಿ 2024 ರ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಪದ್ಮಶ್ರೀ ಪುರಸ್ಕೃತ ದ್ರೋಣ ಭುಯಾನ್ ಅವರ ಪಾದಗಳನ್ನು ಗೌರವಯುತವಾಗಿ ಮುಟ್ಟಿ ನಮಸ್ಕರಿಸಿದ್ದಾರೆ.
ದ್ರೋಣ ಭುಯಾನ್ ಯಾರು?
ದ್ರೋಣ ಭುಯಾನ್ ಪ್ರಸಿದ್ಧ ಕಲಾವಿದ ಮತ್ತು ಓಜಪಾಲಿ ಮತ್ತು ದಿಯೋಧಾನಿ ನೃತ್ಯದ ಪ್ರತಿಪಾದಕ. ಅವರನ್ನು 2024 ರ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಹೆಸರಿಸಲಾಗಿದೆ. ಸಂಸ್ಕೃತಿ ಸಚಿವಾಲಯದಿಂದ ಗುರು ಬಿರುದು, ಅಸ್ಸಾಂ ಸಂಸ್ಕೃತ ಮಹಾಸವದಿಂದ ಜಿಬೊನ್ ಜೋರಾ ಸಾಧನಾ ಬೋಟಾ ಮತ್ತು ಅಸ್ಸಾಂ ಸರ್ಕಾರದಿಂದ ಬಿಶು ರಾಭಾ ಪ್ರಶಸ್ತಿ ಸೇರಿದಂತೆ ಅವರ ಹೆಸರಿಗೆ ಹಲವಾರು ಮಾನ್ಯತೆಗಳಿವೆ. ದರ್ರಾಂಗ್ ನಲ್ಲಿ ಸುಕ್ನಾನೈ ಓಜಪಾಲಿ ಮತ್ತು ದಿಯೋಧನಿಗೆ ತರಬೇತಿ ಕೇಂದ್ರವನ್ನು ತೆರೆಯಲು ಅವರು ಉಪಕ್ರಮ ಕೈಗೊಂಡಿದ್ದರು.
#WATCH | Delhi: President Droupadi Murmu confers Padma Shri upon Drona Bhuyan in the field of Arts. pic.twitter.com/i4JdJrJsjT
— ANI (@ANI) April 22, 2024
ರಾಷ್ಟ್ರಪತಿ ಮುರ್ಮು ಅವರು ಮಾಜಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದಲ್ಲಿ ಅಪ್ರತಿಮ ಗಾಯಕಿ ಉಷಾ ಉತುಪ್ ಮತ್ತು ಪ್ರಸಿದ್ಧ ಭರತನಾಟ್ಯ ನೃತ್ಯಗಾರ್ತಿ ಡಾ.ಪದ್ಮಾ ಅವರಂತಹ ಪ್ರಸಿದ್ಧ ವ್ಯಕ್ತಿಗಳಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.