ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯಲ್ಲಿ ಬುಧವಾರ ನಡೆದ ದಿವಂಗತ ಆಧ್ಯಾತ್ಮಿಕ ಗುರು ಶ್ರೀ ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು.
ಸಂಭ್ರಮಾಚರಣೆಯ ಭಾಗವಾಗಿ, ಪ್ರಧಾನಿ ಮೋದಿ ಪುಟ್ಟಪರ್ತಿಯ ಮಹಾಸಮಾಧಿಯಲ್ಲಿ ಸತ್ಯ ಸಾಯಿ ಬಾಬಾ ಅವರಿಗೆ ಗೌರವ ಸಲ್ಲಿಸಿದರು. ಪ್ರಧಾನಿ ಮೋದಿಯವರಿಗೆ ಅರ್ಚಕರು ವೈದಿಕ ಆಶೀರ್ವಾದ ನೀಡಿದರು.
ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ನಟಿ ಐಶ್ವರ್ಯಾ ರೈ ಬಚ್ಚನ್, ಕೇಂದ್ರ ಸಚಿವರಾದ ರಾಮ್ ಮೋಹನ್ ನಾಯ್ಡು ಕಿಂಜರಪು, ಜಿ.ಕಿಶನ್ ರೆಡ್ಡಿ ಮತ್ತು ಇತರರು ಪುಟ್ಟಪರ್ತಿಯಲ್ಲಿ ಶ್ರೀ ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ಆಚರಣೆಯಲ್ಲಿ ಭಾಗವಹಿಸಿದ್ದರು.
VIDEO | Prime Minister Narendra Modi (@narendramodi) paid tribute at the Mahasamadhi of Sri Sathya Sai Baba in Puttaparthi, Andhra Pradesh.
(Source: Third Party)#AndhraPradesh
(Full video available on PTI Videos – https://t.co/n147TvrpG7) pic.twitter.com/rxerzs5tjj
— Press Trust of India (@PTI_News) November 19, 2025








