ಅರ್ಜೆಂಟೀನಾ: ಅರ್ಜೆಂಟೀನಾ ಪ್ರವಾಸದ ಎರಡನೇ ಮತ್ತು ಅಂತಿಮ ದಿನವಾದ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ರವೀಂದ್ರನಾಥ ಟ್ಯಾಗೋರ್ ಅವರಿಗೆ ಗೌರವ ಸಲ್ಲಿಸಿದರು.
ಮೋದಿ ಅವರು ತಮ್ಮ ಐದು ರಾಷ್ಟ್ರಗಳ ಭೇಟಿಯ ಮೂರನೇ ಹಂತದಲ್ಲಿ ಇಲ್ಲಿಗೆ ಬಂದಿದ್ದಾರೆ.
“ಬ್ಯೂನಸ್ ಐರಿಸ್ನಲ್ಲಿ ನಾನು ಗುರುದೇವ ರವೀಂದ್ರನಾಥ ಟ್ಯಾಗೋರ್ ಅವರಿಗೆ ಗೌರವ ಸಲ್ಲಿಸಿದ್ದೇನೆ. ಗುರುದೇವ್ ಅವರು 1924 ರಲ್ಲಿ ಅರ್ಜೆಂಟೀನಾಕ್ಕೆ ಭೇಟಿ ನೀಡಿದರು, ಮತ್ತು ಈ ಭೇಟಿಯು ಅನೇಕ ಜನರ ಮೇಲೆ, ವಿಶೇಷವಾಗಿ ಶಿಕ್ಷಣ ತಜ್ಞರು ಮತ್ತು ವಿದ್ಯಾರ್ಥಿಗಳ ಮೇಲೆ ಶಾಶ್ವತ ಪರಿಣಾಮ ಬೀರಿತು” ಎಂದು ಪ್ರಧಾನಿ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
“ಭಾರತದಲ್ಲಿ, ನಮ್ಮ ರಾಷ್ಟ್ರದ ಇತಿಹಾಸ ಮತ್ತು ಸಂಸ್ಕೃತಿಗೆ ಗುರುದೇವ್ ಅವರ ಕೊಡುಗೆಗಳ ಬಗ್ಗೆ ನಾವು ಹೆಮ್ಮೆಪಡುತ್ತೇವೆ. ಶಿಕ್ಷಣ ಮತ್ತು ಜ್ಞಾನದ ಅನ್ವೇಷಣೆಗೆ ಅವರು ನೀಡಿದ ಒತ್ತು ವಿಶೇಷವಾಗಿ ಸ್ಪೂರ್ತಿದಾಯಕವಾಗಿದೆ” ಎಂದು ಅವರು ಹೇಳಿದರು