ದೆಹಲಿ: ಇಂದು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್(Mann Ki Baat)’ನ 91 ನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಹರ್ ಘರ್ ತಿರಂಗ’ ಅಭಿಯಾನದ ಅಡಿಯಲ್ಲಿ ಜನರು ಆಗಸ್ಟ್ 2 ಮತ್ತು 15 ರ ನಡುವೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಪ್ರೊಫೈಲ್‌ಗಳಲ್ಲಿ ʻತ್ರಿವರ್ಣ ಧ್ವಜʼ ಚಿತ್ರವನ್ನು ಬಳಸುವಂತೆ ಮನವಿ ಮಾಡಿದ್ದಾರೆ.

75ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ “ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ ಆಗಸ್ಟ್ 13-15 ವರೆಗೆ ವಿಶೇಷ ಆಂದೋಲನ ʻಹರ್ ಘರ್ ತಿರಂಗಾʼವನ್ನು ಆಯೋಜಿಸಲಾಗುತ್ತಿದೆ. ಆಗಸ್ಟ್ 2-15 ರವರೆಗೆ ನಾವೆಲ್ಲರೂ ನಮ್ಮ ಸಾಮಾಜಿಕ ಮಾಧ್ಯಮ ಪ್ರೊಫೈಲ್ ಚಿತ್ರಗಳಲ್ಲಿ ತ್ರಿವರ್ಣ ಧ್ವಜವನ್ನು ಬಳಸಿ” ಎಂದು ಮೋದಿ ಒತ್ತಾಯಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು, ಆಗಸ್ಟ್ 2 ಕ್ಕೆ ತ್ರಿವರ್ಣ ಧ್ವಜದೊಂದಿಗೆ ವಿಶೇಷ ಸಂಪರ್ಕವಿದೆ. ಈ ದಿನ ನಮ್ಮ ರಾಷ್ಟ್ರಧ್ವಜವನ್ನು ವಿನ್ಯಾಸಗೊಳಿಸಿದ ಪಿಂಗಲಿ ವೆಂಕಯ್ಯ ಅವರ ಜನ್ಮದಿನ. ಅವರಿಗೆ ನನ್ನ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಮಹಾನ್ ಕ್ರಾಂತಿಕಾರಿ ಮೇಡಂ ಕಾಮಾ ಅವರನ್ನೂ ನಾನು ನೆನಪಿಸಿಕೊಳ್ಳುತ್ತೇನೆ ಎಂದಿದ್ದಾರೆ.

BREAKING NEWS: ಆಜಾದಿ ಕಾ ಅಮೃತ್ ಮಹೋತ್ಸವ’ ಜನಾಂದೋಲನವಾಗಿ ಪರಿವರ್ತನೆ: ಮನ್ ಕಿ‌ಬಾತ್ ನಲ್ಲಿ ಪ್ರಧಾನಿ ಮೋದಿ‌ ಮಾತು

Commonwealth Games 2022: ಭಾರತದ ಸ್ಪರ್ಧಿಗಳ ಇಂದಿನ ಆಟದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ!

BIGG NEWS : ಕೊಡಗು ವೈದ್ಯಕೀಯ ಸಂಸ್ಥೆಯ 46 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢ!

Share.
Exit mobile version