ನವದೆಹಲಿ: ಭಾರತದ ಅತಿ ಉದ್ದದ ಸಮುದ್ರ ಸೇತುವೆಯಾದ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (MTHL) ಅಥವಾ ಅಟಲ್ ಸೇತುವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು. ಈ ಸೇತುವೆಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನ ಇಡಲಾಗಿದೆ. 21.8 ಕಿ.ಮೀ ಉದ್ದದ ಆರು ಪಥದ ಸೇತುವೆಯನ್ನು 18,000 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ.
#WATCH | PM Modi inaugurates Atal Bihari Vajpayee Sewari – Nhava Sheva Atal Setu in Maharashtra
Atal Setu is the longest bridge in India and also the longest sea bridge in the country. It will provide faster connectivity to Mumbai International Airport and Navi Mumbai… pic.twitter.com/2GT2OUkVnC
— ANI (@ANI) January 12, 2024
ತಪೋವನ ಮೈದಾನದಲ್ಲಿ ನಡೆದ ರಾಷ್ಟ್ರೀಯ ಯುವ ಮಹೋತ್ಸವವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಇಂದು ಭಾರತದ ಯುವ ಶಕ್ತಿಯ ದಿನ. ಗುಲಾಮಗಿರಿಯ ದಿನಗಳಲ್ಲಿ ಭಾರತವನ್ನ ಹೊಸ ಶಕ್ತಿಯಿಂದ ತುಂಬಿದ ಮಹಾನ್ ವ್ಯಕ್ತಿಗೆ ಈ ದಿನವನ್ನ ಅರ್ಪಿಸಲಾಗಿದೆ. ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯಂದು ಇಲ್ಲಿಗೆ ಬಂದಿರುವುದು ನನಗೆ ಸಂತೋಷ ತಂದಿದೆ. ರಾಷ್ಟ್ರೀಯ ಯುವ ದಿವಸದ ಶುಭಾಶಯಗಳು. ಇಂದು ಭಾರತದ ‘ನಾರಿ ಶಕ್ತಿ’ಯ ಸಂಕೇತವಾದ ರಾಜಮಾತಾ ಜೀಜಾ ಬಾಯಿ ಅವರ ಜನ್ಮದಿನ” ಎಂದರು.
ಶಿವಮೊಗ್ಗದ ‘ಫ್ರೀಡಂ ಪಾರ್ಕ್’ಗೆ ‘ಅಲ್ಲಮಪ್ರಭು’ ಹೆಸರಿಡುತ್ತೇವೆ- ಸಿಎಂ ಸಿದ್ಧರಾಮಯ್ಯ ಘೋಷಣೆ
Watch : ದೇಗುಲ ಆವರಣದಲ್ಲಿ ಸ್ವಚ್ಛತಾ ಅಭಿಯಾನ ; ಸ್ವತಃ ಆಲಯ ಶುದ್ಧಗೊಳಿಸಿ ಮಾದರಿಯಾದ ‘ಪ್ರಧಾನಿ ಮೋದಿ’