ಶಿವಮೊಗ್ಗ: ನಾವು ವಿದ್ಯುತ್ ದರವನ್ನು 36 ಪೈಸೆ ಹೆಚ್ಚಿಸಿದ್ದಕ್ಕೆ ಅಬ್ಬಬ್ಬಾ ಬಾಯಿ ಬಡಿದುಕೊಳ್ಳೋ ಬಿಜೆಪಿಗರು, ಮೋದಿ ಅವರು ಟೋಲ್ ದರವನ್ನು ಶೇ.35ರಷ್ಟು ಹೆಚ್ಚಳ ಮಾಡಿದ್ದಾರೆ. ಅದರ ಬಗ್ಗೆ ಒಬ್ಬರೇ ಒಬ್ಬರು ಮಾತನಾಡೋದಿಲ್ವಲ್ಲ ಎಂಬುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಬಿಜೆಪಿಗರ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ಇಂದು ಸಾಗರದ ನೆಹರೂ ಮೈದಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದಂತ ಅವರು, ತಾಲ್ಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆ ಬರುತ್ತಿದೆ. ಅದಕ್ಕೆ ಪಕ್ಷವನ್ನು ತಯಾರು ಮಾಡುವ ನಿಟ್ಟಿನಲ್ಲಿ ಕಾರ್ಯಕರ್ತರ ಸಭೆ ಮಾಡಲಾಗುತ್ತಿದೆ. ಗ್ರಾಮ ಪಂಚಾಯ್ತಿ ಚುನಾವಣೆ ಕೂಡ ಬರುತ್ತಿದೆ. ಪಕ್ಷದ ಅಡಿಯಲ್ಲಿ ಚಿನ್ಹೆ ಇರಲಿದೆ. ಆಗ ನಾವೇ ಬಂದು ಕ್ಯಾನ್ವಾಸ್ ಮಾಡುತ್ತೇವೆ. ನಮ್ಮ ಪಕ್ಷದಿಂದಲೇ ಟಿಕೆಟ್ ಕೊಡುತ್ತೇವೆ ಎಂದರು.
ತುಮುರಿ ಭಾಗದಲ್ಲಿ ಇಷ್ಟು ವರ್ಷ ಆದರೂ ಟವರ್ ಹಾಕೋದಕ್ಕೆ ಸಾಧ್ಯವಾಗಲಿಲ್ಲ. ಹಲೋ ಅಂದ್ರೆ ಕೇಳಿಸೋದಿಲ್ಲ. ರಸ್ತೆ ಮಾಡಿಸಿಲ್ಲ. ಅಟಲ್ ಬಿಹಾರಿ ವಾಜಪೇಯಿ ಮಾಡಿಸಿದ್ದು ಅಷ್ಟೇ. ಈ ಪಾವಿಗಳು ಎರಡು ವರ್ಷ ಆಯ್ತು ನಮ್ಮ ರಾಜ್ಯಕ್ಕೆ ಒಂದೇ ಒಂದು ರಸ್ತೆ ಕೊಟ್ಟಿಲ್ಲ. ಇವುಗಳ ಬಗ್ಗೆ ಈ ಹಾಲಪ್ಪಗೆ ಮಾತನಾಡೋಕೆ ಆಗಲ್ಲ ಎಂಬುದಾಗಿ ಕಿಡಿಕಾರಿದರು.
ನಾವು ವಿದ್ಯುತ್ ದರ 36 ಪೈಸೆ ಹೆಚ್ಚಳ ಮಾಡಿದ್ದಕ್ಕೆ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಆದರೇ ಮೋದಿ ಅವರು ಟೋಲ್ ದರವನ್ನು ದೇಶಾಧ್ಯಂತ ಶೇ.35ರಷ್ಟು ಹೆಚ್ಚಿಸಿದ್ದಾರೆ. ಶೇ.35ರಷ್ಟು ಅಂದ್ರೆ ಎಷ್ಟು ಆಯ್ತು ಲೆಕ್ಕ ಹಾಕಿ. ಅದರ ಬಗ್ಗೆ ಮಾತನಾಡ್ರಿ ಎಂಬುದಾಗಿ ಮಾಜಿ ಸಚಿವ ಹಾಲಪ್ಪ, ಸಂಸದ ಬಿವೈ ರಾಘವೇಂದ್ರ ಸೇರಿದಂತೆ ಬಿಜೆಪಿಗರನ್ನು ತರಾಟೆಗೆ ತೆಗೆದುಕೊಂಡರು.
ಏ ಹಾಲಪ್ಪ 9,000 ಮುಳುಗಡೆ ರೈತರಿಗೆ ವಿಷ ಕೊಟ್ಟ ಪಾಪಿ ನೀನು: ಶಾಸಕ ಗೋಪಾಲಕೃಷ್ಣ ಬೇಳೂರು ವಾಗ್ಧಾಳಿ