ನವದೆಹಲಿ : ದೇಶದ ಅನೇಕ ಭಾಗಗಳಲ್ಲಿ ಕಂಡುಬರುವ ಶವ್ವಾಲ್ ತಿಂಗಳ ಚಂದ್ರ ದರ್ಶನವಾಗಿದ್ದು, ನಾಳೆ ದೇಶಾದ್ಯಂತ ಆಡಂಬರದಿಂದ ಈದ್ ಆಚರಿಸಲಾಗುವುದು. ಸಧ್ಯ ದೇಶದ ಮುಸ್ಲಿಂ ಬಾಂಧವರಿಗೆ ಪ್ರಧಾನಿ ಮೋದಿ ಶುಭಾಶಯ ತಿಳಿಸಿದ್ದಾರೆ.
ಟ್ವೀಟ್ ಮೂಲಕ ಶುಭಾಶಯ ತಿಳಿಸಿರುವ ಪ್ರಧಾನಿ ಮೋದಿ, ಈದ್-ಉಲ್-ಫಿತರ್ ಶುಭಾಶಯಗಳು. ಈ ಸಂದರ್ಭವು ಸಹಾನುಭೂತಿ, ಒಗ್ಗಟ್ಟು ಮತ್ತು ಶಾಂತಿಯ ಮನೋಭಾವವನ್ನ ಮತ್ತಷ್ಟು ಹರಡಲಿ. ಪ್ರತಿಯೊಬ್ಬರೂ ಸಂತೋಷ ಮತ್ತು ಆರೋಗ್ಯವಾಗಿರಲಿ. ಈದ್ ಮುಬಾರಕ್” ಎಂದಿದ್ದಾರೆ.
Best wishes on Eid-ul-Fitr. May this occasion further spread the spirit of compassion, togetherness and peace. May everyone be happy and healthy. Eid Mubarak!
— Narendra Modi (@narendramodi) April 10, 2024
ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ, ರಂಜಾನ್ ನಂತ್ರ ಶವ್ವಾಲ್’ನ ಮೊದಲ ದಿನದಂದು ಈದ್-ಉಲ್-ಫಿತರ್ ಆಚರಿಸಲಾಗುತ್ತದೆ. ಈದ್ ದಿನದಂದು ಬೆಳಿಗ್ಗೆ ಪ್ರಾರ್ಥನೆಗಳನ್ನ ಓದುವುದರೊಂದಿಗೆ ಹಬ್ಬ ಪ್ರಾರಂಭವಾಗುತ್ತದೆ.
ರಂಜಾನ್ ಸಮಯದಲ್ಲಿ, ಶುದ್ಧ ಮನಸ್ಸಿನಿಂದ ಉಪವಾಸ ಮಾಡುವ ಮತ್ತು ಪ್ರಾರ್ಥನೆ ಸಲ್ಲಿಸುವ ಜನರ ಮೇಲೆ ಅಲ್ಲಾಹನ ಕರುಣೆ ಸಿಗುತ್ತದೆ ಎಂದು ನಂಬಲಾಗಿದೆ. ಅದೇ ಸಮಯದಲ್ಲಿ, ಉಪವಾಸವು ಈದ್ ಉಲ್ ಫಿತರ್’ನೊಂದಿಗೆ ಕೊನೆಗೊಳ್ಳುತ್ತದೆ. ಈ ದಿನ, ಜನರು ಬೆಳಿಗ್ಗೆ ಹೊಸ ಬಟ್ಟೆಗಳನ್ನ ಧರಿಸುತ್ತಾರೆ ಮತ್ತು ನಮಾಜ್ ಮಾಡುವಾಗ ಶಾಂತಿ ಮತ್ತು ನೆಮ್ಮದಿಗಾಗಿ ಪ್ರಾರ್ಥಿಸುತ್ತಾರೆ. ಅದರ ನಂತ್ರ ಅವರು ಪರಸ್ಪರ ತಬ್ಬಿಕೊಂಡು ಈದ್’ನ್ನ ಅಭಿನಂದಿಸುತ್ತಾರೆ. ಇದು ಮಾತ್ರವಲ್ಲ, ಇದರ ನಂತ್ರ ಜನರು ಪರಸ್ಪರ ಭೇಟಿ ಮಾಡಲು ಮತ್ತು ಈದ್’ನ್ನ ವಿಭಿನ್ನ ರೀತಿಯಲ್ಲಿ ಆಚರಿಸಲು ಪ್ರಾರಂಭಿಸುತ್ತಾರೆ.
BREAKING : ದೇಶಾದ್ಯಂತ ‘ಚಂದ್ರ’ ದರ್ಶನ, ನಾಳೆ ‘ಈದ್-ಉಲ್-ಫಿತರ್’ ಆಚರಣೆ
BREAKING : ದೇಶಾದ್ಯಂತ ‘ಚಂದ್ರ’ ದರ್ಶನ, ನಾಳೆ ‘ಈದ್-ಉಲ್-ಫಿತರ್’ ಆಚರಣೆ
CBSE 6, 9 ಮತ್ತು 11ನೇ ತರಗತಿಗಳಿಗೆ ರಾಷ್ಟ್ರೀಯ ಕ್ರೆಡಿಟ್ ‘ಫ್ರೇಮ್ ವರ್ಕ್’ ಆಗಿ ಪೈಲಟ್ ಪರಿಚಯ