ನವದೆಹಲಿ: ಲೋಕಸಭಾ ಸ್ಪೀಕರ್ ಹುದ್ದೆಗೆ ನಡೆದ ಚುನಾವಣೆಯಲ್ಲಿ ಎನ್ ಡಿಎ ಗೆ ಭರ್ಜರಿ ಗೆಲುವು ಸಿಕ್ಕಿದ್ದು, ಲೋಕಸಭೆಯ ಸ್ಪೀಕರ್ ಆಗಿ ಎರಡನೇ ಅವಧಿಗೆ ಬಿಜೆಪಿಯ ಅಭ್ಯರ್ಥಿ ಓಂ ಬಿರ್ಲಾ ಆಯ್ಕೆಯಾಗಿದ್ದಾರೆ.
ಕೇರಳದ ಮಾವೆಲಿಕರ ಕ್ಷೇತ್ರವನ್ನು ಎಂಟು ಅವಧಿಗೆ ಪ್ರತಿನಿಧಿಸಿರುವ ಕಾಂಗ್ರೆಸ್ ನ ಕೋಡಿಕುನ್ನಿಲ್ ಸುರೇಶ್ ಸ್ಪೀಕರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಧ್ವನಿಮತದ ಮೂಲಕ ನಡೆದ ಚುನಾಣೆಯಲ್ಲಿ 18ನೇ ಲೋಕಸಭೆಯ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆಯಾಗಿದ್ದಾರೆ.
ಎರಡನೇ ಬಾರಿಗೆ ಲೋಕಸಭೆ ಸ್ಪೀಕರ್ ಆಗಿ ಆಯ್ಕೆಯಾಗಿರುವ ಓಂ ಬಿರ್ಲಾಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. “ಗೌರವಾನ್ವಿತ ಸಭಾಧ್ಯಕ್ಷರೇ, ನೀವು ಎರಡನೇ ಬಾರಿಗೆ ಈ ಕುರ್ಚಿಯನ್ನು ಅಲಂಕರಿಸುತ್ತಿರುವುದು ಸದನದ ಸೌಭಾಗ್ಯ. ನಾನು ನಿಮ್ಮನ್ನು ಮತ್ತು ಇಡೀ ಸದನವನ್ನು ಅಭಿನಂದಿಸುತ್ತೇನೆ” ಎಂದು ಹೇಳಿದರು.
#WATCH | Prime Minister Narendra Modi says "Respected Speaker, it is the good fortune of the House that you are occupying this Chair for the second time. I congratulate you and the entire House" pic.twitter.com/vKm5b8zv4I
— ANI (@ANI) June 26, 2024
#WATCH | BJP MP Om Birla occupies the Chair of Lok Sabha Speaker after being elected as the Speaker of the 18th Lok Sabha.
Prime Minister Narendra Modi, LoP Rahul Gandhi and Parliamentary Affairs Minister Kiren Rijiju accompany him to the Chair. pic.twitter.com/zVU0G4yl0d
— ANI (@ANI) June 26, 2024
BJP MP Om Birla elected as the Speaker of the 18th Lok Sabha. pic.twitter.com/YuMqZA39WH
— ANI (@ANI) June 26, 2024