ನವದೆಹಲಿ:ನೇಪಾಳದ ಪ್ರಧಾನಿಯಾಗಿ ಮೂರನೇ ಬಾರಿಗೆ ನೇಮಕಗೊಂಡಿರುವ ಕೆ.ಪಿ.ಶರ್ಮಾ ಒಲಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.
ಉಭಯ ದೇಶಗಳ ನಡುವಿನ ಆಳವಾದ ಸ್ನೇಹವನ್ನು ಬಲಪಡಿಸಲು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು.
ಸೋಮವಾರ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, “ನೇಪಾಳದ ಪ್ರಧಾನಿಯಾಗಿ ನೇಮಕಗೊಂಡ ಕೆಪಿ ಶರ್ಮಾ ಅಭಿನಂದನೆಗಳು. ನಮ್ಮ ಎರಡೂ ದೇಶಗಳ ನಡುವಿನ ಸ್ನೇಹದ ಆಳವಾದ ಬಂಧಗಳನ್ನು ಮತ್ತಷ್ಟು ಬಲಪಡಿಸಲು ಮತ್ತು ನಮ್ಮ ಜನರ ಪ್ರಗತಿ ಮತ್ತು ಸಮೃದ್ಧಿಗಾಗಿ ನಮ್ಮ ಪರಸ್ಪರ ಲಾಭದಾಯಕ ಸಹಕಾರವನ್ನು ವಿಸ್ತರಿಸಲು ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ.” ಎಂದಿದ್ದಾರೆ.
ನೇಪಾಳದ ಅಧ್ಯಕ್ಷ ರಾಮ್ ಚಂದ್ರ ಪೌಡೆಲ್ ಅವರು ಕೆಪಿ ಶರ್ಮಾ ಒಲಿ ಅವರನ್ನು ಮುಂದಿನ ಪ್ರಧಾನಿಯಾಗಿ ನೇಮಕ ಮಾಡಿದ್ದಾರೆ. ನೇಪಾಳಿ ಕಾಂಗ್ರೆಸ್ ಬೆಂಬಲದೊಂದಿಗೆ ಈ ಹುದ್ದೆಗೆ ಹಕ್ಕು ಮಂಡಿಸಿದ ಏಕೈಕ ನಾಯಕ ಒಲಿ.
ಪುಷ್ಪಾ ಕಮಲ್ ದಹಲ್ ಅವರು ವಿಶ್ವಾಸಮತ ಯಾಚನೆಯಲ್ಲಿ ಸೋತ ನಂತರ ಅಧ್ಯಕ್ಷ ಪೌಡೆಲ್ ಶುಕ್ರವಾರ ಸಂಜೆ ನೇಪಾಳಿ ಸಂಸತ್ತಿನಲ್ಲಿ ರಾಜಕೀಯ ಪಕ್ಷಗಳಿಗೆ ಕರೆ ನೀಡಿದರು. ಸಂವಿಧಾನದ ಅನುಚ್ಛೇದ 76 (2) ರ ಪ್ರಕಾರ ಪಾಲನ್ನು ಪಡೆಯಲು ಅಧ್ಯಕ್ಷರು ಕರೆ ನೀಡಿದರು