ನವದೆಹಲಿ : ಹಿರಿಯ ಗಾಯಕ ಪಂಕಜ್ ಉಧಾಸ್ ತಮ್ಮ 72 ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಅವರು ಇಂದು ಬೆಳಿಗ್ಗೆ 11 ಗಂಟೆಗೆ ಮುಂಬೈನಲ್ಲಿ ಕೊನೆಯುಸಿರೆಳೆದ್ದಾರೆ. ಅವರನ್ನ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದ್ರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಅಧಿಕೃತ ಟಿಪ್ಪಣಿಯಲ್ಲಿ, ಗಾಯಕ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಕುಟುಂಬ ತಿಳಿಸಿದೆ.
ಆಗಲಿದ ಖ್ಯಾತ ಗಾಯಕನಿಗೆ ಪಿಎಂ ಮೋದಿ ಸಂತಾಪ ವ್ಯಕ್ತ ಪಡೆಸಿದ್ದು, “ಪಂಕಜ್ ಉಧಾಸ್ ಜಿ ಅವರ ನಿಧನಕ್ಕೆ ನಾವು ಶೋಕಿಸುತ್ತೇವೆ, ಅವರ ಗಾಯನವು ಹಲವಾರು ಭಾವನೆಗಳನ್ನ ತಿಳಿಸುತ್ತದೆ ಮತ್ತು ಅವರ ಗಜಲ್’ಗಳು ಆತ್ಮದೊಂದಿಗೆ ನೇರವಾಗಿ ಮಾತನಾಡುತ್ತವೆ. ಅವರು ಭಾರತೀಯ ಸಂಗೀತದ ದಾರಿದೀಪವಾಗಿದ್ದರು, ಅವರ ಮಧುರ ಗೀತೆಗಳು ತಲೆಮಾರುಗಳನ್ನ ಮೀರಿದವು. ವರ್ಷಗಳಲ್ಲಿ ಅವರೊಂದಿಗಿನ ನನ್ನ ವಿವಿಧ ಸಂವಾದಗಳನ್ನ ನಾನು ನೆನಪಿಸಿಕೊಳ್ಳುತ್ತೇನೆ. ಅವರ ನಿರ್ಗಮನವು ಸಂಗೀತ ಜಗತ್ತಿನಲ್ಲಿ ಎಂದಿಗೂ ತುಂಬಲಾಗದ ಶೂನ್ಯವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ” ಎಂದಿದ್ದಾರೆ.
BREAKING : ಪಾಕಿಸ್ತಾನದ ಪಂಜಾಬ್ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ‘ಮರ್ಯಮ್ ನವಾಜ್’ ಪ್ರಮಾಣ ವಚನ ಸ್ವೀಕಾರ
BREAKING: ‘ಸಂಪಾದಿತಲೇ ಪರಾಕ್’: ವರ್ಷದ ಭವಿಷ್ಯವಾಣಿ ‘ಮೈಲಾರದ ಕಾರ್ಣಿಕ ನುಡಿ’
“ನನ್ನ ಆತ್ಮಗೌರವ ಕಳೆದುಕೊಂಡು, ಆಂಧ್ರಕ್ಕಾಗಿ ಆಡೋದಿಲ್ಲ” : ಕ್ರಿಕೆಟಿಗ ‘ಹನುಮ ವಿಹಾರಿ’ ಘೋಷಣೆ