ವಾರಣಾಸಿ: ಮಾರಿಷಸ್ ಪ್ರಧಾನಿ ನವೀನ್ ಚಂದ್ರ ರಾಮಗೂಲಂ ಅವರೊಂದಿಗೆ ವಾರಣಾಸಿಯಲ್ಲಿ ವ್ಯಾಪಕ ಮಾತುಕತೆ ನಡೆಸಿದ್ದೇನೆ ಮತ್ತು ಮೂಲಸೌಕರ್ಯ, ಆರೋಗ್ಯ ರಕ್ಷಣೆ, ಡಿಜಿಟಲ್ ತಂತ್ರಜ್ಞಾನ, ಇಂಧನ, ಕಡಲ ಭದ್ರತೆ ಮತ್ತು ಹೆಚ್ಚಿನವುಗಳಲ್ಲಿ ಸಹಕಾರವನ್ನು ಗಾಢವಾಗಿಸಲು ಉಭಯ ನಾಯಕರು ಒಪ್ಪಿಕೊಂಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ
ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ಈ ನಗರದ ಸಾಂಸ್ಕೃತಿಕ ಮಹತ್ವ ಮತ್ತು ಭಾರತ ಮತ್ತು ಮಾರಿಷಸ್ ನಡುವಿನ ಬಲವಾದ ಸಾಂಸ್ಕೃತಿಕ ಸಂಬಂಧಗಳನ್ನು ಪರಿಗಣಿಸಿ ಅವರ ಕಾಶಿಗೆ ಆಗಮನವು ಇನ್ನಷ್ಟು ವಿಶೇಷವಾಗಿದೆ. ನಾವು ದ್ವಿಪಕ್ಷೀಯ ಸಹಕಾರದ ಎಲ್ಲಾ ಅಂಶಗಳನ್ನು ಪರಿಶೀಲಿಸಿದ್ದೇವೆ ಮತ್ತು ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ಮೂಲಸೌಕರ್ಯ, ಆರೋಗ್ಯ ರಕ್ಷಣೆ, ಡಿಜಿಟಲ್ ತಂತ್ರಜ್ಞಾನ, ಇಂಧನ, ಕಡಲ ಭದ್ರತೆ ಮತ್ತು ಹೆಚ್ಚಿನವುಗಳಲ್ಲಿ ಸಹಕಾರವನ್ನು ಗಾಢವಾಗಿಸಲು ನಾವು ಒಪ್ಪಿಕೊಂಡಿದ್ದೇವೆ.”
ಭಾರತ ಮತ್ತು ಮಾರಿಷಸ್ನ ಪ್ರಧಾನಿಗಳು ವಾರಣಾಸಿಯಲ್ಲಿ ಅಧಿಕೃತ ಮಾತುಕತೆ ನಡೆಸುತ್ತಿರುವುದು ಇದೇ ಮೊದಲ ಬಾರಿಗೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ತಿಳಿಸಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ಭಾರತ-ಮಾರಿಷಸ್ ಸಂಬಂಧಗಳಲ್ಲಿ ಇದು ಮಹತ್ವದ ದಿನವಾಗಿದೆ. ಇಂದು ಹೊಸ ಇತಿಹಾಸ ಪ್ರಾರಂಭವಾಗುತ್ತದೆ. ಇದೇ ಮೊದಲ ಬಾರಿಗೆ ಉಭಯ ದೇಶಗಳ ಪ್ರಧಾನಿಗಳಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಿ ನವೀನ್ ಚಂದ್ರ ರಾಮಗೂಲಂ ಅವರು ಕಾಶಿ ನಗರದಲ್ಲಿ ಅಧಿಕೃತ ಮಾತುಕತೆ ನಡೆಸುತ್ತಿದ್ದಾರೆ. ಭಾರತ ಮತ್ತು ಮಾರಿಷಸ್ ಸಂಬಂಧಗಳು ಕಾಶಿಯ ಗಲ್ಲಿಗಳು, ಗಂಗಾ ಘಾಟ್ ನೊಂದಿಗೆ ಸಂಪರ್ಕ ಹೊಂದಿವೆ. ಇಲ್ಲಿನ ಹಲವಾರು ಕುಟುಂಬಗಳ ಜನರು ಮಾರಿಷಸ್ ಗೆ ಹೋದರು.” ಎಂದಿದ್ದಾರೆ.