ಶಿವಮೊಗ್ಗ: ರಾಜ್ಯ ಸರ್ಕಾರ ಸಾಮಾಜಿಕ, ಶೈಕ್ಷಣಿಕವಾಗಿ ಜಾತಿ ಸಮೀಕ್ಷೆಗೆ ಮುಂದಾಗಿದ್ದು, ಜಿಲ್ಲೆಯ ಬಹುಸಂಖ್ಯಾತ ಸಮಾಜವಾದ ಈಡಿಗ ಮತ್ತು ದೀವರು ಕಲಂ 9ರಲ್ಲಿ ಈಡಿಗ ಎಂದು, ಕಲಂ 10ರಲ್ಲಿ ದೀವರು ಎಂದೂ ನಮೂದಿಸುವಂತೆ ಸೊರಬ ತಾಲ್ಲೂಕು ಆರ್ಯ ಈಡಿಗ (ದೀವರು) ಸಮಾಜದ ಮಾಜಿ ಅಧ್ಯಕ್ಷ ಕೆ.ಅಜ್ಜಪ್ಪ ಮನವಿ ಮಾಡಿದರು.
ಈಗಾಗಲೇ ರಾಜ್ಯ ಮಟ್ಟದಲ್ಲಿ ಆರ್ಯ ಈಡಿಗ ಸಮಾಜದೊಂದಿಗೆ ದೀವರು ಸೇರಿಕೊಂಡಿದ್ದು, ಸಂಘಗಳಿಗೆ ಈಡಿಗ ಸಂಘದ ಹೆಸರಿನಲ್ಲಿ ಆಸ್ತಿ ಇದೆ. ತಪ್ಪಾಗಿ ಜಾತಿ ನಮೂಸಿದರೆ ಮುಂದಿನ ದಿನಗಳಲ್ಲಿ ಕಾನೂನಿನ ತೊಡಕು ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮುಖ್ಯ ಜಾತಿ ಕಲಂನಲ್ಲಿ ಈಡಿಗ ಎಂತಲೂ, ಉಪಜಾತಿ ಕಲಂನಲ್ಲಿ ದೀವರು ಎಂದು ನಮೂಸುವಲ್ಲಿ ಜಾಗ್ರತೆ ವಹಿಸಿ ಎಂದು ತಿಳಿಸಿದರು.
ಭೌಗೋಳಿಕವಾಗಿ ದೀವರು ಜನಾಂಗಕ್ಕೆ ಮಹತ್ವವಿದೆ. ಯಾವುದೇ ಕಾರಣಕ್ಕೂ ದೀವರು ಸಂಸ್ಕೃತಿ ಅಳಿಯುವುದಿಲ್ಲ. ಈ ಹಿಂದಿನ ಸಮೀಕ್ಷೆಯಲ್ಲಿ ಹಾಲಕ್ಷತ್ರೀಯ ಎಂದು ನಮೂದಿಸಿ ಗೊಂದಲ ಉಂಟಾಗಿತ್ತು. ಅಂತಹ ತಪ್ಪು ಮತ್ತೆ ಈಗ ಆಗಬರಾದು. ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ದೀವರು ಈಡಿಗ ಜನಾಂಗದೊಂದಿಗೆ ಒಗ್ಗಟ್ಟಾಗಿಯೇ ಇರಬೇಕು ಎಂದರು.
ಶ್ರೀನಾರಾಯಣಗುರು ವಿಚಾರ ವೇದಿಕೆ ಅಧ್ಯಕ್ಷ ಸಂಘಟನಾ ಜಿಲ್ಲಾಧ್ಯಕ್ಷ ಪ್ರವೀಣ್ ಮಾತನಾಡಿ, ಬಲಾಢ್ಯ ಸಮುದಾಯಗಳು ಉಪಜಾತಿ ನಮೂದಿಸಬಾರದು ಎಂದು ತೀರ್ಮಾನಿಸಿವೆ.ಆದರೆ ಈಡಿಗ ಸಮಾಜವು ರಾಜ್ಯದಲ್ಲಿ 4ನೇ ಸ್ಥಾನದಲ್ಲಿದೆ. ಕೆಲವು ಸರ್ಕಾರಿ ನೌಕರರು ಜಾತಿ ವಿಷ ಬೀಜ ಬಿತ್ತಲು ಮುಂದಾಗಿದ್ದಾರೆ. ನೀವು ಜನರ ಸೇವೆ ಮಾಡುವುದನ್ನು ಬಿಟ್ಟು ರಾಜಕಾರಣ ಮಾಡುವುದನ್ನು ಬಿಡಿ. ಒಗ್ಗಟ್ಟಾಗಿರುವ ಸಮಾಜವನ್ನು ಪ್ರಜ್ಞಾವಂತರು ಮುರಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಹಿಂದಿನಿಂದಲೂ ಸರ್ಕಾರಿ ದಾಖಲೆ ಪ್ರಕಾರ ಈಡಿಗ ಎಂದು ನಮೂದಾಗಿದೆ. ಅಸ್ಮಿತೆಯ ಹೆಸರಿನಲ್ಲಿ ಒಡೆಯುವ ಕೆಲಸ ಮಾಡುತ್ತಿರುವ ಕೆಲವು ಸರ್ಕಾರಿ ನೌಕರರು ಸರ್ಕಾರದ ಕೆಲಸ ಮಾಡುವುದನ್ನು ಬಿಟ್ಟು ಸಮಾಜವನ್ನು ಒಡೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ನಾವು ಈಡಿಗರು ಎನ್ನುವುದಕ್ಕೆ ಹೆಮ್ಮೆಯಿದ್ದು ಈಡಿಗರು ಎಂದೇ ನಮೂದಿಸುವಂತೆ ತಿಳಿಸಿದರು.
ಹಿರಿಯ ಮುಖಂಡರಾದ ಹುಚ್ಚಪ್ಪ ಚಿಮಣೂರು, ಬರಗಿ ನಾಗರಾಜ್, ಕೆರೆಯಪ್ಪ ಒಡೆಯರ್, ಮಂಜಪ್ಪ ಕಡಸೂರು, ಮಂಜುನಾಥ್ ಉಪ್ಪಳ್ಳಿ, ಉಮೇಶ್ ಕುದುರೆಗಣೆ, ಸಂತೋಷ್ ಕಡಸೂರು, ಚಂದ್ರಪ್ಪ ಮೇಷ್ಟ್ರು, ರಂಗನಾಥ್ ಕುದುರೆಗಣೆ, ನಾಗರಾಜ್ ಮುಟುಗುಪ್ಪೆ ಇದ್ದರು.
ವರದಿ: ರಾಘವೇಂದ್ರ ಎಂ ಜಂಗಿನಕೊಪ್ಪ, ಸೊರಬ
BREAKING: ಮಂಡ್ಯದಲ್ಲಿ ಕಾವೇರಿ ಆರತಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಚಾಲನೆ
ಆರೋಗ್ಯ ಸಂಜೀವಿನಿ ಜಾರಿ: ಸಿಎಂ, ಡಿಸಿಎಂಗೆ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಧನ್ಯವಾದ