ಯಾವುದೇ ಕಂಪನಿಯ ಆಹಾರದ ತಿನಿಸಾದರೂ ಗ್ರಾಹಕರು ಗುಣಮಟ್ಟವನ್ನು ಇಷ್ಟ ಪಡುತ್ತಾರೆ. ಇದಕ್ಕೆ ಕಂಪನಿಗಳು ಒತ್ತು ನೀಡುತ್ತಾವೆ. ಹಾಗೆಯೇ ಆಹಾರ ಪದಾರ್ಥಗಳನ್ನು ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತದೆ. ಆದರೇ ಇಲ್ಲೊಂದು ಕಂಪನಿಯ ಪ್ರೊಡಕ್ಟ್ ಮಾತ್ರ ಮ್ಯಾನುಯಲ್ ಕಾರಣ ಪ್ಲಾಸ್ಟಿಕ್ ವಸ್ತು, ವಯರ್ ಎಲ್ಲಾ ಸಿಕ್ಕಿವೆ. ಅದ್ಯಾವುದು ಕಂಪನಿ.? ಏನುದ ಕತೆ ಅಂತ ಮುಂದೆ ಓದಿ.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿನ ಮಾರಿಗುಡಿ ದೇವಸ್ಥಾನದ ಸಮೀಪದಲ್ಲಿರುವಂತ ಗಜಾನನ ರೈಸ್ ಸ್ಟೋರ್ ನಿಂದ ವ್ಯಕ್ತಿಯೊಬ್ಬರು ಸ್ಪರ್ಶ್ ಬಾದಾಪ್ ಪೌಡರ್ ಅನ್ನು ಖರೀದಿಸಿದ್ದಾರೆ. ಅದನ್ನು ತೆಗೆದುಕೊಂಡು ಹೋಗಿ ಮಗಳಿಗೆ ನೀಡಿದ್ದಾರೆ. ಸ್ಪರ್ಶ್ ಬಾದಾಮ್ ಪೌಡರ್ ಅನ್ನು ಬಟ್ಟಲಿಗೆ ಹಾಕಿಕೊಂಡು ತಿನ್ನುವಂತ ಸಂದರ್ಭದಲ್ಲಿ ಮೊದಲಿಗೆ ಪ್ಲಾಸ್ಟಿಕ್ ವಯರ್ ಮಾದರಿಯ ವಸ್ತುವೊಂದು ಪತ್ತೆಯಾಗುತ್ತದೆ. ಅದನ್ನು ಪೋಷಕರ ಗಮನಕ್ಕೆ ತಂದಿದ್ದಾರೆ. ಇದನ್ನು ಕಂಡಂತ ಅವರಿಗೆ ಅಚ್ಚರಿಯಾಗಿದೆ. ಕೆಲವೊಮ್ಮೆ ಹೀಗೆ ಆಗುತ್ತದೆ ಅಂತ ಸಮಾಧಾನಿಸಿ, ತೆಗೆದು ಬಿಸಾಡಿದ ಬಳಿಕ, ಬಾದಾಮ್ ಪೌಡರ್ ತಿನ್ನಲು ಹೇಳಿದ್ದಾರೆ.
ಆದರೇ ಇನ್ನುಳಿದಂತ ಸ್ಪರ್ಶ್ ಕಂಪನಿಯ ಬಾದಾಮ್ ಪೌಡರ್ ತಿನ್ನುವ ವೇಳೆಯಲ್ಲಿ ಮತ್ತೆ ಪ್ಲಾಸ್ಟಿಕ್ ಮಾದರಿಯ ವಸ್ತುವೊಂದು ಪತ್ತೆಯಾಗಿದೆ. ಆಗಲೂ ಪೋಷಕರಿಗೆ ಪುತ್ರಿ ತೆಗೆದು ತೋರಿಸಿದ್ದಾರೆ. ಕೂಡಲೇ ಸ್ಪರ್ಶ್ ಕಂಪನಿಯ ಬಾದಾಮ್ ಪೌಡರ್ ಮೇಲಿದ್ದಂತ ಕಸ್ಟಮರ್ ಕೇರ್ ಸಂಖ್ಯೆಗೆ ಕರೆ ಮಾಡಿ, ದೂರು ಸಲ್ಲಿಸುತ್ತಾರೆ. ಬಸವನಗೌಡ ಎನ್ನುವಂತ ಸ್ಪರ್ಶ್ ಕಂಪನಿಯ ಪ್ರತಿನಿಧಿ ಗ್ರಾಹಕರನ್ನು ಭೇಟಿಯಾಗಿ, ಮಾಹಿತಿಯನ್ನು ಪಡೆಯಲಾಗುತ್ತದೆ.
ಸ್ಪರ್ಶ್ ಕಂಪನಿಯ ಪ್ರತಿನಿಧಿ ಹೇಳುವುದು ಬಾದಾಮ್ ಪೌಡರ್ ಅನ್ನು ಮ್ಯಾನುಯಲ್ ಆಗಿ ತಯಾರು ಮಾಡಲಾಗುತ್ತದೆ. ಕೆಲವೊಮ್ಮೆ ಹೀಗೆ ವಸ್ತುಗಳು ಸಿಗುತ್ತಾವೆ. ಪ್ಯಾಕಿಂಗ್ ಮಾಡೋರಿಗೆ ತಿಳಿಸಲಾಗಿದೆ. ಮುಂದೆ ಹೀಗೆ ಆಗದಂತೆ ಕ್ರಮವಹಿಸಲಾಗುತ್ತದೆ ಎಂಬುದಾಗಿ ಸಬೂಬು ಹೇಳುತ್ತಾರೆ. ಹಾಗಾದ್ರೇ ಪ್ಲಾಸ್ಟಿಕ್ ವಸ್ತು, ವಯರ್ ಮಾದರಿಯದ್ದು ಕಾಣದೇ ತಿಂದಿದ್ದರೇ ಮುಂದಾಗಲಿದ್ದ ಅನಾಹುತಕ್ಕೆ ಹೊಣೆ ಯಾರು ಎನ್ನುವುದನ್ನು ಕಂಪನಿಯೇ ಸ್ಪಷ್ಟ ಪಡಿಸಬೇಕಿದೆ.
ಇನ್ನೂ ಸ್ಪರ್ಶ್ ಕಂಪನಿಯ ವಿರುದ್ಧ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡುವುದಾಗಿ ಗ್ರಾಹಕರು ತಿಳಿಸಿದ್ದಾರೆ. ಅಲ್ಲದೇ ಆಹಾರ ಗುಣಮಟ್ಟ ಇಲಾಖೆಯ ಅಧಿಕಾರಿಗಳಿಗೆ, ಸಂಬಂಧಿಸಿದಂತ ಆಹಾರ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿ, ಸೂಕ್ತ ಕ್ರಮಕ್ಕೆ ಮನವಿ ಮಾಡುವುದಾಗಿ ಹೇಳಿದ್ದಾರೆ.
ರಾಜ್ಯ ಸರ್ಕಾರದಿಂದ ಪರಿವರ್ತಿತ, ಅಭಿವೃದ್ಧಿಗೊಳ್ಳದ ಭೂಮಿ ನೋಂದಣಿಗೆ ಮಹತ್ವದ ಆದೇಶ