ಶಿವಮೊಗ್ಗ: ಆಗಸ್ಟ್.15ರಂದು ಸಾಗರ ನಗರಸಭೆಯ ವ್ಯಾಪ್ತಿಯಲ್ಲಿ ಅದ್ಧೂರಿಯಾಗಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಡೆಸಲಾಗುತ್ತದೆ. ಸ್ವಾತಂತ್ರ್ಯ ದಿನಾಚರಣೆಯ ಸುಸಂದರ್ಭದಲ್ಲಿ ಸಾರ್ವಜನಿಕರು ಪ್ಲಾಸ್ಟಿಕ್ ಧ್ವಜವನ್ನು ಬಳಸದಂತೆ ನಗರಸಭೆ ಆಯುಕ್ತ ಹೆಚ್.ನಾಗಪ್ಪ ಮನವಿ ಮಾಡಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ನಗರಸಭೆ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್.15ರಂದು ಆಚರಿಸಲಾಗುತ್ತದೆ. ಗಣಪತಿ ಕೆರೆಯ ಸಮೀಪದ ಬೃಹತ್ ಧ್ವಜ ಸ್ಥಂಭದ ಬಳಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾಗರ ತಾಲ್ಲೂಕಿನ ಶಾಸಕರಾದಂತ ಬೇಳೂರು ಗೋಪಾಲಕೃಷ್ಣ ಅವರು ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಅಲ್ಲದೇ ನಗರಸಭೆಯ ಸದಸ್ಯರು ಸೇರಿದಂತೆ ಇತರೆ ಮುಖಂಡರು ಉಪಸ್ಥಿತರಿರಲಿದ್ದಾರೆ ಎಂದರು.
ಆಗಸ್ಟ್.15ರ ಸ್ವಾತಂತ್ರ್ಯ ಸಂಭ್ರಮದ ವೇಳೆಯಲ್ಲಿ ಸಾಗರ ನಗರದ ಜನತೆ ಪ್ಲಾಸ್ಟಿಕ್ ಧ್ವಜವನ್ನು ಬಳಸಬಾರದು. ಇದು ಕೋರ್ಟ್ ಆದೇಶ ಕೂಡವಾಗಿದೆ. ಒಂದು ವೇಳೆ ಬಳಕೆ ಮಾಡಿದರೇ ಅಂತವರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಲು ಅವಕಾಶವಿದೆ. ಸಾರ್ವಜನಿಕರು ಬಟ್ಟೆಯಿಂದ ಮಾಡಿದಂತ ರಾಷ್ಟ್ರಧ್ವಜವನ್ನು ಬಳಕೆ ಮಾಡಿ, ಪರಿಸರವನ್ನು ಸ್ವಚ್ಛಂದವಾಗಿ ಇರಿಸುವಂತೆ ಮನವಿ ಮಾಡಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
BREAKING : ನಟ ದರ್ಶನ್ ಸೇರಿದಂತೆ 6 ಆರೋಪಿಗಳ ಬಟ್ಟೆ ಮೇಲೆ ರೇಣುಕಾ ಸ್ವಾಮಿಯ ರಕ್ತದ ಕಲೆ ಪತ್ತೆ!
BREAKING: ಶಿರೂರು ಬಳಿಯ ಗುಡ್ಡ ಕುಸಿತ ಕೇಸ್: ಗಂಗಾವಳಿ ನದಿಯಲ್ಲಿ ಲಾರಿಯ ಹಲವು ಬಿಡಿಭಾಗಗಳು ಪತ್ತೆ