ಬೆಂಗಳೂರು: PGDENTAL-25 ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟವಾಗಿದ್ದು, ಸೀಟು ಪಡೆದವರು ಛಾಯ್ಸ್ ದಾಖಲಿಸಿ, ಶುಲ್ಕ ಪಾವತಿಸಲು ಜುಲೈ 17 ಕೊನೆ ದಿನವಾಗಿದೆ ಎಂಬುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಅವರು, ಛಾಯ್ಸ್-1 ಮತ್ತು 2 ಆಯ್ಕೆ ಮಾಡಿದ ಅಭ್ಯರ್ಥಿಗಳು ಮಾತ್ರ ಶುಲ್ಕ ಪಾವತಿಸಬೇಕು. ಛಾಯ್ಸ್- 1 ಆಯ್ಕೆ ಮಾಡಿದವರು ಜು.16 ಮತ್ತು 17 ರಂದು ಮೂಲ ದಾಖಲೆಗಳನ್ನು ಸಲ್ಲಿಸಿ, ಪ್ರವೇಶ ಪತ್ರಗಳನ್ನು ಸಲ್ಲಿಸಬಹುದು. ಜು.18ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದಿದ್ದಾರೆ.
NRI Ward ಕ್ಯಾಟಗರಿಯಡಿ ಸೀಟು ಪಡೆದವರ ಶುಲ್ಕವನ್ನು ಪ್ರಾಯೋಜಿಸಿದ ವ್ಯಕ್ತಿಯ ಬ್ಯಾಂಕ್ ಖಾತೆಯಿಂದಲೇ ಕೆಇಎ ಖಾತೆಗೆ ಹಣ ಸಂದಾಯ ಮಾಡಬೇಕು. ಒಂದು ವೇಳೆ ಸದ್ಯಕ್ಕೆ ಆ ರೀತಿ ಹಣ ವರ್ಗಾವಣೆ ಮಾಡಿಸಲು ಸಾಧ್ಯವಾಗದಿದ್ದರೆ ಕೆಇಎಗೆ ಡಿ.ಡಿ ಸಲ್ಲಿಸಿ, ಪ್ರವೇಶ ಪತ್ರ ಪಡೆಯಬಹುದು. ಪ್ರಾಯೋಜಕತ್ವ ನೀಡಿದ ವ್ಯಕ್ತಿಯ ಖಾತೆಯಿಂದ ಕೆಇಎ ಅಕೌಂಟ್ ಗೆ ಹಣ ಸಂದಾಯವಾದ ನಂತರ ಆ ಡಿ.ಡಿಯನ್ನು ವಾಪಸ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.
#PGDENTAL-25 ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟವಾಗಿದ್ದು, ಸೀಟು ಪಡೆದವರು ಛಾಯ್ಸ್ ದಾಖಲಿಸಿ, ಶುಲ್ಕ ಪಾವತಿಸಲು ಜುಲೈ 17 ಕೊನೆ ದಿನ. ಛಾಯ್ಸ್-1 ಮತ್ತು 2 ಆಯ್ಕೆ ಮಾಡಿದ ಅಭ್ಯರ್ಥಿಗಳು ಮಾತ್ರ ಶುಲ್ಕ ಪಾವತಿಸಬೇಕು. ಛಾಯ್ಸ್- 1 ಆಯ್ಕೆ ಮಾಡಿದವರು ಜು.16 ಮತ್ತು 17 ರಂದು ಮೂಲ ದಾಖಲೆಗಳನ್ನು ಸಲ್ಲಿಸಿ, ಪ್ರವೇಶ ಪತ್ರಗಳನ್ನು… pic.twitter.com/SAdXJNW8vw
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) July 15, 2025
BREAKING: ಒಕ್ಕಲಿಗೆ ಸಂಪ್ರದಾಯದಂತೆ ಬಿ.ಸರೋಜಾದೇವಿ ಅಂತ್ಯಕ್ರಿಯೆ: ‘ಅಭಿನಯ ಸರಸ್ವತಿ’ ಇನ್ನೂ ನೆನಪು ಮಾತ್ರ
Watch Video: ಶುಭಾಂಶು ಶುಕ್ಲಾ ಭೂಮಿಗೆ ಮರಳಿ ತಂದ ಡ್ರ್ಯಾಗನ್ ಬಾಹ್ಯಾಕಾಶ ನೌಕೆ: ಇಲ್ಲಿದೆ ವೀಡಿಯೋ