ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಅವೈಜ್ಞಾನಿಕ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಿ ರಾಜ್ಯದ ಆರ್ಥಿಕತೆಯನ್ನು ದಿವಾಳಿ ಮಾಡಿದ್ದು, ಈಗ ಪೆಟ್ರೋಲ್, ಡಿಸೆಲ್ ದರ ಏರಿಕೆ ಮಾಡಿ ರಾಜ್ಯದ ಜನತೆಗೆ ದ್ರೋಹ ಮಾಡಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ ಮಾಡಿರುವ ಅವರು, ರಾಜ್ಯ ಸರ್ಕಾರ ನಡೆಸಲು ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುವ ಕೆಲಸ ಮಾಡಿದೆ. ನಾವಿದ್ಸಾಗ ಡಿಸೆಲ್ ಬೆಲೆ 7 ರೂ ಕಡಿಮೆ ಮಾಡಿದ್ದೇವು, ಇವರು ನಾಲ್ಕು ರೂಪಾಯಿ ಹೆಚ್ಚಳ ಮಾಡಿದ್ದಾರೆ. ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿರುವುದು ಇದರಿಂದ ಸ್ಪಷ್ಟವಾಗಿದೆ.
ಈಗಾಗಲೇ ವಿದ್ಯುತ್ ದರ, ಮೊಟಲ್ ವೆಹಿಕಲ್ ದರ ಏರಿಕೆ ಸಾಮಾನ್ಯ ಜನರಿಗೆ ನೇರ ಬರೆ ಎಳೆದಿದ್ದಾರೆ. ಬಜೆಟ್ ನಲ್ಲಿ ಘೊಷಣೆ ಮಾಡದೇ, ಈಗ ಈ ರೀತಿ ಪೆಟ್ರೋಲ್ ಡಿಸೆಲ್ ದರ ಏರಿಸಿರುವುದು ಒಂದು ರೀತಿಯಲ್ಲಿ ಜನತೆಗೆ ದ್ರೋಹ ಮಾಡಿದಂತೆ. ನಾವು ಇದನ್ನು ಉಗ್ರವಾಗಿ ಖಂಡಿಸುತ್ತೇವೆ. ಕೂಡಲೆ ಸರ್ಕಾರ ಆದೇಶ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಲ್ಲಿ ಪ್ರತಿದಿನ ಕುಡಿಯುವ ನೀರಿನ ಪರೀಕ್ಷೆ ಕಡ್ಡಾಯ: ಡಿಸಿಎಂ ಡಿ.ಕೆ ಶಿವಕುಮಾರ್ ಖಡಕ್ ಆದೇಶ
BIG NEWS: ‘ಸಚಿವ ದಿನೇಶ್ ಗುಂಡೂರಾವ್’ ದಿಟ್ಟ ಹೆಜ್ಜೆ: ‘ಆರೋಗ್ಯ ಇಲಾಖೆ ನೌಕರ’ರನ್ನು ‘ಕೌನ್ಸಿಲಿಂಗ್’ ಮೂಲಕ ವರ್ಗಾವಣೆ