ಸ್ಲೋವಾಕಿಯಾ:ಸ್ಲೋವಾಕಿಯಾದ ಸ್ಟ್ಯಾಟಿಸ್ಟಿಕಲ್ ಆಫೀಸ್ ಪ್ರಕಟಿಸಿದ ಪ್ರಾಥಮಿಕ ಫಲಿತಾಂಶಗಳ ಪ್ರಕಾರ, ಶನಿವಾರ ನಡೆದ ಅಧ್ಯಕ್ಷೀಯ ಚುನಾವಣೆಯ ಎರಡನೇ ಸುತ್ತಿನಲ್ಲಿ ಸ್ಲೋವಾಕಿಯಾದ ರಾಷ್ಟ್ರೀಯ ಮಂಡಳಿಯ ಹಾಲಿ ಸ್ಪೀಕರ್ ಪೀಟರ್ ಪೆಲ್ಲೆಗ್ರಿನಿ ಜಯಗಳಿಸಿದ್ದಾರೆ.
ಪೆಲ್ಲೆಗ್ರಿನಿ ಶೇ.53.38ರಷ್ಟು ಮತಗಳನ್ನು ಪಡೆದರೆ, ಮಾಜಿ ವಿದೇಶಾಂಗ ಸಚಿವ ಇವಾನ್ ಕೊರ್ಕೊಕ್ ಶೇ.46.61ರಷ್ಟು ಮತಗಳನ್ನು ಪಡೆದಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
48 ವರ್ಷದ ಪೆಲ್ಲೆಗ್ರಿನಿ 2018 ರಿಂದ 2020 ರವರೆಗೆ ಸ್ಲೋವಾಕಿಯಾದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಕೊರ್ಕೊಕ್ 2020 ರಿಂದ 2022 ರವರೆಗೆ ದೇಶದ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದರು.
ಮಾರ್ಚ್ 23 ರಂದು ಒಂಬತ್ತು ಅಭ್ಯರ್ಥಿಗಳನ್ನು ಒಳಗೊಂಡ ಮೊದಲ ಸುತ್ತಿನಲ್ಲಿ, ಕೊರ್ಕೊಕ್ ಶೇಕಡಾ 42.51 ರಷ್ಟು ಮತಗಳನ್ನು ಪಡೆದರೆ, ಪೆಲ್ಲೆಗ್ರಿನಿ ಶೇಕಡಾ 37.02 ರಷ್ಟು ಮತಗಳನ್ನು ಪಡೆದರು.
ಸ್ಲೋವಾಕಿಯಾದ ಅಧ್ಯಕ್ಷರನ್ನು ನೇರ ಚುನಾವಣೆಯಲ್ಲಿ ಆಯ್ಕೆ ಮಾಡಲಾಗುತ್ತದೆ. ಹಾಲಿ ಅಧ್ಯಕ್ಷ ಜುಜಾನಾ ಕಪುಟೋವಾ ಅವರ 5 ವರ್ಷಗಳ ಅಧಿಕಾರಾವಧಿ ಈ ವರ್ಷದ ಜೂನ್ 15 ರಂದು ಕೊನೆಗೊಳ್ಳಲಿದ್ದು, ಅವರು ಮರು ಚುನಾವಣೆಗೆ ಸ್ಪರ್ಧಿಸಿಲ್ಲ.