Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಶೀಘ್ರದಲ್ಲೇ ಒಪ್ಪಂದ ಮಾಡಿಕೊಳ್ಳದಿದ್ರೆ, ಇರಾನ್’ನ ಖಾರ್ಗ್ ದ್ವೀಪ ಸ್ಫೋಟಿಸ್ತೇವೆ ; ಟ್ರಂಪ್ ಬೆದರಿಕೆ!

30/03/2026 6:02 PM

ಒಂದು ವರ್ಷದೊಳಗೆ ವಿದ್ಯುತ್, ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರ: ಮದ್ದೂರು ಶಾಸಕ ಕೆ.ಎಂ.ಉದಯ್

30/03/2026 6:01 PM

ತೀವ್ರ ಸುಟ್ಟಗಾಯಗಳಿಂದ ಗಂಭೀರ ಸ್ಥಿತಿಗೆ ತಲುಪಿದ್ದ ಐವರಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಸಕಾಲಿಕ ಚಿಕಿತ್ಸೆ

30/03/2026 5:55 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಒಂದು ವರ್ಷದೊಳಗೆ ವಿದ್ಯುತ್, ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರ: ಮದ್ದೂರು ಶಾಸಕ ಕೆ.ಎಂ.ಉದಯ್
KARNATAKA

ಒಂದು ವರ್ಷದೊಳಗೆ ವಿದ್ಯುತ್, ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರ: ಮದ್ದೂರು ಶಾಸಕ ಕೆ.ಎಂ.ಉದಯ್

By kannadanewsnow0930/03/2026 6:01 PM

ಮಂಡ್ಯ : ಕ್ಷೇತ್ರದಲ್ಲಿ ಒಂದು ವರ್ಷದೊಳಗೆ ಶಾಶ್ವತವಾಗಿ ವಿದ್ಯುತ್ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆ, ರಾಜೇಗೌಡನದೊಡ್ಡಿ ಗ್ರಾಮಗಳಲ್ಲಿ ಸೋಮವಾರ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಇನ್ನೊಂದು ವರ್ಷದಲ್ಲಿ ತಾಲೂಕಿನ ಕೆ.ಹೊನ್ನಲಗೆರೆ, ಕೆ.ಬೆಳ್ಳೂರು, ಕೂಳಗೆರೆ ಹಾಗೂ ತಾಲೂಕಿನಾದ್ಯಂತ ತಲೆದೋರಿರುವ ವಿದ್ಯುತ್, ನೀರಾವರಿ ಸಮಸ್ಯೆಗೆ ಶಾಶ್ವತವಾಗಿ ಮುಕ್ತಿ ನೀಡಲಾಗುವುದು ಎಂದರು.

ಈಗಾಗಲೇ ಕೂಳಗೆರೆ ಗ್ರಾಮದಲ್ಲಿ 66 ಕೆವಿ ಸಬ್ ಸ್ಟೇಷನ್ ಹಾಗೂ ಸೋಮನಹಳ್ಳಿ ಬಳಿ 220 ಕೆವಿ ಸಬ್ ಸ್ಟೇಷನ್ ನಿರ್ಮಾಣ ಮಾಡುತ್ತಿದ್ದು, ಇದರ ಜತೆಗೆ ಬನ್ನಹಳ್ಳಿ ಏತ ನೀರಾವರಿ ಯೋಜನೆಯೂ ಅಂತಿಮ ಹಂತಕ್ಕೆ ತಲುಪಿದ್ದು, ಎರಡು ಮೂರು ತಿಂಗಳಲ್ಲಿ ಚಾಲನೆ ನೀಡಲಾಗುವುದು ಇದರಿಂದ 18 ಕೆರೆಗಳಿಗೆ ನೀರು ತುಂಬಿಸುವ ಮೂಲಕ ಅಂತರ್ಜಲ ವೃದ್ಧಿಗೆ, ಕುಡಿಯುವ ನೀರು ಹಾಗೂ ಕೃಷಿಗೂ ನೀರಿನ ಸಮಸ್ಯೆ ಉಂಟಾಗುವುದಿಲ್ಲ ಎಂದರು.

ಬೇಸಿಗೆಯಲ್ಲಿ ವಿದ್ಯುತ್, ಕುಡಿಯುವ ನೀರು ಸಮಸ್ಯೆಯಾಗದಂತೆ ಈಗಾಗಲೇ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಸೂಚನೆ ನೀಡಲಾಗಿದೆ. ರೈತರಿಗೆ ಹಗಲು ಹೊತ್ತಿನಲ್ಲಿಯೇ ವಿದ್ಯುತ್ ನೀಡಬೇಕು ಹಾಗೂ ಕುಡಿಯುವ ನೀರಿನ ಯೋಜನೆಗೆ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಭರವಸೆ ನೀಡಿದರು.

ಅಭಿವೃದ್ಧಿಯಿಂದ ವಂಚಿತವಾಗಿರುವ ಗ್ರಾಮಗಳನ್ನು ಆದ್ಯತೆ ಮೇರೆಗೆ ಪಟ್ಟಿ ಮಾಡಿಕೊಂಡು ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಮತ್ತಷ್ಟು ವಿಶೇಷ ಅನುದಾನ ತಂದು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ಮುಖಂಡರಾದ ಪುಟ್ಟಸ್ವಾಮಿ, ಅಪ್ಪಾಜಿಗೌಡ, ಮತ್ತುರಾಜು, ಬಸವ, ದೇವರಾಜು, ಮಹೇಂದ್ರ, ಸಿದ್ದರಾಮು, ಪ್ರಜ್ವಲ್, ಪ್ರದೀಪ್, ಶಿವರಾಮು, ಶಿವಮಾದು, ಕಾಡಯ್ಯ, ಶಿವು, ವೈರಮುಡಿ, ಕೆಂಪಣ್ಣ, ಅಂಗಡಿ ಕೃಷ್ಣ, ನಾಗೇಶ್, ಕುಮಾರ್, ಸಂತೋಷ್, ನಂಜುಂಡ, ಯತೀಶ್, ಹರೀಶ್, ರವೀಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ವರದಿ : ಗಿರೀಶ್ ರಾಜ್, ಮಂಡ್ಯ

ಬಂತು ‘ಡೆಂಗ್ಯೂ ಲಸಿಕೆ’: ಭಾರತದಲ್ಲಿ ಜಪಾನ್‌ನ ‘ಟಕೆಡಾ’ ಲಸಿಕೆ ತುರ್ತು ಬಳಕೆಗೆ ತಜ್ಞರ ಸಮಿತಿ ಒಪ್ಪಿಗೆ! Dengue Vaccine

Good News ; ಸಾಲಗಾರರಿಗೆ ಭರ್ಜರಿ ಗುಡ್ ನ್ಯೂಸ್ ; 6 ತಿಂಗಳವರೆಗೆ ‘EMI ಪಾವತಿ’ ವಿನಾಯಿತಿಗೆ ಸರ್ಕಾರ ನಿರ್ಧಾರ!

Share. Facebook Twitter LinkedIn WhatsApp Email

Related Posts

ತೀವ್ರ ಸುಟ್ಟಗಾಯಗಳಿಂದ ಗಂಭೀರ ಸ್ಥಿತಿಗೆ ತಲುಪಿದ್ದ ಐವರಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಸಕಾಲಿಕ ಚಿಕಿತ್ಸೆ

30/03/2026 5:55 PM2 Mins Read

ಅಡಿಕೆ ಧಾರಣೆ: ಶಿವಮೊಗ್ಗ ಮತ್ತು ರಾಜ್ಯದ ಇತರೆ ಮಾರುಕಟ್ಟೆಗಳಲ್ಲಿ ವಾರದ ಮೊದಲ ದಿನವೇ ಅಡಿಕೆ ಬೆಲೆ ಭಾರಿ ಏರಿಕೆ.!

30/03/2026 5:34 PM3 Mins Read

BREAKING : ಒಬ್ಬ ಶಾಸಕರಿಗೆ 3 ಟಿಕೆಟ್ ಕೊಡುವುದಾಗಿ ‘KSCA’ ಒಪ್ಪಿಗೆ : ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ

30/03/2026 5:17 PM1 Min Read
Recent News

BREAKING : ಶೀಘ್ರದಲ್ಲೇ ಒಪ್ಪಂದ ಮಾಡಿಕೊಳ್ಳದಿದ್ರೆ, ಇರಾನ್’ನ ಖಾರ್ಗ್ ದ್ವೀಪ ಸ್ಫೋಟಿಸ್ತೇವೆ ; ಟ್ರಂಪ್ ಬೆದರಿಕೆ!

30/03/2026 6:02 PM

ಒಂದು ವರ್ಷದೊಳಗೆ ವಿದ್ಯುತ್, ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರ: ಮದ್ದೂರು ಶಾಸಕ ಕೆ.ಎಂ.ಉದಯ್

30/03/2026 6:01 PM

ತೀವ್ರ ಸುಟ್ಟಗಾಯಗಳಿಂದ ಗಂಭೀರ ಸ್ಥಿತಿಗೆ ತಲುಪಿದ್ದ ಐವರಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಸಕಾಲಿಕ ಚಿಕಿತ್ಸೆ

30/03/2026 5:55 PM

BREAKING : ಭಾರತದಲ್ಲಿ ‘ಡೆಂಗ್ಯೂ ಲಸಿಕೆ’ ತುರ್ತು ಬಳಕೆಗೆ ತಜ್ಞರ ಸಮಿತಿ ಅನುಮತಿ |Dengue vaccine

30/03/2026 5:51 PM
State News
KARNATAKA

ಒಂದು ವರ್ಷದೊಳಗೆ ವಿದ್ಯುತ್, ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರ: ಮದ್ದೂರು ಶಾಸಕ ಕೆ.ಎಂ.ಉದಯ್

By kannadanewsnow0930/03/2026 6:01 PM KARNATAKA 1 Min Read

ಮಂಡ್ಯ : ಕ್ಷೇತ್ರದಲ್ಲಿ ಒಂದು ವರ್ಷದೊಳಗೆ ಶಾಶ್ವತವಾಗಿ ವಿದ್ಯುತ್ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ…

ತೀವ್ರ ಸುಟ್ಟಗಾಯಗಳಿಂದ ಗಂಭೀರ ಸ್ಥಿತಿಗೆ ತಲುಪಿದ್ದ ಐವರಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಸಕಾಲಿಕ ಚಿಕಿತ್ಸೆ

30/03/2026 5:55 PM

ಅಡಿಕೆ ಧಾರಣೆ: ಶಿವಮೊಗ್ಗ ಮತ್ತು ರಾಜ್ಯದ ಇತರೆ ಮಾರುಕಟ್ಟೆಗಳಲ್ಲಿ ವಾರದ ಮೊದಲ ದಿನವೇ ಅಡಿಕೆ ಬೆಲೆ ಭಾರಿ ಏರಿಕೆ.!

30/03/2026 5:34 PM

BREAKING : ಒಬ್ಬ ಶಾಸಕರಿಗೆ 3 ಟಿಕೆಟ್ ಕೊಡುವುದಾಗಿ ‘KSCA’ ಒಪ್ಪಿಗೆ : ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ

30/03/2026 5:17 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.