ಬೆಂಗಳೂರು ಶೇ.40 ಕ್ಕಿಂತ ಕಡಿಮೆ ಅಂಗವಿಕಲತೆ ಹೊಂದಿದ್ದರೂ ಪ್ರಮಾಣಪತ್ರ ಹಾಗೂ ಅಂಗವಿಕಲರ ವಿಶಿಷ್ಟ ಗುರುತಿನ ಚೀಟಿ ನೀಡುವಂತೆ ಆರೋಗ್ಯ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಯಾವುದೇ ವ್ಯಕ್ತಿ ಶೇ 40ಕ್ಕಿಂತ ಕಡಿಮೆ ಅಂಗವಿಕಲತೆ ಹೊಂದಿದ್ದರೂ ಅವರಿಗೆ ಅಂಗವೈಕಲ್ಯ ಪ್ರಮಾಣ ಪತ್ರ ಹಾಗೂ ಯುಡಿಐಡಿ ಕಾರ್ಡ್ (ಅಂಗವಿಕಲರ ವಿಶಿಷ್ಟ ಗುರುತಿನ ಚೀಟಿ) ವಿತರಣೆ ಮಾಡಬಹುದು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
ಅಧಿಸೂಚಿತ ವೈದ್ಯಕೀಯ ಅಧಿಕಾರಿಗಳು ಅಂಗವೈಕ್ಯಲ್ಯ ಪ್ರಮಾಣ ಪತ್ರಗಳು ಹಾಗೂ ಯುಡಿಐಡಿ ಕಾರ್ಡ್ ಗಳನ್ನು ಯುಡಿಐಡಿ ಪೋರ್ಟಲ್ ಮೂಲಕ ನೀಡಲು ಸೂಚನೆ ನೀಡಿದೆ.