ಬೆಂಗಳೂರು: ಮೋದಿ ಮೋದಿ ಎನ್ನುವ ಯುವಕರ ಕಪಾಳಕ್ಕೆ ಹೊಡಿಯಿರಿ ಎನ್ನುವ ಸಚಿವರ ಕಪಾಳಕ್ಕೆ ಜನತೆ ಲೋಕಸಭಾ ಚುನಾವಣೆಯಲ್ಲಿ ಬಾರಿಸುವುದು ಶತಸಿದ್ಧ ಎಂಬುದಾಗಿ ಬಿಜೆಪಿ ಕರ್ನಾಟಕ ಹೇಳಿದೆ.
ಈ ಕುರಿತು ಎಕ್ಸ್ ಮಾಡಿದ್ದು, ಅಯೋಗ್ಯ ಕರ್ನಾಟಕ ಕಾಂಗ್ರೆಸ್ ನಾಯಕರು ನಮ್ಮದು ಎಲುಬಿಲ್ಲದ ನಾಲಿಗೆ ಎನ್ನುವುದನ್ನು ತೋರಿಸಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಹಿಡಿದು ನಾಲಾಯಕ್ ಕೈ ಶಾಸಕರು ನಾಲಿಗೆ ಹರಿಬಿಡುತ್ತಿದ್ದಾರೆ ಎಂದು ಕಿಡಿಕಾರಿದೆ.
ಕೈಲಾಗದವನು ಮೈ ಪರಚಿಕೊಂಡ ಎನ್ನುವಂತೆ ಕೊಪ್ಪಳದಲ್ಲಿ ಸಚಿವ ಶಿವರಾಜ್ ತಂಗಡಗಿ ಅವರು ಹತಾಶೆಗೊಂಡು ತಮ್ಮ ವ್ಯಕ್ತಿತ್ವವನ್ನು ಬೆತ್ತಲಾಗಿಸಿಕೊಂಡಿದ್ದಾರೆ. ಮೋದಿ ಮೋದಿ ಎನ್ನುವ ಯುವಕರ ಕಪಾಳಕ್ಕೆ ಹೊಡಿಯಿರಿ ಎನ್ನುವ ಸಚಿವರ ಕಪಾಳಕ್ಕೆ ಜನತೆ ಲೋಕಸಭಾ ಚುನಾವಣೆಯಲ್ಲಿ ಬಾರಿಸುವುದು ಶತಸಿದ್ಧ ಎಂದು ಹೇಳಿದೆ.
ಅಧಿಕಾರಕ್ಕೆ ಬಂದು ಹತ್ತು ತಿಂಗಳಾದರೂ ಬರ ಪರಿಹಾರ ಕೊಡದೆ, ಅಭಿವೃದ್ಧಿಯೂ ಮಾಡದೆ, ಕುಡಿಯುವುದಕ್ಕೆ ನೀರು ಕೊಡಲಾಗದೆ ಇರುವ ಅಯೋಗ್ಯರು, ಜನರಿಂದ ಆಯ್ಕೆಯಾದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ ಎಂದು ವಾಗ್ಧಾಳಿ ನಡೆಸಿದೆ.
ಅಯೋಗ್ಯ @INCKarnataka ದ ನಾಯಕರು ನಮ್ಮದು ಎಲುಬಿಲ್ಲದ ನಾಲಿಗೆ ಎನ್ನುವುದನ್ನು ತೋರಿಸಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ @siddaramaiah ಅವರಿಂದ ಹಿಡಿದು ನಾಲಾಯಕ್ ಕೈ ಶಾಸಕರು ನಾಲಿಗೆ ಹರಿಬಿಡುತ್ತಿದ್ದಾರೆ.
ಕೈಲಾಗದವನು ಮೈ ಪರಚಿಕೊಂಡ ಎನ್ನುವಂತೆ ಕೊಪ್ಪಳದಲ್ಲಿ ಸಚಿವ ಶಿವರಾಜ್ ತಂಗಡಗಿ ಅವರು ಹತಾಶೆಗೊಂಡು ತಮ್ಮ ವ್ಯಕ್ತಿತ್ವವನ್ನು… pic.twitter.com/w4lF2NUaJW
— BJP Karnataka (@BJP4Karnataka) March 25, 2024
ಶಿವಮೊಗ್ಗ: ಚುನಾವಣೆ ಸಂಬಂಧಿಸಿದ ದೂರುಗಳಿದ್ದಲ್ಲೇ ‘ಈ ಸಂಖ್ಯೆ’ಗೆ ಕರೆ ಮಾಡಿ
BREAKING: ಯಾದಗಿರಿಯಲ್ಲಿ ‘SSLC ಪರೀಕ್ಷೆ’ಯಲ್ಲಿ ಸಾಮೂಹಿಕ ನಕಲಿಗೆ ಅವಕಾಶ: ಓರ್ವ ‘ಶಿಕ್ಷಕ ಅಮಾನತು’