ಬೆಂಗಳೂರು: ವಿಷಯಾಧಾರಿತ ಹೋರಾಟ ನಡೆಸದೇ ಮತ್ತೆ ಮತ್ತೆ ಕೋಮು ರಾಜಕೀಯ, ಶವ ರಾಜಕೀಯ ಮಾಡುತ್ತಿದ್ದರೆ ಜನ ನಿಮ್ಮನ್ನು ಮತ್ತೊಮ್ಮೆ ತಿರಸ್ಕರಿಸುವುದು ನಿಶ್ಚಿತ ಎಂಬುದಾಗಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ತಿಳಿಸಿದ್ದಾರೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಸಚಿವ ಸಂಪುಟದ ಸದಸ್ಯರಾದ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆಯನ್ನು ಕೇಳುತ್ತಿರುವ ಬಜೆಪಿಗರು ಎಂದಿನಂತೆ ಆಡಳಿತ ಪಕ್ಷದ ಮೇಲೆ ದ್ವೇಷಕ್ಕಾಗಿಯೇ ದ್ವೇಷ ಎಂಬ ತಮ್ಮ ಅನೀತಿಯನ್ನು ಮುಂದುವರೆಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದಿದ್ದಾರೆ.
ವಿಷಯಾಧಾರಿತವಾಗಿ ಮಾತನಾಡುವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಹಿಂದಿನಿಂದಲೂ ದೊಡ್ಡ ಮಟ್ಟದ ಅಸಹನೆಯನ್ನು ಹೊಂದಿರುವ ಬಿಜೆಪಿಗರು ಇದೀಗ ಬಿಜೆಪಿ ಪಕ್ಷದವರೊಂದಿಗೆ ನಂಟನ್ನು ಇಟ್ಟುಕೊಂಡಿರುವ ಸಚಿನ್ ಎಂಬ ವ್ಯಕ್ತಿಯ ಸಾವನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಕಿಡಿಕಾರಿದ್ದಾರೆ.
ಈ ಹಿಂದೆ ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೂ ಕೂಡಾ ವಿಷತಾಧಾರಿತವಾಗಿ ರಾಜಕೀಯ ಮಾಡಲು ಬಾರದೇ ಕೇವಲ ಶವ ರಾಜಕೀಯದ ಮೂಲಕವೇ ನಮ್ಮ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸುವ ಕೆಟ್ಟ ಕೆಲಸ ಮಾಡಿದ್ದ ಬಿಜೆಪಿಗರು ಸಿಬಿಐ ತನಿಖೆಯ ವರದಿಗಳ ಬಂದ ನಂತರ ಸುಮ್ಮನಾಗಿದ್ದರು ಎಂದು ಹೇಳಿದ್ದಾರೆ.
ಹಲವು ಅಪಪ್ರಚಾರದ ಪ್ರಯತ್ನಗಳ ನಡುವೆಯೂ ಜನಾಭಿಪ್ರಾಯ ಪಡೆಯುವಲ್ಲಿ ಸೋತ ಇವರು ಬಹುಮತ ಪಡೆಯಲು ವಿಫಲರಾಗಿ ನಂತರ ಇದ್ದ ಸರ್ಕಾರ ಕೆಡವಿ ಕೆಟ್ಟ ಆಡಳಿತ ನಡೆಸಿದ್ದು ಈಗ ಇತಿಹಾಸ. ಈಗ ಸರ್ಕಾರವನ್ನು ವಿರೋಧಿಸಲು ಕಾರಣವಿಲ್ಲದೇ ಒದ್ದಾಡುತ್ತಿರುವ ಬಿಜೆಪಿಗರು ಪ್ರಿಯಾಂಕ್ ಖರ್ಗೆ ಅವರನ್ನು ಅನಗತ್ಯವಾಗಿ ಟಾರ್ಗೆಟ್ ಮಾಡುತ್ತಿದ್ದು ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.
ಬಿಜೆಪಿಗರೇ, ವಿಷಯಾಧಾರಿತ ಹೋರಾಟ ನಡೆಸದೇ ಮತ್ತೆ ಮತ್ತೆ ಕೋಮು ರಾಜಕೀಯ, ಶವ ರಾಜಕೀಯ ಮಾಡುತ್ತಿದ್ದರೆ ಜನ ನಿಮ್ಮನ್ನು ಮತ್ತೊಮ್ಮೆ ತಿರಸ್ಕರಿಸುವುದು ನಿಶ್ಚಿತ.! ಎಂಬುದಾಗಿ ಎಚ್ಚರಿಸಿದ್ದಾರೆ.
ಸಚಿವ ಸಂಪುಟದ ಸದಸ್ಯರಾದ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆಯನ್ನು ಕೇಳುತ್ತಿರುವ ಬಜೆಪಿಗರು ಎಂದಿನಂತೆ ಆಡಳಿತ ಪಕ್ಷದ ಮೇಲೆ ದ್ವೇಷಕ್ಕಾಗಿಯೇ ದ್ವೇಷ ಎಂಬ ತಮ್ಮ ಅನೀತಿಯನ್ನು ಮುಂದುವರೆಸುವ ಪ್ರಯತ್ನ ಮಾಡುತ್ತಿದ್ದಾರೆ.
ವಿಷಯಾಧಾರಿತವಾಗಿ ಮಾತನಾಡುವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಹಿಂದಿನಿಂದಲೂ ದೊಡ್ಡ ಮಟ್ಟದ ಅಸಹನೆಯನ್ನು ಹೊಂದಿರುವ… pic.twitter.com/8TvURjXIQI
— Dr H C Mahadevappa(Buddha Basava Ambedkar Parivar) (@CMahadevappa) January 1, 2025
ರಾಜಸ್ಥಾನದಲ್ಲಿ 150 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದ 3 ವರ್ಷದ ಬಾಲಕಿ ರಕ್ಷಣೆ
ಬೈಕ್ ಅಪಘಾತದಲ್ಲಿ ಪ್ರೀತಿಸಿ ಮದುವೆಯಾಗಿದ್ದ ಪತಿ ಸಾವು: ಪತ್ನಿ ನೇಣಿಗೆ ಶರಣು