ಕಲಬುರ್ಗಿ: ಮಹಾರಾಷ್ಟ್ರದಲ್ಲಿ ಬಿಜೆಪಿ ಪಕ್ಷ ಗೆದ್ದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದೆ. ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ಧರಾಮಯ್ಯ ಇಬ್ಬರು ಸೇರಿ ಜನರಿಗೆ ಹಣ ಹಾಕ್ತಾರೆ. ಆದರೇ ಡಿಜಿಟಲ್ ಅಕೌಂಟ್ ಇದ್ರೆ ಮಾತ್ರವೇ ಎಂಬುದಾಗಿ ವದಂತಿಯೊಂದು ಹರಡಿತ್ತು. ಈ ವದಂತಿಯಿಂದ ಕಲಬುರ್ಗಿಯ ಕೇಂದ್ರ ಅಂಚೆ ಕಚೇರಿಗೆ ಡಿಜಿಟಲ್ ಅಕೌಂಟ್ ತೆರೆಯಲು ಜನರು ಮುಗಿ ಬಿದ್ದಿದ್ದಾರೆ.
ಕಲಬುರ್ಗಿಯ ಕೇಂದ್ರ ಅಂಚೆ ಕಚೇರಿಯಲ್ಲಿ ಜನರ ದಂಡೇ ನೆರೆದಿದೆ. ಕಿಲೋಮೀಟರ್ ಗಟ್ಟಲೇ ಜನರು ಸಾಲುಗಟ್ಟಿ ನಿಂತಿದ್ದಾರೆ. ಕಾರಣ ಪೋಸ್ಟ್ ಆಫೀಸ್ ನಲ್ಲಿ ಡಿಜಿಟಲ್ ಅಕೌಂಟ್ ತೆರೆಯೋದಕ್ಕೆ ಅಂತೆ. ಅದು ಮೋದಿ ದುಡ್ಡು ಹಾಕ್ತಾರೆ. ಸಿದ್ಧರಾಮಯ್ಯ ದುಡ್ಡು ಹಾಕ್ತಾರೆ ಎಂಬ ವದಂತಿಯ ಕಾರಣದಿಂದ ಅಂತೆ.
ಈ ವದಂತಿಯ ಕಾರಣದಿಂದಾಗಿ ಕಲಬುರ್ಗಿಯ ಕೇಂದ್ರ ಅಂಚೆ ಕಚೇರಿಗೆ ನೂರಾರು ಜನರು ಆಗಮಿಸಿದ್ದಾರೆ. ಡಿಜಿಟಲ್ ಅಕೌಂಟ್ ಇದ್ರೆ ಮಾತ್ರವೇ ಮೋದಿ, ಸಿದ್ಧರಾಮಯ್ಯ ದುಡ್ಡು ಹಾಕುತ್ತಾರೆ ಎಂಬ ವದಂತಿಯನ್ನು ನಂಬಿ, ಡಿಜಿಟಲ್ ಖಾತೆ ತೆರೆಯೋದಕ್ಕೆ ನೂರಾರು ಜನರು ಸಾಲುಗಟ್ಟಿ ನಿಂತು ತೆರೆಯುತ್ತಿರುವುದು ಕಂಡು ಬಂದಿದೆ.
ಈ ಬಗ್ಗೆ ಯಾವುದೇ ಅಧಿಕಾರಿಗಳಿಂದ ಖಚಿತ ಮಾಹಿತಿ ಲಭ್ಯವಿಲ್ಲ. ಇದೊಂದು ವದಂತಿಯಾಗಿದೆ. ಈ ತರದ ಯಾವುದೇ ಸ್ಕೀಮ್ ಇಲ್ಲ. ಮೋದಿ, ಸಿದ್ಧರಾಮಯ್ಯ ದುಡ್ಡು ಹಾಕ್ತಿಲ್ಲ. ಇದೊಂದು ಸುಳ್ಳು ಸುದ್ದಿಯಾಗಿದೆ. ಯಾರು ಇದನ್ನು ನಂಬಬಾರದು ಅನ್ನೋದು ಅನೇಕರ ಮಾತಾಗಿದೆ.
ಮುಡಾ ಹಗರಣ: ಇಡಿಯಿಂದ ನನಗೆ ಯಾವುದೇ ನೋಟಿಸ್ ಬಂದಿಲ್ಲ- ಸಚಿವ ಭೈರತಿ ಸುರೇಶ್ ಸ್ಪಷ್ಟನೆ