ಬೆಂಗಳೂರು: SIT ಅಧಿಕಾರಿಗಳು CDಶಿವುನ ಹಿಡಿದು ಡ್ರಿಲ್ ಮಾಡಿದರೆ ಸತ್ಯ ತಾನಾಗಿಯೇ ಆಚೆ ಬರುತ್ತದೆ. ರಾಜ್ಯದ ಜನ ಶೀಘ್ರದಲ್ಲಿಯೇ ‘CD ಶಿವು ಎಲ್ಲಿದ್ದಿಯಪ್ಪ?’ ಎಂದು ಕೇಳುವ ದಿನವೂ ದೂರವಿಲ್ಲ ಎಂಬುದಾಗಿ ಜೆಡಿಎಸ್ ವಾಗ್ಧಾಳಿ ನಡೆಸಿದೆ.

ಇಂದು ಎಕ್ಸ್ ಮಾಡಿರುವಂತ ಜೆಡಿಎಸ್ ಪಕ್ಷವು, ಪ್ರಜ್ವಲ್ ಎಲ್ಲಿರಬಹುದು ಎನ್ನುವ ವಿಷಯ ನಿಮ್ಮ CDಶಿವುಗೆ ಬಹಳ ಚೆನ್ನಾಗಿಯೇ ಗೊತ್ತಿದೆ. ಅವರನ್ನೇ ಕೇಳಿದರೆ ಉತ್ತಮವಲ್ಲವೇ? ಸಖ್ಯ ಮತ್ತು ಸೌಖ್ಯದ ಬಗ್ಗೆ ಅವರಿಗಿಂತ ಬಲ್ಲವರು ಉಂಟೇ ಕಪಟ ಕಾಂಗಿಗಳೇ? ಎಂದು ಪ್ರಶ್ನಿಸಿದೆ.

SIT ಅಧಿಕಾರಿಗಳು CDಶಿವುನ ಹಿಡಿದು ಡ್ರಿಲ್ ಮಾಡಿದರೆ ಸತ್ಯ ತಾನಾಗಿಯೇ ಆಚೆ ಬರುತ್ತದೆ. #Shivakumar_Investigation_Team ಗೇ ಗೊತ್ತಿಲ್ಲವೆಂದರೆ ಅದು ಶತಮಾನದ ಜೋಕಷ್ಟೇ ಅಲ್ಲ, CDಶಿವು ಪೂರ್ವಾಶ್ರಮಕ್ಕೆ ಮಾಡಿದ ಘೋರ ಅಪಚಾರ! ಈ ಶತಮಾನ ಕಂಡು ಕೇಳರಿಯದ ಸೋಜಿಗ ಅಂತ ತಿಳಿಸಿದೆ.

ಪೆನ್ ಡ್ರೈವ್ ಫ್ಯಾಕ್ಟರಿ ಒರಿಜಿನಲ್ ಓನರ್, CD ಸಂಚುಕೋರ CDಶಿವು ಕಣ್ಸನ್ನೆಯಂತೆ ಅವರ ಚೇಲಾಗಳು ನಡೆಸಿದ ಪೆನ್ ಡ್ರೈವ್ ಸಮಾರಾಧನೆ ಯಾರಿಗೆ ಗೊತ್ತಿಲ್ಲ ಹೇಳಿ? FIR ಆದ ಮೇಲೆ ಕಾಲ್ಕಿತ್ತ ಪೆನ್ ಡ್ರೈವ್ ಪಿಶಾಚಿಗಳು; ಕೋರ್ಟ್ ಜಾಮೀನು ನಿರಾಕರಿಸಿದ ಮೇಲೆಯೂ SITಗೆ ಚಳ್ಳೆಹಣ್ಣು ತಿನ್ನಿಸುತ್ತಾ CD ಶಿವು ಆಸ್ಥಾನದಲ್ಲಿ ಓಲಾಡುತ್ತಿರುವುದು ಯಾರಿಗೆ ಗೊತ್ತಿಲ್ಲ, ಹೇಳಿ? ಎಂದು ಕೇಳಿದೆ.

ಅಸಲಿ SIT, CD ಶಿವು ನೇತೃತ್ವದ SIT ತಂಟೆಗೇ ಹೋಗುತ್ತಿಲ್ಲ. ವಿಧಾನಸೌಧದ ಗಾಡ್ ಫಾದರ್ ಗಳ ಕಚೇರಿಗಳಲ್ಲಿಯೇ ಪೆನ್ ಡ್ರೈವ್ ಪಿಶಾಚಿಗಳು ಕಳ್ಳರಂತೆ ಆವಿತಿದ್ದರೂ ಕೂಗಳತೆ ದೂರಲ್ಲಿರುವ SITಗೆ ಸೊಳ್ಳೆ ಕಚ್ಚಿದ ಹಾಗೆಯೂ ಆಗುತ್ತಿಲ್ಲ. ಅವರು ಎಲ್ಲಿದ್ದಾರೆ? ಇವರು ಎಲ್ಲಿದ್ದಾರೆ? ಎನ್ನುವುದನ್ನು ನಿಮ್ಮ CD ಶಿವುಗೇ ಕೇಳ್ರಪ್ಪಾ!! ರಾಜ್ಯದ ಜನ ಶೀಘ್ರದಲ್ಲಿಯೇ ‘CD ಶಿವು ಎಲ್ಲಿದ್ದಿಯಪ್ಪ?’ ಎಂದು ಕೇಳುವ ದಿನವೂ ದೂರವಿಲ್ಲ ಎಂಬುದಾಗಿ ಆಕ್ರೋಶ ವ್ಯಕ್ತಪಡಿಸಿದೆ.

ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೆ ದೇವೇಗೌಡರು, ಈಗ ಪತ್ರ ಬರೆದು ಏನು ಮಾಡುತ್ತಾರೆ : ಸಿಎಂ ಸಿದ್ದರಾಮಯ್ಯ

ಇನ್ನು ಮುಂದೆ ಕಲುಷಿತ ನೀರಿನಿಂದ ತೊಂದರೆಯಾದರೆ ಡಿಸಿಗಳೇ ನೇರ ಹೊಣೆ : ಸಿಎಂ ಸಿದ್ದರಾಮಯ್ಯ

Share.
Exit mobile version