ಬೆಂಗಳೂರು : ಅರಣ್ಯ ಪ್ರದೇಶದ ಹೊರಗೆ ಎಲ್ಲೇ ವನ್ಯಜೀವಿಗಳು ಕಂಡರೆ ಸಾರ್ವಜನಿಕರು 1926 ಸಹಾಯವಾಣಿಗೆ ಕರೆ ಮಾಡಿದರೆ ತಕ್ಷಣವೇ ಕ್ರಮ ವಹಿಸಲಾಗುವುದು.
ಹೌದು, ಅರಣ್ಯ ಪ್ರದೇಶದ ಹೊರಗೆ ಎಲ್ಲೇ ವನ್ಯಜೀವಿಗಳು ಕಂಡರೆ ಸಾರ್ವಜನಿಕರು 1926 ಸಹಾಯವಾಣಿಗೆ ಕರೆ ಮಾಡಿದ್ರೆ ಸ್ವಯಂ ಚಾಲಿತವಾಗಿ ಕೇಂದ್ರ ಮತ್ತು ಸಂಬಂಧಿತ ವಲಯ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ರವಾನೆಯಾಗಲಿದೆ. ದೂರು ದಾಖಲಾದ ಕೂಡಲೇ ಕ್ರಮ ವಹಿಸಲಾಗುವುದು.
ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಗೆ ಅರಣ್ಯ ಇಲಾಖೆಯು ಅತ್ಯಾಧುನಿಕ ಸವಲತ್ತುಗಳಿಂದ ಕೂಡಿರುವ ರಾಜ್ಯ ಮಟ್ಟದ ನೂತನ ಸಮಗ್ರ ನಿರ್ದೇಶನ ಮತ್ತು ನಿಯಂತ್ರಣ ಕೇಂದ್ರ ಹಾಗೂ ಏಳು ವಿಭಾಗೀಯ ಕೇಂದ್ರಗಳನ್ನು ಆರಂಭಿಸಿದೆ.
ವನ್ಯಜೀವಿ ಸಂಘರ್ಷ ತಡೆಗೆ ತಂತ್ರಜ್ಞಾನಗಳ ಬಳಕೆ
ಅತ್ಯಾಧುನಿಕ ಸವಲತ್ತುಗಳಿಂದ ಕೂಡಿರುವ ರಾಜ್ಯ ಮಟ್ಟದ ನೂತನ ಸಮಗ್ರ ನಿರ್ದೇಶನ ಮತ್ತು ನಿಯ೦ತ್ರಣ ಕೇ೦ದ್ರ ಹಾಗೂ ಏಳು ವಿಭಾಗೀಯ ಕೇಂದ್ರಗಳ ಆರಂಭ
ಎಐ ಕ್ಯಾಮರಾ ಮತ್ತು ಏರಿಯಲ್ ಚಿತ್ರಗಳ ಆಧಾರದಲ್ಲಿ ವನ್ಯಜೀವಿಗಳ ಮೇಲೆ ಈ ಕೇಂದ್ರಗಳು ನಿಗಾ ಇರಿಸಲಿವೆ. ಸಿಬ್ಬಂದಿಯ ಕಾರ್ಯಾಚರಣೆ ವೇಳೆಯೂ ಈ ಚಿತ್ರಗಳನ್ನು ಬಳಸಿಕೊಳ್ಳಲಾಗುತ್ತದೆ.
ರೇಡಿಯೊ ಕಾಲರ್ ಅಳವಡಿಸಿದ ಆನೆಗಳ ಮೇಲೆ ನಿಗಾ ಇರಿಸಲಿವೆ. ಅವುಗಳ ಚಲನವಲನ ಕುರಿತಾಗಿ ಸ೦ಬ೦ಧಿತ ಅರಣ್ಯಾಧಿಕಾರಿಗಳಿಗೆ ಮಾಹಿತಿ ರವಾನೆಯಾಗಲಿದೆ.
॥ ಮಾನವ-ವನ್ಯಜೀವಿ ಸಂಘರ್ಷದ ಸಾಧ್ಯತೆ ಇರುವ ಪ್ರದೇಶಗಳ ಮೇಲೆ ಸದಾ ನಿಗಾ ಇರಿಸಲಾಗಿರುತ್ತದೆ. ಅಗತ್ಯ ಎದುರಾದಲ್ಲಿ ಕ್ಷಿಪ್ರ ಕಾರ್ಯಾಚರಣೆ ತ೦ಡವನ್ನು ರಚಿಸಲಾಗುತ್ತದೆ.
ಜಿಪಿಎಸ್ ಆಧಾರಿತ ಗಸ್ತು ಪಡೆಗಳ ಸಂಪರ್ಕದಲ್ಲಿದ್ದು, ಸಾರ್ವಜನಿಕರಿಂದ ದೂರು ಬ೦ದೊಡನೆ ಗಸ್ತು ಪಡೆಗಳಿಗೆ ನಿರ್ದೇಶನ ಹೋಗಲಿದೆ. ಗಸ್ತು ಪಡೆಗಳಿಗೆ ಎಐ ಕ್ಯಾಮೆರಾ ಆಧಾರಿತ ಚಿತ್ರ ಮತ್ತು ಮಾಹಿತಿಗಳನ್ನು ಒದಗಿಸಲಾಗುತ್ತದೆ.
– ಸೌರ ಬೇಲಿ, ರೈಲು ಕಂಬಿ ಬೇಲಿ, ಆನೆ ತಡೆ ಕ೦ದಕಗಳ ಮೇಲೆ ಈ ಕೇಂದ್ರಗಳು ನಿಗಾ ಇರಿಸಿರಲಿವೆ. ಇವುಗಳ ಬಳಿ ವನ್ಯಜೀವಿಗಳು ಸುಳಿದಾಗ ಸ೦ಬ೦ಧಿತ ವಲಯ ಅರಣ್ಯಾಧಿಕಾರಿ ಮತ್ತು ತ೦ಡಕ್ಕೆ ಮಾಹಿತಿ ರವಾನೆಯಾಗಲಿದೆ.
॥ ಮೇಲಿನ ಎಲ್ಲ ಸ೦ದರ್ಭದಲ್ಲೂ ಸ೦ಬ೦ಧಿತ ಪ್ರದೇಶದ ಸಾರ್ವಜನಿಕರಿಗೆ ಮಾಹಿತಿ ಮತ್ತು ಮುನ್ನೆಚ್ಚರಿಕೆ ಸೂಚನೆಗಳು ರವಾನೆಯಾಗಲಿವೆ.
ಅರಣ್ಯ ಪ್ರದೇಶದ ಹೊರಗೆ ಎಲ್ಲೇ ವನ್ಯಜೀವಿಗಳು ಕಂಡರೆ ಸಾರ್ವಜನಿಕರು 1926 ಸಹಾಯವಾಣಿಗೆ ಕರೆ ಮಾಡಿದರೆ ಸಾಕು. ಸ್ವಯಂ ಚಾಲಿತವಾಗಿ ಕೇಂದ್ರ ಮತ್ತು ಸಂಬಂಧಿತ ವಲಯ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ರವಾನೆಯಾಗಲಿದೆ. ದೂರು ದಾಖಲಾದ ಕೂಡಲೇ ಕ್ರಮ ವಹಿಸಲಾಗುವುದು. pic.twitter.com/IVvUskrB6u
— DIPR Karnataka (@KarnatakaVarthe) January 5, 2026
ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಗೆ ಅರಣ್ಯ ಇಲಾಖೆಯು ಅತ್ಯಾಧುನಿಕ ಸವಲತ್ತುಗಳಿಂದ ಕೂಡಿರುವ ರಾಜ್ಯ ಮಟ್ಟದ ನೂತನ ಸಮಗ್ರ ನಿರ್ದೇಶನ ಮತ್ತು ನಿಯಂತ್ರಣ ಕೇಂದ್ರ ಹಾಗೂ ಏಳು ವಿಭಾಗೀಯ ಕೇಂದ್ರಗಳನ್ನು ಆರಂಭಿಸಿದೆ. pic.twitter.com/701zigaLyQ
— DIPR Karnataka (@KarnatakaVarthe) January 5, 2026








