ಬೆಂಗಳೂರು: ತೆರಿಗೆ ತಾರತಮ್ಯದ ವಿರುದ್ಧ ಹೋರಾಡಲು ಗಾಂಧೀಜಿಯವರು ಹಾಕಿಕೊಟ್ಟ ಮಾರ್ಗ ಒಂದಿದೆ. ನಿಮ್ಮ ಅನ್ಯಾಯಗಳ ವಿರುದ್ಧ ದಕ್ಷಿಣ ಭಾರತದ ಜನರು ತಿರುಗಿಬಿದ್ದರೆ ದೊಡ್ಡ ಬೆಲೆಯನ್ನೇ ತೆರಬೇಕಾದಿತು. ತೆರಿಗೆ ತಾರತಮ್ಯದಿಂದಾಗಿಯೇ ಜಗತ್ತಿನಲ್ಲಿ ಹಲವು ಕ್ರಾಂತಿಗಳು ಹುಟ್ಟಿಕೊಂಡಿದ್ದನ್ನ ಮರೆಯಬೇಡಿ ಎಂಬುದಾಗಿ ಕೇಂದ್ರ ಸರ್ಕಾರದ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತಂತೆ ಇಂದು ಎಕ್ಸ್ ಮಾಡಿರುವಂತ ಅವರು, ಒಂದು ಸರ್ಕಾರ ತನ್ನ ಜನರ ಹಕ್ಕಿಗಾಗಿ ಹೋರಾಟ ನಡೆಸುವ ಹಂತಕ್ಕೆ ಮುಂದಾಗಿರುವಾಗ, ಸರ್ಕಾರದ ಮುಖ್ಯಮಂತ್ರಿಗಳನ್ನ ಕರೆದು ಮಾತನಾಡಿಸುವ ಕನಿಷ್ಠ ಸೌಜನ್ಯವೂ ದೇಶದ ಪ್ರಧಾನಿಯವರಿಗೆ ಇಲ್ಲ. ಕೇಂದ್ರ ಬಿಜೆಪಿ ನಾಯಕರ ಇಂತಹ ಉಡಾಫೆ ವರ್ತನೆಗಳಿಂದಲೇ ಅನಿವಾರ್ಯವಾಗಿ ನಾವು ಹೋರಾಟ ನಡೆಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ಅಧಿಕಾರದಲ್ಲಿರದ ರಾಜ್ಯಗಳಿಗೆ ಅದರ ತೆರಿಗೆ ಪಾಲು ಕೊಡದೇ ಬಲಹೀನ ಮಾಡುವುದು ಬಿಜೆಪಿಯ ಅಜೆಂಡಾ ಇದ್ದಂತಿದೆ. ಮೋದಿಜಿಯವರೇ ಪ್ರಾಮಾಣಿಕವಾಗಿ ತೆರಿಗೆ ಕಟ್ಟುವ ಕನ್ನಡಿಗರ ತಾಳ್ಮೆ ಪರೀಕ್ಷಿಸಬೇಡಿ. ಧರ್ಮದ ಹೆಸರಲ್ಲಿ ಜನರನ್ನ ನೀವು ಮರುಳು ಮಾಡಬಹುದು. ಆದರೆ ಜನರು ದುಡಿದು ಕಟ್ಟುವ ತೆರಿಗೆ ಹಣದ ವಿಚಾರದಲ್ಲಿ ನಿಮ್ಮ ಆಟ ನಡೆಯದು ಎಂದು ಹೇಳಿದ್ದಾರೆ.
ಒಂದು ಸರ್ಕಾರ ತನ್ನ ಜನರ ಹಕ್ಕಿಗಾಗಿ ಹೋರಾಟ ನಡೆಸುವ ಹಂತಕ್ಕೆ ಮುಂದಾಗಿರುವಾಗ, ಸರ್ಕಾರದ ಮುಖ್ಯಮಂತ್ರಿಗಳನ್ನ ಕರೆದು ಮಾತನಾಡಿಸುವ ಕನಿಷ್ಠ ಸೌಜನ್ಯವೂ ದೇಶದ ಪ್ರಧಾನಿಯವರಿಗೆ ಇಲ್ಲ.
ಕೇಂದ್ರ ಬಿಜೆಪಿ ನಾಯಕರ ಇಂತಹ ಉಡಾಫೆ ವರ್ತನೆಗಳಿಂದಲೇ ಅನಿವಾರ್ಯವಾಗಿ ನಾವು ಹೋರಾಟ ನಡೆಸಬೇಕಾಗಿದೆ.
ಬಿಜೆಪಿ ಅಧಿಕಾರದಲ್ಲಿರದ ರಾಜ್ಯಗಳಿಗೆ ಅದರ ತೆರಿಗೆ…
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) February 7, 2024
ಪ್ರಧಾನಿ ಮೋದಿಯವರು ಗುಜರಾತಿನ ಸಿಎಂ ಆಗಿದ್ದಾಗ, ಆಡಿದ ಮಾತನ್ನ ನೆನಪಿಸಿಕೊಳ್ಳಲಿ. ಗುಜರಾತಿನಿಂದ ಒಂದು ರೂಪಾಯಿ ತೆಗೆದುಕೊಳ್ಳಬೇಡಿ, ನಾವು ಕೇಂದ್ರ ಸರ್ಕಾರದಿಂದ ಒಂದು ರೂಪಾಯಿ ಕೇಳಲ್ಲ ಎಂದಿದ್ದರು. ಗುಜರಾತಿನ ಉತ್ಪಾದನೆಯನ್ನ ಗುಜರಾತಿಗೆ ಬಿಡಿ. ನಮಗೆ ಸರ್ಕಾರ ನಡೆಸುವುದು ಗೊತ್ತಿದೆ ಎಂದು ಕೇಂದ್ರದ ವಿರುದ್ಧ ಮಾತನಾಡಿದ್ದರು ಎಂದು ನೆನಪು ಮಾಡಿದ್ದಾರೆ.
ಮೋದಿಯವರೇ ಇದೇ ಮಾತನ್ನ ಈಗ ಕರ್ನಾಟಕ ಸರ್ಕಾರ ಹೇಳಿದರೆ ನೀವು ಸಹಿಸಿಕೊಳ್ಳಲು ಸಾಧ್ಯವೇ..? ಕರ್ನಾಟಕ ರಾಜ್ಯ ಕೇಂದ್ರ ಸರ್ಕಾರಕ್ಕೆ ಪ್ರತಿ ವರ್ಷ 4.30 ಲಕ್ಷ ಕೋಟಿ ತೆರಿಗೆ ಕಟ್ಟುತ್ತಿದೆ. ಮೋದಿಯವರ ರೀತಿ 4.30 ಲಕ್ಷ ಕೋಟಿ ತೆರಿಗೆ ಹಣವನ್ನ ಕರ್ನಾಟಕಕ್ಕೆ ಬಿಡಿ ಎಂದು ಕೇಳುವ ಮನಸ್ಥಿತಿ ಕನ್ನಡಿಗರದ್ದಲ್ಲ ಎಂದು ಗುಡುಗಿದ್ದಾರೆ.
ದೇಶದ ಮೇಲೆ ನಮಗೆ ಅಭಿಮಾನವಿದೆ. ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕಾದರೆ ಕರ್ನಾಟಕದ ತೆರಿಗೆ ಅತ್ಯಮೂಲ್ಯವಾಗಿದೆ. ನಾವು ಕಟ್ಟುವ 4.30 ಲಕ್ಷ ಕೋಟಿಯಲ್ಲಿ ಕನಿಷ್ಠ ಶೇ 20 ರಷ್ಟು ಪಾಲನ್ನಾದರೂ ರಾಜ್ಯಕ್ಕೆ ಕೊಡಬೇಕಲ್ಲವೇ.. ಕೇವಲ 100 ರೂಪಾಯಿಗೆ 13 ರೂಪಾಯಿ ಕೊಡುತ್ತಿರುವುದನ್ನ ನೋಡಿದರೆ ಕರ್ನಾಟಕದ ಪ್ರಗತಿಗೆ ಬಿಜೆಪಿ ತಡೆಯೊಡ್ಡುವಂತಿದೆ ಎಂದು ಕಿಡಿಕಾರಿದ್ದಾರೆ.
ಪ್ರಧಾನಿ ಮೋದಿಯವರು ಗುಜರಾತಿನ ಸಿಎಂ ಆಗಿದ್ದಾಗ, ಆಡಿದ ಮಾತನ್ನ ನೆನಪಿಸಿಕೊಳ್ಳಲಿ.
ಗುಜರಾತಿನಿಂದ ಒಂದು ರೂಪಾಯಿ ತೆಗೆದುಕೊಳ್ಳಬೇಡಿ, ನಾವು ಕೇಂದ್ರ ಸರ್ಕಾರದಿಂದ ಒಂದು ರೂಪಾಯಿ ಕೇಳಲ್ಲ ಎಂದಿದ್ದರು.
ಗುಜರಾತಿನ ಉತ್ಪಾದನೆಯನ್ನ ಗುಜರಾತಿಗೆ ಬಿಡಿ. ನಮಗೆ ಸರ್ಕಾರ ನಡೆಸುವುದು ಗೊತ್ತಿದೆ ಎಂದು ಕೇಂದ್ರದ ವಿರುದ್ಧ ಮಾತನಾಡಿದ್ದರು.…
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) February 7, 2024
ಐದು ಗ್ಯಾರಂಟಿ ಜೊತೆಗೆ ನಾಮ ಹಾಕುವ ಗ್ಯಾರಂಟಿ ನೀಡಿದ ಕಾಂಗ್ರೆಸ್: ಆರ್.ಅಶೋಕ ಆಕ್ರೋಶ
ರಾಜ್ಯ ಸರ್ಕಾರದ ‘ಚಲೋ ದೆಹಲಿ’ ಪ್ರತಿಭಟನೆಗೆ ಟಕ್ಕರ್: ವಿಧಾನಸಭೆ ಬಳಿ ಬಿಜೆಪಿ ಧರಣಿ