ಬೆಂಗಳೂರು: ಇಂದು ಚಿನ್ನಸ್ವಾಮಿ ಕ್ರೀಢಾಂಗಣದ ಬಳಿಯಲ್ಲಿ ಕಾಲ್ತುಳಿತ ಉಂಟಾಗಿ 11 ಜನರು ಸಾವನ್ನಪ್ಪಿ 33 ಮಂದಿ ಗಾಯಗೊಳ್ಳೋದಕ್ಕೆ ನಿರೀಕ್ಷೆ ಮೀರಿ ಜನರು ಬಂದಿದ್ದೇ ದುರಂತಕ್ಕೆ ಕಾರಣ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಇಂದು ಕಾವೇರಿ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಆರ್ ಸಿ ಬಿ ಚಾಂಪಿಯನ್ ವಿಜಯೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗೋದಕ್ಕೆ ನಿರೀಕ್ಷೆಗೂ ಮೀರಿ ಜನರು ಬಂದಿದ್ದಾರೆ. 35,000 ಆಸನದ ವ್ಯವಸ್ಥೆ ಚಿನ್ನಸ್ವಾಮಿ ಕ್ರೀಢಾಂಗಣದಲ್ಲಿದೆ. ಆದರೇ 2 ರಿಂದ 3 ಲಕ್ಷ ಜನರು ಚಿನ್ನಸ್ವಾಮಿ ಕ್ರೀಢಾಂಗಣದ ಬಳಿಯಲ್ಲಿ ಸೇರಿದ್ದೇ ದುರಂತಕ್ಕೆ ಕಾರಣ ಎಂಬುದಾಗಿ ತಿಳಿಸಿದರು.
ಆರ್ ಸಿಬಿ ವಿಜಯೋತ್ಸವ ಆಚರಣೆ ಮಾಡೋದಕ್ಕೆ ಕ್ರಿಕೇಟ್ ಅಸೋಸಿಯೇಷನ್ ಅವರು ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸರ್ಕಾರದ ವತಿಯಿಂದ ಕೂಡ ಕಾರ್ಯಕ್ರಮ ಏರ್ಪಾಡು ಮಾಡಿದ್ದೆವು. ಚಿನ್ನಸ್ವಾಮಿ ಕ್ರೀಢಾಂಗಣದ ಬಳಿಯಲ್ಲಿ ವಿಜಯೋತ್ಸವ ಆಚರಣೆಯ ವೇಳೆ ಬಹಳ ದೊಡ್ಡ ದುರಂತ ನಡೆದಿದೆ. ಜನರು ಕಾಲ್ತುಳಿತಕ್ಕೆ ಒಳಗಾಗಿ 11 ಜನರು ಮೃತಪಟ್ಟಿದ್ದಾರೆ. 33 ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದರು.
ನಾನು ಬೌರಿಂಗ್ ಆಸ್ಪತ್ರೆ, ವೈದೇಹಿ, ಮಲ್ಯ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಇಂತಹ ದುರಂತ ನಡೆಯಬಾರದಾಗಿತ್ತು. ಸರ್ಕಾರವು ಈ ಬಗ್ಗೆ ಸಂತಾಪ ಸೂಚಿಸುತ್ತದೆ. ನಮ್ಮ ನಿರೀಕ್ಷೆಗೂ ಮೀರಿ ಜನರು, ಅಭಿಮಾನಿಗಳು ಸೇರಿದ್ದರು. ನಾವು ಇಷ್ಟೊಂದು ಜನರನ್ನು ನಿರೀಕ್ಷಿಸೆ ಮಾಡಿರಲಿಲ್ಲ. ಕ್ರಿಕೇಟ್ ಸ್ಟೇಡಿಯಂನಲ್ಲಿ 35 ಸಾವಿರ ಜನರು ಕುಳಿತಿಕೊಳ್ಳೋದಕ್ಕೆ ಅವಕಾಶವಿದೆ. ಆದರೇ ಎರಡು ಮೂರು ಲಕ್ಷ ಜನರು ಬಂದಿದ್ದಾರೆ ಎಂದರು.
ಚಿನ್ನಸ್ವಾಮಿ ಸ್ಟೇಡಿಯಂ ದುರಂತದಲ್ಲಿ ಸಾವನ್ನಪ್ಪಿರುವವರೆಲ್ಲಾ ಯುವಕರೇ ಆಗಿದ್ದಾರೆ. ಅವರ ಕುಟುಂಬದ ವಾರಸುದಾರರಿಗೆ ಸರ್ಕಾರದ ವತಿಯಿಂದ 10 ಲಕ್ಷ ರೂಪಾಯಿ ಪರಿಹಾರವನ್ನು ನೀಡುವುದಾಗಿ ಘೋಷಿಸಿದರು. ಅಲ್ಲದೇ ಯಾರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೋ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ತಿಳಿಸಿದರು.