ಮಂಡ್ಯ: ಜಿಲ್ಲೆಯಲ್ಲಿ ಎಐ ಚಿತ್ರಕ್ಕೆ ಜನರು ಹೈರಾಣಾಗಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಎಐ ಮೂಲಕ ಪೋಟೋ ಎಡಿಟ್ ಮಾಡಿ ಪ್ರವಾಸಿ ತಾಣಗಳಲ್ಲಿ ಹುಲಿ, ಚಿರತೆ ಓಡಾಟವೆಂದು ಹರಿಬಿಟ್ಟ ಕಾರಣ ಭಯಭೀತರಾಗಿದ್ದಾರೆ.
ಹೌದು.. ಮಂಡ್ಯದಲ್ಲಿ ಕಿಡಿಗೇಡಿಗಳ AI ಚಿತ್ರದ ಹುಡುಗಾಟಕ್ಕೆ ಜನರು ಹೈರಾಣಾಗಿದ್ದಾರೆ. AI ಬಳಸಿ ಪ್ರವಾಸಿ ತಾಣದ ಬಳಿ ಹುಲಿ ಮತ್ತು ಚಿರತೆಗಳ ಓಡಾಟದ ಫೋಟೋ ಎಡಿಟ್ ಮಾಡಿದ್ದಾರೆ. ಎಡಿಟ್ ಮಾಡಿದ ಇಂತಹ ಚಿತ್ರಗಳನ್ನು ವೈರಲ್ ಮಾಡಿ ಜನರಲ್ಲಿ ಆತಂಕವನ್ನು ಕಿಡಿಗೇಡಿಗಳು ಮೂಡಿಸಿದ್ದಾರೆ.
ಮಂಡ್ಯದ ಶ್ರೀರಂಗಪಟ್ಟಣದ ಗಂಜಾಮ್ ಬಳಿಯ ಪ್ರವಾಸಿ ತಾಣ ಗುಂಬಸ್ ಬಳಿ ಹುಲಿ ಚಿರತೆ ಕಾಣಿಸಿಕೊಂಡ ವದಂತಿ ಹರಡಲಾಗಿದೆ. ಇದಕ್ಕೆ ಪೂರಕ ಎಂಬಂತೆ AI ಮೂಲಕ ಚಿರತೆ ಹಾಗು ಹುಲಿಗಳ ಫೋಟೋ ಎಡಿಟ್ ಮಾಡಿ ವೈರಲ್ ಆಗಿದೆ.ಇದರ ಜೊತೆಗೆ ಗ್ರಾಮಕ್ಕೆ ಚಿರತೆ ಬಂದ AI ಚಿತ್ರ ಎಡಿಟ್ ಮಾಡಿ ಆತಂಕವನ್ನು ಕಿಡಿಗೇಡುಗಳು ಮಾಡಿದ್ದಾರೆ.
ಈ AI ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಜನರಲ್ಲಿ ಆತಂಕ ಉಂಟಾಗಿದೆ. ಇದರ ಅಸಲಿ ಸತ್ಯ ತಿಳಿಯದೆ ಸ್ಥಳೀಯ ಜನರಲ್ಲಿ ಮನೆ ಮಾಡಿದ ಆತಂಕ ಸೃಷ್ಠಿಸಿದೆ. ಈ ಬಗ್ಗೆ ಕಂಗಾಲಾಗಿ ಅರಣ್ಯ ಇಲಾಖೆಗೂ ಮಾಹಿತಿ ನೀಡಿ ಚಿರತೆ ಸೆರೆಗೆ ಒತ್ತಾಯಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳಿಂದ ಇದರ ಅಸಲಿ ಸತ್ಯ ತಿಳಿದು ಕಿಡಿಗೇಡಿಗಳ ವಿರುದ್ದ ಕ್ರಮಕ್ಕೂ ಮುಂದಾಗಿದ್ದಾರೆ.
ಮತ್ತೊಂದೆಡೆ ಎಐ ಬಳಸಿ ಹುಲಿ, ಚಿರತೆ ಪ್ರವಾಸಿ ತಾಣಗಳಲ್ಲಿ ಓಡಾಡುತ್ತಿವೆ ಎಂಬುದಾಗಿ ಪೋಟೋ ಹರಿಬಿಟ್ಟಂತ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆಯೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವರದಿ: ಗಿರೀಶ್ ರಾಜ್, ಮಂಡ್ಯ
ನ.18ರಿಂದ 3 ದಿನ `ಬೆಂಗಳೂರು ಟೆಕ್ ಸಮ್ಮಿಟ್-2025’ ಆಯೋಜನೆ : CM ಸಿದ್ದರಾಮಯ್ಯ ಮಾಹಿತಿ