ಮೈಸೂರು: ಇಂದು ನೈರುತ್ಯ ರೈಲ್ವೆಯ ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿಯಲ್ಲಿ ಅಖಿಲ ಭಾರತ ಪಿಂಚಣಿ ಅದಾಲತ್ – 2025 ಅನ್ನು ಆಯೋಜಿಸಿತು. ಇಂದಿನ ಅಖಿಲ ಭಾರತ ಪಿಂಚಣಿ ಅದಾಲತ್ ಯಶಸ್ವಿಯಾಗಿ ನಡೆಯಿತು.
ಈ ಪಿಂಚಣಿ ಅದಾಲತ್‌ಗೆ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಮುದಿತ್ ಮಿತ್ತಲ್ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಷ್ಣು ಗೌಡ, ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ/ಸಮನ್ವಯಕ/ಮೈಸೂರು, ಹರ್ಷವರ್ಧನ, ಹಿರಿಯ ವಿಭಾಗೀಯ ಹಣಕಾಸು ವ್ಯವಸ್ಥಾಪಕ/ಮೈಸೂರು ಹಾಗೂ ಪೃಥ್ವಿ ಎಸ್. ಹುಲ್ಲತ್ತಿ, ವಿಭಾಗೀಯ ಹಣಕಾಸು ವ್ಯವಸ್ಥಾಪಕರು ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ/ಮೈಸೂರು ಅವರು ಭಾಗವಹಿಸಿ, ಪಿಂಚಣಿದಾರರ ಅಹವಾಲುಗಳಿಗೆ ಪರಿಹಾರ ಒದಗಿಸಿದರು.
ಒಟ್ಟು 47 ಪಿಂಚಣಿದಾರರು ಈ ಪಿಂಚಣಿ ಅದಾಲತ್‌ನಲ್ಲಿ ಭಾಗವಹಿಸಿದ್ದರು. ಅವರಲ್ಲಿ ಅದಾಲತ್ ದಿನದಂದು ಪ್ರತಿನಿಧಿಸಲಾದ ಎರಡು ಹೊಸ ಪ್ರಕರಣಗಳು ಸೆರಿದಂತೆ ಒಟ್ಟು 32 ಪ್ರಕರಣಗಳನ್ನು ವಿಚಾರಣೆಗೆ ತೆಗೆದುಕೊಳ್ಳಲಾಯಿತು. ಈ ಪೈಕಿ 16 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದ್ದು ಉಳಿದ ಪ್ರಕರಣಗಳನ್ನು ಪರಿಶೀಲಿಸಲಾಗುತ್ತಿದ್ದು, ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ರೈಲ್ವೆ ಪಿಂಚಣಿದಾರರ ಕಲ್ಯಾಣ ಸಂಘ ಮೈಸೂರು, ಇದರ ಅಧ್ಯಕ್ಷರಾದ ಶ್ರೀ ಪಾರ್ಥಸಾರಥಿ ಅವರು, ಪಿಂಚಣಿದಾರರ ಅಹವಾಲುಗಳನ್ನು ಮೈಸೂರು ವಿಭಾಗವು ತ್ವರಿತವಾಗಿ ಹಾಗೂ ಪರಿಣಾಮಕಾರಿಯಾಗಿ ಪರಿಹರಿಸುತ್ತಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು, ಉಳಿದಿರುವ ಎಲ್ಲ ಅಹವಾಲುಗಳನ್ನು ಶೀಘ್ರದಲ್ಲೇ ಪರಿಹರಿಸುವುದಾಗಿ ಭರವಸೆ ನೀಡಿದರು.
ರೈಲ್ವೆ ಪಿಂಚಣಿದಾರರ ಕಲ್ಯಾಣ ಸಂಘ, ಮೈಸೂರು ಇದರ ಪ್ರಧಾನ ಕಾರ್ಯದರ್ಶಿ ಶ್ರೀ ಜಿ. ಎಸ್. ಸ್ವಾಮಿನಾಥನ್ ಹಾಗೂ ಸಂಘದ ಇತರ ಸದಸ್ಯರು ಕೂಡ ಪಿಂಚಣಿ ಅದಾಲತ್‌ನಲ್ಲಿ ಉಪಸ್ಥಿತರಿದ್ದರು.
ಪಿಂಚಣಿದಾರರು ಅದಾಲತ್‌ನಲ್ಲಿ ತಮ್ಮ ಅಹವಾಲುಗಳನ್ನು ಮಂಡಿಸಿದ್ದು, ರೈಲ್ವೆ ಅಧಿಕಾರಿಗಳು ಅವುಗಳಿಗೆ ಸಮರ್ಪಕವಾಗಿ ಸ್ಪಷ್ಟನೆ ನೀಡಿದ್ದು, ಸಮಸ್ಯೆಗಳಿಗೆ ಪರಿಹಾರ ಒದಗಿಸಿದರು.
KSET-2025ರ ಪರೀಕ್ಷೆ ಉತ್ತೀರ್ಣರಾದ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ








