ಚಿತ್ರದುರ್ಗ: ಜಿಲ್ಲೆಯ ಗ್ರಾಮ ಪಂಚಾಯ್ತಿಯೊಂದರ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯ ದುರ್ವರ್ತನೆ ಖಂಡಿಸಿ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರು, ಸದಸ್ಯರಿಂದ ಸಾಮೂಹಿಕ ರಾಜೀನಾಮೆ ನೀಡಿರುವಂತ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕರಿಯಾಲ ಗ್ರಾಮ ಪಂಚಾಯ್ತಿ ಪಿಡಿಓ ಚಂದ್ರಕಲಾ ಎಂಬುವರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗೆ ಪ್ರತಿಸ್ಪಂದಿಸುತ್ತಿರಲಿಲ್ಲ. ಕುಡಿಯೋ ನೀರು ಸೇರಿದಂತೆ ವಿವಿಧ ಸಮಸ್ಯೆ ಬಗೆ ಹರಿಸೋ ನಿಟ್ಟಿನಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಯಾವುದೇ ಗೌರವ ಕೊಡದೇ, ಸಮಸ್ಯೆ ಬಗೆಹರಿಸೋದಕ್ಕೆ ಮುಂದಾಗುತ್ತಿರಲಿಲ್ಲ.
ಈ ಎಲ್ಲಾ ಕಾರಣದಿಂದಾಗಿ ಪಿಡಿಓ ದುರ್ವರ್ತನೆ ಖಂಡಿಸಿ ಕರಿಯಾಲ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ 15 ಮಂದಿ ಸಾಮೂಹಿಕವಾಗಿ ರಾಜೀನಾಮೆ ನೀಡಿರೋದಾಗಿ ತಿಳಿದು ಬಂದಿದೆ. ನಾಳೆ ಕರಿಯಾಲ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಕೂಡ ತಮ್ಮ ಹುದ್ದೆಗೆ ಪಿಡಿಓ ವರ್ತನೆ ಖಂಡಿಸಿ ರಾಜೀನಾಮೆಯನ್ನು ಸಲ್ಲಿಸಲಿದ್ದಾರೆ ಎನ್ನಲಾಗುತ್ತಿದೆ. ಆ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದು ಬರಬೇಕಿದೆ.
BREAKING: ಕೊನೆಗೂ ‘ರಾಜ್ಯ ಸರ್ಕಾರ’ಕ್ಕೆ ‘ಜಾತಿಗಣತಿ ವರದಿ’ ಸಲ್ಲಿಸಿದ ‘ಹಿಂದುಳಿದ ಆಯೋಗದ ಅಧ್ಯಕ್ಷ’.!
‘ಉದ್ಯೋಗಾಕಾಂಕ್ಷಿ’ಗಳೇ ಗಮನಿಸಿ: ‘ಪಂಚಾಯತ್ ರಾಜ್ ಇಲಾಖೆ’ಯ ‘2022 ಖಾಲಿ ಹುದ್ದೆ’ ಭರ್ತಿಗೆ ಪ್ರಕ್ರಿಯೆ ಆರಂಭ