ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ ನಗರದಲ್ಲಿ ‘ಪೇ ಸಿಎಂ’ ಪೋಸ್ಟರ್‌ಗಳನ್ನು ಹಾಕಿದ ಪ್ರಕರಣದ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನಿನ್ನೆ” ನಾಳೆ ನಗರದಲ್ಲಿ ಶಾಸಕರೆಲ್ಲರೂ ಸೇರಿ ಮತ್ತೆ ʻ ಪೇ ಸಿಎಂ ಪೋಸ್ಟರ್‌ ಅಂಟಿಸುತ್ತೇವೆʼ  ಏನ್‌ ಮಾಡ್ತಾರೆ ಎಂದು ನೋಡೊಣ ಎಂದು  ಸವಾಲ್ ಹಾಕಿದ್ದರು.

ಅಂತೆಯೇ ರಾಜ್ಯ ಸರ್ಕಾರಕ್ಕೆ ಸವಾಲೊಡ್ಡುವಂತೆ ಕಾಂಗ್ರೆಸ್ ವತಿಯಿಂದ ಸರ್ಕಾರಿ ಕಚೇರಿ ಗೋಡೆ ‘ಪೇ ಸಿಎಂ’ ಪೋಸ್ಟರ್ ಅಂಟಿಸಲು ಕೈ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಆದ್ದರಿಂದ ಪಕ್ಷದ ಶಾಸಕರೊಗೆ ಕೆಪಿಸಿಸಿ ಕಚೇರಿಗೆ ಬರುವಂತೆ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.

ನಿನ್ನೆ ಸಿಎಂ ಪೋಸ್ಟರ್‌  ಅಂಟಿಸಿದ್ದಕ್ಕೆ ಈಗಾಗಲೇ ಕ್ಯೂಆರ್‌ ಕೋಡ್‌ಗೆ ಈಗಾಗಲೇ ಅನೇಕ ದೂರು ಬಂದಿದೆ. ಅಧಿಕಾರದಲ್ಲಿ ಇರುವವರು ಇದನ್ನೆಲ್ಲ ಅರಗಿಸಿಕೊಳ್ಳಲು ಆಗುತ್ತಿಲ್ಲ. ನಮ್ಮ ಕಾರ್ಯಕರ್ತರನ್ನು ಬಂಧಿಸಿದ್ದನ್ನು ನಾನು ಖಂಡಿಸ್ತೇನೆ. ನಾಳೆ ನಾವೇ ನಗರದಲ್ಲಿ ನಮ್ಮ ಶಾಸಕರೆಲ್ಲರೂ ಸೇರಿಕೊಂಡು ಪೇ ಸಿಎಂ ಪೋಸ್ಟರ್‌ ಅಂಟಿಸುತ್ತೇವೆ. ಏನು ಮಾಡುತ್ತಾರೆ ನೋಡಿಯೇ ಬಿಡೋಣ.  ನಮ್ಮ ಮೇಲೆಯೂ ಅವರು ಕೆಲ ಕ್ಯೂಆರ್‌ ಕೋಡ್‌ ಮಾಡಿದ್ದಾರೆ. ಅದಕ್ಕೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಕಿಡಿ ಕಾರಿದ್ದರು.

BIG NEWS : ಕೇರಳದಲ್ಲಿ ಹಿಂಸಾಚಾರಕ್ಕೆ ತಿರುಗಿದ ಪಿಎಫ್ಐ : ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ ಹೈಕೋರ್ಟ್ | Kerala High Court

BIG NEWS: ʻನಾನು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದೇನೆʼ: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ | Congress President poll

Share.
Exit mobile version