ಬೆಂಗಳೂರು :   ಪೇಸಿಎಂ ಪೋಸ್ಟರ್ ವಿವಾದ ಸದ್ಯ ರಾಜ್ಯ ರಾಜಕಾರಣದಲ್ಲಿ ಭುಗಿಲೆದ್ದಿದೆ. ರಾಜ್ಯ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ದೊಡ್ಡ ವಾರ್ ನಡೀತಿದೆ.

ಹೌದು, ರಾಜ್ಯದಲ್ಲಿ ಪೇ ಸಿಎಂ ಅಭಿಯಾನ ಆರಂಭವಾದ ನಂತರ ರಾಜಕೀಯದಲ್ಲಿ ಪರಸ್ಪರ ಕೆಸರೆರೆಚಾಟ ಆರಂಭವಾಗಿದೆ. ಅಷ್ಟೇ ಅಲ್ಲದೆ ಸದನದ ಹೊರಗೂ ಪೇಸಿಎಂ ಪೋಸ್ಟರ್ ಕಿಡಿ ಹೊತ್ತಿಸಲು ಕಾಂಗ್ರೆಸ್ ನಿರ್ಧರಿಸಿದೆ.

ಈ ಹಿನ್ನೆಲೆ ಈ ನಡುವೆ ಭಾರತ್ ಜೋಡೋ ಯಾತ್ರೆ ಸಭೆ ನಡೆಸುವ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ  ಹಾಗೂ ಎಐಸಿಸಿ ಜನರಲ್ ಸೆಕ್ರೆಟರಿ ಕೆ.ಸಿ.ವೇಣುಗೋಪಾಲ್ ರಾಜ್ಯಕ್ಕೆ ಆಗಮಿಸಿದ್ದು, ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಸಭೆ ನಡೆಸುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಸಭೆಯಲ್ಲಿ ಭಾಗಿಯಾಗಿದ್ದು, ಏನಾದರೂ ಹೊಸ ಪ್ಲ್ಯಾನ್ ಮಾಡಿದ್ದಾರಾ ಎಂಅನುಮಾನ ಮೂಡಿದೆ.

ಹೌದು, ಪೇ ಸಿಎಂ ಪೋಸ್ಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತರ ಬಂಧನದ ಬಳಿಕ ಸಿಡಿದೆದ್ದಿದ್ದ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಾವೇ ಪೋಸ್ಟರ್ ಅಂಟಿಸುತ್ತೇವೆ ಎಂದು ಸ್ವತಹ ಹೇಳಿದ್ದರು. ಇಂದು ಕೈ ನಾಯಕರು ಪೋಸ್ಟರ್ ಅಂಟಿಸಲಿದ್ದಾರಾ..? ಈ ಪೋಸ್ಟ್‍ ವಾರ್ ಪರಸ್ಪರ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗುತ್ತಾ ಎಂಬ ಪ್ರಶ್ನೆ ಮೂಡಿದೆ.

ಬಿಜೆಪಿ ವಿರುದ್ಧ ಪೋಸ್ಟರ್ ಅಭಿಯಾನಕ್ಕೆ ಕೈ ನಾಯಕರು ಸಾಥ್ ನೀಡಿದ್ದು, ಏನೇ ಆಗಲಿ ನಾವು ಪೋಸ್ಟರ್ ಅಂಟಿಸುತ್ತೀವಿ ಎಂದು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸವಾಲೆಸೆದಿದ್ದಾರೆ. ಪೋಸ್ಟರ್ ಅಂಟಿಸುತ್ತೇವೆ ಬೇಕಾದರೆ ಬಂಧಿಸಲಿ ಎಂದು ಸವಾಲು ಹಾಕಿದ್ದರು. ಕೈ ಕಾರ್ಯಕರ್ತರ ಬಂಧನದಿಂದ ಸಿಡಿದೆದ್ದ ಕಾಂಗ್ರೆಸ್ ನ ಮುಂದಿನ ನಡೆ ಏನು ಎಂಬುದರ ಬಗ್ಗೆ ಇಂದು ಗೊತ್ತಾಗಲಿದೆ.

ʻಮೂನ್‌ಲೈಟಿಂಗ್ ʼಎಂದರೇನು? ಐಟಿ ಕಂಪನಿಗಳು ಇದನ್ನು ಏಕೆ ವಿರೋಧಿಸುತ್ತಿವೆ? ಇಲ್ಲಿದೆ ಸಂಪೂರ್ಣ ಮಾಹಿತಿ! | What is moonlighting

BREAKING NEWS : PFI ಮೇಲೆ ರೇಡ್‌ ಬೆನ್ನಲ್ಲೇ ಅಲರ್ಟ್‌ : ಹೊಸ ಸುತ್ತೋಲೆ ಹೊರಡಿಸಿದ ʼಎಡಿಜಿಪಿ ಅಲೋಕ್‌ ಕುಮಾರ್‌ ʼ

Share.
Exit mobile version