ನವದೆಹಲಿ: ಖ್ಯಾತ ತೆಲುಗು ನಟ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಅವಾನ್ ಕಲ್ಯಾಣ್ ತಮ್ಮ ಮಗ ಮಾರ್ಕ್ ಶಂಕರ್ ಮತ್ತು ಕುಟುಂಬದೊಂದಿಗೆ ಹೈದರಾಬಾದ್ಗೆ ಮರಳಿದರು
ಸಿಂಗಾಪುರದ ಶಾಲೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮಾರ್ಕ್ ಶಂಕರ್ ಗಾಯಗೊಂಡಿದ್ದರು. ಏಪ್ರಿಲ್ 8 ರಂದು ಮಾರ್ಕ್ ಶಂಕರ್ ಮತ್ತು ಇತರ ಮಕ್ಕಳನ್ನು ಸಿಂಗಾಪುರದಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯರು ರಕ್ಷಿಸಿದ್ದಾರೆ.
ಸಿಂಗಾಪುರದಲ್ಲಿ ಆಸ್ಪತ್ರೆಗೆ ದಾಖಲಾದ ಕೆಲವು ದಿನಗಳ ನಂತರ, ಮಾರ್ಕ್ ಶಂಕರ್ ಈಗ ಹೈದರಾಬಾದ್ಗೆ ಮರಳಿದ್ದಾರೆ. ಪವನ್ ಕಲ್ಯಾಣ್ ಅವರು ತಮ್ಮ ಮಗನನ್ನು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಪತ್ನಿ ಅನ್ನಾ ಲೆಜ್ನೆವಾ ಮತ್ತು ಮಗಳು ಪೊಲೆನಾ ಅಂಜನಾ ಪವನೋವಾ ಅವರೊಂದಿಗೆ ಕರೆದೊಯ್ಯುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮಾರ್ಕ್ ಅವರ ಕೈ ಮತ್ತು ಶ್ವಾಸಕೋಶಗಳಿಗೆ ಗಾಯಗಳಾಗಿವೆ ಎಂದು ಆರಂಭಿಕ ವರದಿಗಳು ಸೂಚಿಸಿವೆ. ಅವರು ಸಿಂಗಾಪುರದ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಘಟನೆ ನಡೆದ ಕೆಲವೇ ಗಂಟೆಗಳ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪವನ್ ಕಲ್ಯಾಣ್, ಹೊಗೆ ಉಸಿರಾಟದಿಂದ ಶ್ವಾಸಕೋಶಕ್ಕೆ ಆಗಿರುವ ಹಾನಿಯನ್ನು ಕಂಡುಹಿಡಿಯಲು ತಮ್ಮ ಮಗ ಬ್ರಾಂಕೋಸ್ಕೋಪಿಗೆ ಒಳಗಾಗಬೇಕಾಯಿತು ಎಂದು ಹೇಳಿದರು.
ವಿಶಾಖಪಟ್ಟಣಂನಲ್ಲಿ ತಮ್ಮ ಕಾರ್ಯಕ್ರಮ ರದ್ದುಗೊಳಿಸಿದ ನಂತರ, ಪವನ್ ಕಲ್ಯಾಣ್, ಅವರ ನಟ-ಸಹೋದರ ಚಿರಂಜೀವಿ ಮತ್ತು ಅವರ ಪತ್ನಿ ಸುರೇಖಾ ಅವರು ಮಾರ್ಕ್ ಶಂಕರ್ ನೋಡಲು ಸಿಂಗಾಪುರಕ್ಕೆ ತೆರಳಿದರು.
ಈ ಘಟನೆಯ ಎರಡು ದಿನಗಳ ನಂತರ, ಮೆಗಾಸ್ಟಾರ್ ಚಿರಂಜೀವಿ ತಮ್ಮ ಸಹೋದರನೊಂದಿಗೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ