ನವದೆಹಲಿ : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ಬಂಧನದಲ್ಲಿರುವ ಶಿವಸೇನೆ ನಾಯಕ ಸಂಜಯ್ ರಾವುತ್ ಅವರ 3 ದಿನಗಳ ಕಸ್ಟಡಿ ಇಂದು ಅಂತ್ಯಗೊಳ್ಳಲಿದ್ದು, ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.

ಮುಂಬೈನ ‘ಚಾಲ್’ ಮರುಅಭಿವೃದ್ಧಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಗಸ್ಟ್ 1 ರಂದು ಜಾರಿ ನಿರ್ದೇಶನಾಲಯವು (ED)ರಾವುತ್ ಅವರನ್ನು ಬಂಧಿಸಿತ್ತು.

ಸೋಮವಾರ, ರಾವುತ್ ಅವರನ್ನು ಮೂರು ದಿನಗಳ ಕಾಲ ಫೆಡರಲ್ ಏಜೆನ್ಸಿಯ ವಶಕ್ಕೆ ನೀಡಲಾಯಿತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳ ವಿಚಾರಣೆಗೆ ಎಂಟು ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಇಡಿ ಕೋರಿಕೆಯನ್ನು ಮುಂಬೈ ವಿಶೇಷ ನ್ಯಾಯಾಧೀಶ ಎಂಜಿ ದೇಶಪಾಂಡೆ ಅವರು ನಿರಾಕರಿಸಿದ್ದಾರೆ.

BIGG NEWS: ಅಪ್ಪು ನೆನಪಿಗಾಗಿ ನಾಳೆಯಿಂದ ಲಾಲ್‌ ಬಾಗ್‌ ನಲ್ಲಿ ಫ್ಲವರ್ ಶೋ..! ವಿವಿಧ ಆಕೃತಿಯ ಹೂವುಗಳಿಂದ ಸಿಂಗಾರ

ದಕ್ಷಿಣ ಮುಂಬೈನ ಬಲ್ಲಾರ್ಡ್ ಎಸ್ಟೇಟ್‌ನಲ್ಲಿರುವ ಇಡಿ ವಲಯ ಕಚೇರಿಯಲ್ಲಿ ಆರು ಗಂಟೆಗಳ ಕಾಲ ಇಡಿ ಅವರನ್ನು ವಿಚಾರಣೆ ನಡೆಸಿತ್ತು. ಬಳಿಕ ಪಿಎಂಎಲ್‌ಎ ಅಡಿಯಲ್ಲಿ ಅವರನ್ನು ಬಂಧಿಸಲಾಯಿತು. ಇದೇ ವೇಳೆ ರಾವತ್ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಇಡಿ ಆರೋಪಿಸಿದೆ.

ವಸತಿ ಪುನರಾಭಿವೃದ್ಧಿ ಯೋಜನೆಯಲ್ಲಿನ ಅಕ್ರಮಗಳಿಂದ ರೌವತ್​ ಮತ್ತು ಅವರ ಕುಟುಂಬವು ಒಂದು ಕೋಟಿಗೂ ಹೆಚ್ಚು ಮೌಲ್ಯದ ಅಪರಾಧದ ಆದಾಯ ಹೊಂದಿದೆ ಎಂದು ಸಂಸ್ಥೆ ಸೋಮವಾರ ನ್ಯಾಯಾಲಯಕ್ಕೆ ಇಡಿ ತಿಳಿಸಿತ್ತು.

Share.
Exit mobile version