ಮೈಸೂರು: ಪ್ರಯಾಣಿಕರೊಬ್ಬರು ರೈಲ್ವೆ ನಿಲ್ದಾಣದ ಫ್ಲಾಟ್ ಫಾರ್ಮ್ ನಲ್ಲಿಯೇ ಲ್ಯಾಪ್ ಟಾಪ್ ಒಂದನ್ನು ಬಿಟ್ಟು ಹೋಗಿದ್ದರು. ಇಂತಹ ಲ್ಯಾಪ್ ಟಾಪ್ ಪತ್ತೆ ಹಚ್ಚಿದಂತ ರೈಲ್ವೆ ಸಿಬ್ಬಂದಿಗಳು, ಮರಳಿ ಪ್ರಯಾಣಿಕನಿಗೆ ನೀಡಿ, ಪ್ರಾಮಾಣಿಕತೆಯನ್ನು ಮರೆದಿರುವಂತ ಘಟನೆ ಮೈಸೂರಿನ ನೈರುತ್ಯ ರೈಲ್ವೆ ವಿಭಾಗದಲ್ಲಿ ನಡೆದಿದೆ.
ಪ್ರಯಾಣಿಕ ನಂದಕಿಶೋರ್ ಎಸ್. ಎನ್. ಅವರು 25.10.2025 ರಂದು ಹರಿಹರ ದಿಂದ ರೈಲು ಸಂಖ್ಯೆ 22697ರಲ್ಲಿ ಪ್ರಯಾಣ ಆರಂಭಿಸುವ ಸಂದರ್ಭದಲ್ಲಿ ತಮ್ಮ ಲ್ಯಾಪ್‌ಟಾಪ್ ಅನ್ನು ಹರಿಹರ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ ಸಂಖ್ಯೆ 2/3 ರಲ್ಲಿ ಮರೆತು ಬಿಟ್ಟು ಹೋಗಿದ್ದರು.
ಈ ಮಾಹಿತಿ ಪ್ರಯಾಣ ಟಿಕೆಟ್ ಪರೀಕ್ಷಕರಾದ ಅವಿನಾಶ್ ಭೋವಿ ಅವರಿಂದ ಮಾಹಿತಿ ದೊರೆತ ತಕ್ಷಣ, ಅಂತರರಾಷ್ಟ್ರೀಯ ವಾಲಿಬಾಲ್ ಆಟಗಾರರಾದ ಶ್ರೀ ಕೆ. ಇಮ್ತಿಯಾಜ್ ಅಹ್ಮದ್, ವಾಣಿಜ್ಯ ಹಾಗೂ ಕಾಯ್ದಿರಿಸುವ ಲಿಪಿಕರು, ಹರಿಹರ, ತಕ್ಷಣವೇ ಶೋಧ ಕಾರ್ಯ ಪ್ರಾರಂಭಿಸಿದರು. ಲ್ಯಾಪ್‌ಟಾಪ್ ಪತ್ತೆಹಚ್ಚಿ ಸುರಕ್ಷಿತವಾಗಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ರೈಲು ನೌಕರರ ಈ ಸಮಯೋಚಿತ ಮತ್ತು ಪ್ರಾಮಾಣಿಕ ಕಾರ್ಯವು ನೈರುತ್ಯ ರೈಲ್ವೆ ನೌಕರರ ಪ್ರಾಮಾಣಿಕತೆ, ನಿಷ್ಠೆ ಹಾಗೂ ಪ್ರಯಾಣಿಕ ಸೇವೆಯತ್ತ ಅವರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.








