ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಭಾರತದ ಶಟ್ಲರ್ ಪಿ.ವಿ.ಸಿಂಧು ಎಸ್ಟೋನಿಯಾದ ಕುಬಾ ಕ್ರಿಸ್ಟಿನಾ ಅವರನ್ನು ಸೋಲಿಸುವ ಮೂಲಕ ರೌಂಡ್ ಆಫ್ 16ಗೆ ಪ್ರವೇಶಿಸಿದರು. ಸಧ್ಯ ಲಕ್ಷ್ಯ ಸೇನ್ ಕೂಡ ಸಿಂಧು ಅವ್ರನ್ನ ಹಿಂಬಲಿಸಿದ್ದು, 16ನೇ ಸುತ್ತಿದೆ ಲಗ್ಗೆ ಇಟ್ಟಿದ್ದಾರೆ.
ಏತನ್ಮಧ್ಯೆ, ಭಾರತದ ಶೂಟರ್ ಸ್ವಪ್ನಿಲ್ ಸಿಂಗ್ 50 ಮೀಟರ್ ಏರ್ ರೈಫಲ್ 3 ಪೊಸಿಷನ್ಸ್ ಫೈನಲ್ನಲ್ಲಿ ತಮ್ಮ ಸ್ಥಾನವನ್ನ ಭದ್ರಪಡಿಸಿಕೊಂಡರೆ, ಐಶ್ವರ್ಯಾ ಸಿಂಗ್ ತೋಮರ್ ಅರ್ಹತೆಯನ್ನ ಕಳೆದುಕೊಂಡರು. ಸ್ವಪ್ನಿಲ್ ಒಟ್ಟು 590 ಅಂಕಗಳೊಂದಿಗೆ ಎಂಟು ಸ್ಥಾನಗಳಲ್ಲಿ ಒಂದನ್ನು ಪಡೆಯಲು 7ನೇ ಸ್ಥಾನ ಪಡೆದರು.
ಅಂದ್ಹಾಗೆ, ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತ ಎರಡು ಕಂಚಿನ ಪದಕಗಳನ್ನು ಗೆದ್ದಿದೆ. ದಕ್ಷಿಣ ಕೊರಿಯಾ ವಿರುದ್ಧದ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಕಂಚಿನ ಪದಕ ಗೆದ್ದರು.
ರಾಜ್ಯದಲ್ಲಿ ಮತ್ತೆ ಸದ್ದು ಮಾಡಿದ ‘ಭ್ರೂಣಹತ್ಯೆ’ : ರಾಮನಗರ ಪೊಲೀಸರ ವಿರುದ್ಧ ಮೋದಿಗೆ ಪತ್ರ ಬರೆದ ಮಹಿಳೆ!
‘ಸೆಲೆಬ್ರಿಟಿ ಆದ ಮಾತ್ರಕ್ಕೆ ಬೇರೆ ಊಟ ನೀಡಲು ಆಗಲ್ಲ’ : ಮನೆ ಊಟ ಕೇಳಿದ ದರ್ಶನ್ ಗೆ ಹೈಕೋರ್ಟ್ ತರಾಟೆ
ಕನ್ನಡಿಗರೇ…ಸಂಕಷ್ಟದಲ್ಲಿರುವ ಕೇರಳದ ಜನರಿಗೆ ಸಹಾಯ ಮಾಡಬೇಕಾ? ಜಸ್ಟ್ ಹೀಗೆ ಮಾಡಿ..!