ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ 2024ರ ಫೈನಲ್ ಪಂದ್ಯದಲ್ಲಿ ಸರ್ಬಿಯಾದ ಟೆನಿಸ್ ತಾರೆ ನೊವಾಕ್ ಜೊಕೊವಿಕ್ ಅವರು ರಾಫೆಲ್ ನಡಾಲ್ ಅವರನ್ನು ಮಣಿಸಿದ್ದಾರೆ. ಹೀಗಾಗಿ ಪ್ಯಾರೀಸ್ ಒಲಂಪಿಕ್ಸ್ 2024ರ ಪಂದ್ಯಾವಳಿಯಿಂದ 2ನೇ ಸುತ್ತಿನಲ್ಲಿ ಸೋಲು ಕಂಡು, ರಾಫೆಲ್ ನಾಡಲ್ ಪಂದ್ಯಾವಳಿಯಿಂದ ಹೊರ ಬಿದ್ದಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ನ ಎರಡನೇ ದಿನದಂದು ಇತಿಹಾಸ ಬರೆದ ನಂತರ, ಭಾರತೀಯ ತಂಡವು ಜುಲೈ.29 ರ ಸೋಮವಾರ ದೇಶದ ಪದಕಗಳ ಪಟ್ಟಿಗೆ ಹೆಚ್ಚಿನ ಪದಕಗಳನ್ನು ಸೇರಿಸಲು ಎದುರು ನೋಡುತ್ತಿದೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಪದಕ ಸ್ಪರ್ಧೆಯಲ್ಲಿ ಸ್ಥಾನ ಪಡೆದಿರುವ ರಮಿತಾ ಜಿಂದಾಲ್ ಅವರಿಂದ ಭಾರತ ಹೆಚ್ಚಿನ ಭರವಸೆ ಹೊಂದಿದೆ. ಅರ್ಜುನ್ ಬಬುಟಾ ಕೂಡ ಪದಕ ಗೆಲ್ಲುವ ಅವಕಾಶವನ್ನು ಹೊಂದಿದ್ದರೂ, ಅಂತಿಮವಾಗಿ ಸೋಲು ಕಂಡು, ಪದಕದ ಭರವಸೆ ಸುಳ್ಳಾಗಿತ್ತು.
ಭಾರತದ ಪುರುಷರ ಬಿಲ್ಲುಗಾರಿಕೆ ತಂಡ ಇಂದು ಕಣಕ್ಕಿಳಿಯಲಿದೆ. ಬಿಲ್ಲುಗಾರರು ಕ್ವಾರ್ಟರ್ ಫೈನಲ್ ನಲ್ಲಿ ಸ್ಪರ್ಧಿಸಲಿದ್ದಾರೆ. ಎಲ್ಲಾ ಹಾದಿಯಲ್ಲಿ ಸಾಗುವ ಭರವಸೆ ಹೊಂದಿದ್ದಾರೆ. ಭಾರತ ಪುರುಷರ ಹಾಕಿ ತಂಡ ತನ್ನ ಎರಡನೇ ‘ಬಿ’ ಗುಂಪಿನ ಪಂದ್ಯದಲ್ಲಿ ಅರ್ಜೆಂಟೀನಾ ತಂಡವನ್ನು ಎದುರಿಸಲಿದೆ.
ರಾಜಕೀಯ ಲಾಭಕ್ಕಾಗಿ ಮೇಕೆದಾಟು ಯೋಜನೆಯ ಕುರಿತು ತಮಿಳುನಾಡು ಕ್ಯಾತೆ: ಸಿಎಂ ಸಿದ್ಧರಾಮಯ್ಯ ಕಿಡಿ
BREAKING : ಜಮ್ಮು-ಕಾಶ್ಮೀರದಲ್ಲಿ ಭೀಕರ ಸ್ಫೋಟ : ನಾಲ್ವರು ದುರ್ಮರಣ |Blast at J&K’s Baramulla