ಕೆಎನ್ ಎನ್ ಡಿಜಿಟಲ್ ಡೆಸ್ಕ್ : ಮಕ್ಕಳೊಂದಿಗೆ ನೀವೂ ಮಕ್ಕಳಾಗಿ ಅವರೊಂದಿಗೆ ಆಟವಾಡಿ, ಇದರಿಂದ ನಿಮ್ಮ ಹಾಗು ಮಗುವಿನ ಬಾಂಧವ್ಯ ಬಿಗಿಯಾಗುತ್ತದೆ. ಬೆಳೆಯುವ ಮಕ್ಕಳ ಆರೋಗ್ಯ ತುಂಬಾ ಮುಖ್ಯ. ಚಿಕ್ಕವರಿದ್ದಾಗ ಅವರನ್ನು ಅವರ ಯಾವ ರೀತಿ ಬೆಳೆಸುತ್ತೇವೆ ಹಗೆಯೇ ದೊಡ್ಡವರಾದ ಮೇಲೆ ಅವರು ಇರುತ್ತಾರೆ. ಹಾಗಾಗಿ ಅವರನ್ನು ಚಿಕ್ಕವರಿದ್ದಾಗಲೇ ಸರಿಯಾಗಿ ಬೆಳಸೋದು ಪಾಕಲರ ಆಧ್ಯ ಕರ್ತವ್ಯ.
ಇಂದಿನ ಆನ್‌ಲೈನ್ ಯುಗದಲ್ಲಿ ಚಿಕ್ಕ ಮಕ್ಕಳು ಹೆಚ್ಚು ಕಾಲ ಮುಬೈಲ್ ಟೀವಿ, ಟ್ಯಾಬ್ಲೈಟ್‌ಗಳಲ್ಲಿ ಹೆಚ್ಚು ಮುಳುಗಿರುತ್ತಾರೆ. ಇದರಿಂದ ಅವರು ದೈಹಿಕವಾಗಿ ದರ್ಬಲ ಗೊಳ್ಳುತ್ತಿದ್ದಾರೆ ಹಾಗು ಅದು ಅವರ ಮೆದುಳಿನ ಆರೋಗ್ಯಕ್ಕೂ ತುಂಬಾ ಕೆಟ್ಟ ಪರಿಣಾಮ ಬೀರುತ್ತಿದೆ. ಆದಷ್ಡು ಮಕ್ಕಳನ್ನು ಹೊರಗಡೆ ಆಡಲು ಬಿಡಿ. ಹೆಚ್ಚು ದೈಹಿಕ ಚಟಿವಟಿಕೆಯಲ್ಲಿ ತೊಡಗಿಸಿ. ಯೋಗ ವ್ಯಾಯಾಮ ಮಾಡಿಸಿ. ಇದೆಲ್ಲಾ ಚಿಕ್ಕ ಮಕ್ಕಳ ಕ್ರಿಯಾಶೀಲತೆ ಹೆಚ್ಚಿಸಿ ಅವರನ್ನು ಮಾನಸಿಕವಾಗಿ ಹಾಗು ದೈಹಿಕವಾಗಿ ಹೆಚ್ಚು ಸದೃಢರನ್ನಾಗಿ ಮಾಡುತ್ತದೆ.
ಮಕ್ಕಳನ್ನು ಹೊರಗಡೆ ಆಟಕ್ಕೆ ಬಿಡಿ. ಉದ್ಯಾನವನ, ಮೈದಾನಗಳಲ್ಲಿ ಮುಕ್ತವಾಗಿ ಆಡಲು ಬಿಡಿ. ಹೊರಾಂಗಣ ಆಟಗಳನ್ನು ಹೆಚ್ಚು ಆಡಿಸಿ. ಸ್ವಿಮ್ಮಿಂಗ್ ಸೈಕ್ಲಿಂಗ್ ಮುಂತಾ ಚಟುವಟಿಯಲ್ಲಿ ಅವರನ್ನು ತೊಡಗಿಸಿ.
ಓಟ ಮಕ್ಕಳ ಸ್ನಾಯುಗಳನ್ನು ಹೆಚ್ಚು ಬಲಶಾಲಿಯನ್ನಾಗಿ ಮಾಡುತ್ತದೆ. ಅವರನ್ನು ಮುಕ್ತವಾಗಿ ಓಡಲು ಬಿಡಿ. ಓಟಕ್ಕೆ ಬೇಕಾಗುವಂತ ವಿಶಾಲ ಸ್ಥಳಗಳನ್ನು ಮಕ್ಕಳನ್ನು ಕರೆದುಕೊಂಡು ಹೋಗಿ.
ಮಕ್ಕಳಿಗೆ ಇಷ್ಟವಾಗುವ ಹಾಗು ಅವರು ಖುಷಿಯಿಂದ ಮಾಡುವ ದೈಹಿಕ ಚಟಿವಟಿಕೆ ಎಂದರೆ ಅದು ಡ್ಯಾನ್ಸ್. ಡ್ಯಾನ್ಸ್ ಹೀಗೆ ಮಾಡಬೇಕೆಂಬ ಯಾವ ಕಾನೂನು ಇಲ್ಲ. ಒಳ್ಳೆಯ ದೊಡ್ಡ ಮ್ಯೂಸಿಕ್ ಹಾಕಿ ಮಕ್ಕಳನ್ನು ಮುಕ್ತವಾಗಿ ಕುಣಿಯಲು ಬಿಡಿ. ಅದು ಸಹ ಸವರಿಗೆ ಒಂದೊಳ್ಳೆ ವ್ಯಾಯಾಮವಾಗುತ್ತದೆ. ಜೊತೆಗೆ ನೀವೂ ಕುಣಿಯಿರಿ.
ಮಕ್ಕಳಿಗೆ ಸ್ಕಿಪ್ಪಿಂಗ್ ಎಲ್ಲಕ್ಕಿಂತಲೂ ಬೆಸ್ಟ್ ಎಕ್ಸಸೈಸ್. ಇದು ಮಗುವಿನ ಎತ್ತರ ಹೆಚ್ಚು ಮಾಡುತ್ತದೆ ಹಾಗು ಸ್ನಾಯುಗಳು ಶಕ್ತಿಯುತವಾಗಿರಿಸುತ್ತದೆ. ಸ್ಕಿಪ್ಪಿಂಗ್ ಇಡೀ ದೇಹವನ್ನೇ ಸಮನ್ವಯಗೊಳಿಸುತ್ತದೆ.
ಹೊಸ ಆಟಗಳಲ್ಲದೇ ನಿಮ್ಮ ಮಕ್ಕಳಿಗೆ ಹಳೆಯ ಸಾಂಪ್ರದಾಯ ಆಟಗಳಾದ ಲಗೋರಿ. ಗಿಲ್ಲಿದಾಂಡು, ಮರಳಿನಲ್ಲಿ ಮನೆ ಕಟ್ಟುವ ಆಟ, ಆನಿಕಲ್ಲು ಆಟ, ಚೌಕಾಬಾರ ಆಟ ಇಂತಹ ಹಳೆಯ ಆಟಗಳನ್ನು ಕಲಿಸಿಕೊಡಿ. ಇಂತಹ ಆಟಗಳು ಮಕ್ಕಳ ಬೌಧಿಕ ಮಟ್ಟ ಹೆಚ್ಚಿಸಿ ಹಾಗು ಮೆದುಳನ್ನು ಚರುಕುಗೊಳಿಸುತ್ತದೆ. ಇಲ್ಲಿ ಮುಖ್ಯವಾದ ವಿಷಯವೆಂದರೆ ಮಕ್ಕಳೊಂದಿಗೆ ನೀವು ಮಕ್ಕಳಾಗಿ ಅವರೊಂದಿಗೆ ಬೆರೆತು ಆಟವಾಡಿ. ಅವರಿವರು ಆಡಿಕೊಳ್ಳುತ್ತಾರೆಂಬ ಮುಜುಗರ ಬೇಡ. ಮಕ್ಕಳೊಂದಿಗೆ ಪಾಕಲರು ಬೆರತು ಆಟವಾಡಿದರೆ ಅವರ ನಿಮ್ಮ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ. ಮಕ್ಕಳನ್ನು ಮೈದಾನದಲ್ಲಿ ಅಥವಾ ಪಾರ್ಕ್‌ನಲ್ಲಿ ಆಟವಾಡಲು ಬಿಟ್ಟು ನೀವು ಮಾತ್ರ ಒಂದು ಮೂಲೆಯಲ್ಲಿ ಕೂತ ಮೊಬೈಲ್‌ನಲ್ಲಿ ಮುಳುಗಬೇಡಿ. ಇಂತಹ ತಪ್ಪು ಮಾಡದೇ ಮಕ್ಕಳೊಂದಿಗೆ ಮಕ್ಕಳಾಗಿ ಮುಕ್ತವಾಗಿ ನೀವು ಆಟವಾಡಿ.
ಬೆಳಗ್ಗೆ ಮನೆಯಲ್ಲಿಯೇ ನೀವು ಯೋಗ ಮಾಡುವಾಗ ಮಕ್ಕಳನ್ನೂ ನಿಮ್ಮ ಜೊತೆ ಜಾಯಿನ್ ಆಗಲು ಹೇಳಿ. ಅವರಿಗೂ ಸಣ್ಣ ಪುಟ್ಟ ಎಕ್ಸ್ಸೈಸ್‌ಗಳನ್ನು ಮಾಡಿಸಿ. ಇದರಿಂದ ಅವರ ಮಾನಸಿಕ ಹಾಗು ದೈಹಿಕ ಆರೋಗ್ಯ ಸೃಢವಾಗಿರುತ್ತದೆ.