ಧಾರವಾಡ : ಧಾರವಾಡ ರಂಗಾಯಣ ಚಿಣ್ಣರಮೇಳ-2025 ಮಕ್ಕಳ ಬೇಸಿಗೆ ರಂಗ ತರಬೇತಿ ಶಿಬಿರವನ್ನು ಎಪ್ರೀಲ್ 10, 2025 ರಿಂದ ಮೇ 4, 2025 ರವರೆಗೆ ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ಪ್ರವೇಶ ಪಡೆಯುವವರು ಮಕ್ಕಳ 2 ಭಾವಚಿತ್ರ ಹಾಗೂ ವಯಸ್ಸಿನ ದಾಖಲಾತಿ ಪ್ರಮಾಣ ಪತ್ರದೊಂದಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕ ರೂ.20 ಹಾಗೂ ಪ್ರವೇಶ ಶುಲ್ಕ ರೂ. 2,000 ಯನ್ನು ನಿಗದಿಪಡಿಸಲಾಗಿದೆ. ಅರ್ಜಿ ನಮೂನೆಯನ್ನು ರಂಗಾಯಣ ಕಚೇರಿಯಲ್ಲಿ ಪಡೆದು, ಎಪ್ರಿಲ್ 9, 2025 ಸಂಜೆ 4:30 ಗಂಟೆಯ ಒಳಗಾಗಿ ಪ್ರವೇಶ ಶುಲ್ಕದೊಂದಿಗೆ ಪಾಲಕರು ಖುದ್ದಾಗಿ ತಮ್ಮ ಮಗುವಿನೊಂದಿಗೆ ಬಂದು ಪ್ರವೇಶ ನೋಂದಾಯಿಸಬೇಕು. ಎಪ್ರೀಲ್ 9, 2025 ಕ್ಕೆ 7 ವರ್ಷ ಪೂರ್ಣ ತುಂಬಿರುವ 15 ವರ್ಷದ ಒಳಗಿರುವ ಮಕ್ಕಳು ಮಾತ್ರ ಶಿಬಿರದಲ್ಲಿ ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ-0836-2441706 ಗೆ ಸಂಪರ್ಕಿಸಬಹುದು ಎಂದು ರಂಗಾಯಣ ಪ್ರಕಟಣೆ ತಿಳಿಸಿದೆ.
ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ನಟಿ ರನ್ಯಾ ರಾವ್ ಬಂಧನ ಪ್ರಕರಣ: 2ನೇ ಆರೋಪಿ ತರುಣ್ ರಾಜು ಜಾಮೀನು ಅರ್ಜಿ ವಜಾ