ಬೆಂಗಳೂರು : ರಾಜ್ಯಾದ್ಯಂತ ಮೇ. 29 ರಿಂದ 2024-25 ನೇ ಸಾಲಿನ ಶಾಲೆಗಳು ಆರಂಭವಾಗಲಿದ್ದು, ಒಂದನೇ ತರಗತಿಗೆ ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರು ಈ ಪ್ರಮುಖ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ಮಕ್ಕಳನ್ನು ಈ ಬಾರಿ ಹೊಸದಾಗಿ ಒಂದನೇ ತರಗತಿ ಪ್ರವೇಶಕ್ಕೆ ಹೊರಟಿದ್ದರೆ ನೀವು ಈ ವಿಷಯಗಳ ಬಗ್ಗೆ ತಿಳಿದುಕೊಂಡಿರಲೇ ಬೇಕು. ಒಂದನೇ ತರಗತಿ ಅಡ್ಮಿಷನ್ಗೆ ಮೊದಲನೇಯದಾಗಿ ಮಗುವಿನ ಆಧಾರ್ ಕಾರ್ಡ್ ಹೊಂದಿರಲೇ ಬೇಕಾಗುತ್ತದೆ. ರೇಷನ್ ಕಾರ್ಡ್ ಮತ್ತು ಮಗುವಿನ ಭಾವಚಿತ್ರವನ್ನು ನೀಡಬೇಕಾಗುತ್ತದೆ. 2 ಭಾವಚಿತ್ರವನ್ನು ನೀಡುವುದು ಕಡ್ಡಾಯ. ಇವಿಷ್ಟು ಎಲ್ಲಾ ವಿದ್ಯಾರ್ಥಿಗಳಿಗೂ ಕಡ್ಡಾಯವಾಗಿದೆ.
ಒಂದನೇ ತರಗತಿ ಪ್ರವೇಶಕ್ಕೆ ಈ ದಾಖಲೆಗಳು ಕಡ್ಡಾಯ
ಮಗುವಿನ ಆಧಾರ್ ಕಾರ್ಡ್
ಮಗುವಿನ ಜನನ ಪ್ರಮಾಣ ಪತ್ರ
ಮಗುವಿನ ಜಾತಿ ಪ್ರಮಾಣ ಪತ್ರ
ರೇಷನ್ ಕಾರ್ಡ್
ಪೋಷಕರ ಆಧಾರ್ ಕಾರ್ಡ್
ತಂದೆ ಅಥವಾ ತಾಯಿಯ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ
ಹೆಣ್ಣುಮಗುವಾಗಿದ್ದ ಭಾಗ್ಯಲಕ್ಷ್ಮಿ ಬಾಂಡ್