ಬಳ್ಳಾರಿ : ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಮೊರಾರ್ಜಿ ದೇಸಾಯಿ, ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ವಿಶೇಷ ವರ್ಗಗಳ ಮೀಸಲಾತಿ ಅಡಿಯಲ್ಲಿ 6ನೇ ತರಗತಿಗೆ ಪ್ರವೇಶಾತಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ.ಬಿ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿರುವ 19 ವಸತಿ ಶಾಲೆಗಳಲ್ಲಿ ವಿಶೇಷ ಮೀಸಲಾತಿ ಅಡಿಯಲ್ಲಿ ಪ್ರಸಕ್ತ ಸಾಲಿಗೆ 6ನೇ ತರಗತಿ ಪ್ರವೇಶಾತಿಗೆ ಅವಕಾಶ ಕಲ್ಪಿಸಲಾಗಿದ್ದು, ಅರ್ಜಿ ಸಲ್ಲಿಸಲು ಜು.25 ಕೊನೆಯ ದಿನಾಂಕವಾಗಿದೆ. ಆಸಕ್ತ ವಿದ್ಯಾರ್ಥಿಗಳು ಕೆಇಎ ಇಲಾಖೆ ವೆಬ್‍ಸೈಟ್ https://cetonline.karnataka.gov.in/kreis24d/ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಇಲಾಖಾ ವ್ಯಾಪ್ತಿಯಲ್ಲಿ ಬರುವ ಸಫಾಯಿ ಕರ್ಮಚಾರಿ, ಗುರುತಿಸಿರುವ ಮ್ಯಾನ್ಯುಯಲ್ ಸ್ಕ್ಯಾವೆಂಜರ್, ಚಿಂದಿ ಆಯುವವರು, ಸ್ಮಶಾನ ಕಾರ್ಮಿಕರ ಮಕ್ಕಳು (ಶೇ.10), ಬಾಲ ಕಾರ್ಮಿಕರು, ಜೀತ ವಿಮುಕ್ತ ಕಾರ್ಮಿಕರ ಮಕ್ಕಳು, ಗುರುತಿಸಿರುವ ಮಾಜಿ ದೇವದಾಸಿಯರ ಮಕ್ಕಳು (ಶೇ.10), ಶೇ.25 ಕ್ಕಿಂತ ಹೆಚ್ಚಿನ ಅಂಗವಿಕಲತೆ ಮಕ್ಕಳು, ಹೆಚ್‍ಐವಿ ತುತ್ತಾದ ಮಕ್ಕಳು, ಒಬ್ಬ ಪೆÇೀಷಕ, ಅನಾಥ ಮಕ್ಕಳು (ಶೇ.10), ಅಲೆಮಾರಿ, ಅರೆ ಅಲೆಮಾರಿ ಮಕ್ಕಳು, ಸೈನಿಕರು, ಮಾಜಿ ಸೈನಿಕರ ಮಕ್ಕಳು, ಸರ್ಕಾರಿ ಯೋಜನೆಗಳಿಂದ ಸ್ಥಳಾಂತರಗೊಂಡ ಪೆÇೀಷಕರ ಮಕ್ಕಳು (ಶೇ.10) ಹಾಗೂ ಪರಿಶಿಷÀ್ಟ ಜಾತಿ, ಪರಿಶಿಷ್ಟ ಪಂಗಡಗಳ ಆಶ್ರಮ ವಸತಿ ಶಾಲೆಗಳಲ್ಲಿ 5ನೇ ತರಗತಿ ಉತ್ತೀರ್ಣರಾದ ಮಕ್ಕಳಿಗೆ (ಶೇ.10) ಮೀಸಲಾತಿ ಇರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ವಸತಿ ಶಾಲಾ ಪ್ರಾಂಶುಪಾಲರ ಕಚೇರಿ ಅಥವಾ ಮೊ.8310291951, 7760167576, 9844969858, 9880813536 ಮತ್ತು 8197644160) ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.