ಮಕ್ಕಳ ಸರಿಯಾದ ಬೆಳವಣಿಗೆಗೆ ಕೆಲ ಪೌಷ್ಟಿಕಯುಕ್ತ, ನೈಸರಗಿಕವಾದ ಆಹಾರಗಳನ್ನು ನೀಡಬೇಕು. ಈ ಕೆಳಗಿನ ಆಹಾರಗಳನ್ನು ಮಕ್ಕಳಿಗೆ ಪ್ರತಿನಿತ್ಯ ಸೇವಿಸಲು ಕೊಟ್ಟರೆ ಮಕ್ಕಳ ಸರ್ವತೋಮುಖ ಬೆಳವಣಿಗೆ ಆಗುತ್ತದೆ ಹಾಗು ಮಕ್ಕಳು ದೈಹಿಕವಾಗಿ ಸಧೃಢರಾಗಿರುತ್ತಾರೆ.
ಮೊಟ್ಟೆ: ದಿನಕ್ಕೊಂದು ಮೊಟ್ಟೆ ಮಕ್ಕಳಿಗೆ ಅನೇಕ ರೀತಿಯಲ್ಲಿ ಸಹಾಯವಾಗುತ್ತದೆ. ಇದರಲ್ಲಿ ಹೇರಳವಾಗಿ ಪ್ರೋಟೀನ್ ಅಂಶವಿದ್ದು ಮಕ್ಕಳ ದೈಹಿಕ ಬೆಳವಣಿಗೆಗೆ ಸಂಪೂರ್ಣವಾಗಿ ನೆರವಾಗುತ್ತದೆ. ಇದು ಮಗುವಿಗೆ ಮಾಂಸಖಂಡಗಳನ್ನು ಬಲಗೊಳಿಸುತ್ತದೆ ಹಾಗು ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ.
ಮೊಸರು: ಪ್ಯಾಕೆಟ್ ಮೊಸರಿಗಿಂತ ಮನೆಯಲ್ಲಿಯೇ ಹೆಪ್ಪು ಹಾಕಿದ ಮೊಸರನ್ನು ಮಕ್ಕಳಿಗೆ ಕೊಡುವುದು ಉತ್ತಮ ಅಭ್ಯಾಸ. ಆದಷ್ಟು ಪ್ಯಾಕೆಟ್ ಮೊಸರನ್ನು ಮಕ್ಕಳಿಗೆ ಕೊಡುವುದನ್ನು ಅವೈಡ್ ಮಾಡಿ. ನಿತ್ಯವೂ ಊಟದಲ್ಲಿ ಮಕ್ಕಳಿಗೆ ಮೊಸರು ಮಜ್ಜಿಗೆ ಸೇವಿಸಲು ಕೊಡಿ. ಇದರಲ್ಲಿ ಅಧಿಕ ಪ್ರಮಾಣದಲ್ಲಿ ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್ ಅಂಶವಿದ್ದು ಇವೆಲ್ಲ ಮಕ್ಕಳ ಚರ್ಮಕ್ಕೆ ಹಾಗು ಹೊಟ್ಟೆಯ ಆರೋಗ್ಯ ಕಾಪಾಡುವಲ್ಲಿ ನೆರವಾಗುತ್ತದೆ. ಇದರ ಜೊತೆ ದಿನವೂ ಎರಡು ಹೊತ್ತು ಮಕ್ಕಳಗಿಎ ಹಾಲು ಸೇವಿಸಲು ನೀಡಬೇಕು. ಹಾಲಿನಲ್ಲಿರುವ ಕ್ಯಾಲ್ಸಿಯಂ ಮಕ್ಕಳಿಗೆ ಹೆಚ್ಚು ಶಕ್ತಿ ನೀಡಿ ಸುಸ್ತು, ಆಯಾಸವನ್ನು ಹೋಗಲಾಡಿಸುತ್ತದೆ.
ಕ್ಯಾರೆಟ್: ಕ್ಯಾರೆಟ್ ಸುಲಭವಾಗಿ ಮತ್ತು ಅಗ್ಗವಾಗಿ ಸಿಗುವಂತಹ ತರಕಾರಿ. ಕೆಲವೊಮ್ಮೆ ಮಾತ್ರ ಇದು ತುಂಬಾ ವಿರಳವಾಗಿ ಸಿಗುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿದ್ದಾಗಲೆಲ್ಲಾ ಮಕ್ಕಳಿಗೆ ದಿನವೂ ತಪ್ಪದೇ ಒಂದು ಕ್ಯಾರೆಟ್ ತಿನ್ನಲು ಕೊಡಿ. ಜೊತೆಗೆ ಅಡುಗೆಯಲ್ಲಿ ಹಾಕಿ ನಿತ್ಯವೂ ಮಕ್ಕಳಿಗೆ ಊಟದೊಂದಿಗೆ ಸೇವಿಸಲು ಕೊಡಿ. ಕ್ಯಾರೆಟ್ ಮಕ್ಕಳ ಕಣ್ಣಿನ ಆರೈಕೆಯನ್ನು ಮಾಡುತ್ತದೆ.
ನೆನಸಿಟ್ಟ ಬಾದಾಮಿ: ರಾತ್ರಿ ನೀರಿನಲ್ಲಿ ಬಾದಾಮಿಯನ್ನು ನೆನಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ಬಾದಾಮಿ ಸೇವಿಸಿದರೆ ನಿಮ್ಮ ಆರೋಗ್ಯದ ಮೇಲೆ ಚಮತ್ಕಾರದಂತಹ ಬದಲಾವಣೆಯಾಗುತ್ತದೆ. ಇದು ಮಕ್ಕಳ ಆರೋಗ್ಯವನ್ನು ಸಧೃಢವಾಗಿಡುತ್ತದೆ. ನೆನಸಿಟ್ಟ ಬದಾಮಿಯಲ್ಲಿ ಒಮೆಗಾ 3 ಅಂಶವಿದ್ದು ಬೆಳೆಯುವ ಮಕ್ಕಳ ಮೂಳೆಗಳಿಗೆ ಶಕ್ತಿ ನೀಡುತ್ತದೆ. ನೆನಸಿಟ್ಟ ಬಾದಾಮಿ ಸೇವನೆ ಮಕ್ಕಳ ಮೆದುಳಿನ ಆರೋಗ್ಯಕ್ಕೂ ಸಹ ತುಂಬಾ ಒಳ್ಳೆಯದು.
ಹಸಿ ತರಕಾರಿ/ ಹಸಿರು ಎಲೆಯ ತರಕಾರಿ: ಪ್ರತಿನಿತ್ಯ ಮಕ್ಕಳ ಊಟದಲ್ಲಿ ಹಸಿ ತರಕಾರಿ ಅಥವಾ ಹಸಿರು ಎಲೆಯ ತರಕಾರಿ ಇರುವಂತೆ ನೋಡಿಕೊಳ್ಳುವ ಜವಬ್ದಾರಿ ತಾಯಂದಿರದ್ದು. ಮಕ್ಕಳು ಹಸಿರು ಎಲೆಯ ತರಕಾರಿ ನೇರವಾಗಿ ತಿನ್ನಲು ನಿರಾಕರಿಸಿದರೆ ನಿತ್ಯವೂ ಹಸಿರು ಎಲೆಯ ಪದಾರ್ಥಗಳು ಇರುವಂತೆ ಅಡುಗೆ ಮಾಡಿ ಮಕ್ಕಳಿಗೆ ಬಡಿಸಬೇಕು. ಈ ಎಲ್ಲಾ ಆಹಾರಗಳು ಮಕ್ಕಳನ್ನು ದೈಹಿಕವಾಗಿ ಬಲಶಾಲಿಗೊಳಿಸುತ್ತವೆ.