ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಬದಲಾದ ಕಾಲಕ್ಕೆ ತಕ್ಕಂತೆ ರೋಗಗಳೂ ಬದಲಾಗುತ್ತಿವೆ. ದಿನೇ ದಿನೇ ಹೊಸ ಹೊಸ ರೋಗ ಹುಟ್ಟಿಕೊಳ್ಳುತ್ತಿದೆ. ಒಂದು ಕಾಲದಲ್ಲಿ ರೋಗಗಳು ದೇಹಕ್ಕೆ ಮಾತ್ರ ಸಂಬಂಧಿಸಿವೆ. ಆದ್ರೆ, ಈಗ ಮಾನಸಿಕ ಕಾಯಿಲೆಗಳೂ ಹೆಚ್ಚುತ್ತಿವೆ. ಬದಲಾಗುತ್ತಿರುವ ಜೀವನಶೈಲಿ ಮತ್ತು ಒತ್ತಡದ ಜೀವನದಿಂದ ಅನೇಕ ಜನರು ಖಿನ್ನತೆ ಮತ್ತು ಒತ್ತಡದಿಂದ ಬಳಲುತ್ತಿದ್ದಾರೆ. ಆದ್ರೆ, ಇದು ವಯಸ್ಕರಿಗೆ ಮಾತ್ರ ಎಂದು ಭಾವಿಸುವುದು ತಪ್ಪು, ಮಕ್ಕಳೂ ಖಿನ್ನತೆಗೆ ಒಳಗಾಗುತ್ತಾರೆ.
ನಗುತ್ತಾ ಖುಷಿಯಿಂದ ಆಟ ಆಡುತ್ತಿದ್ದ ಮಕ್ಕಳು ಈಗ ಸ್ಮಾರ್ಟ್ ಫೋನ್’ಗಳ ಜೊತೆ ಕಿತ್ತಾಡುತ್ತಿದ್ದಾರೆ. ಶಾಲೆಯಿಂದ ಬಂದು ಮೈದಾನಕ್ಕೆ ಹೋಗಿ ಆಟವಾಡುತ್ತಿದ್ದವರು ಈಗ ಫೋನ್, ಟಿವಿಗಳಲ್ಲಿ ಯೂಟ್ಯೂಬ್ ವಿಡಿಯೋ ನೋಡುತ್ತಿದ್ದಾರೆ. ಆದ್ರೆ, ಇದು ಮಕ್ಕಳ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ತಜ್ಞರು. ಕೆಲವು ಲಕ್ಷಣಗಳ ಆಧಾರದ ಮೇಲೆ ಮಕ್ಕಳಲ್ಲಿ ಖಿನ್ನತೆಯನ್ನ ಮೊದಲೇ ಪತ್ತೆ ಹಚ್ಚಬಹುದು ಎಂದು ಹೇಳಲಾಗುತ್ತದೆ. ಆ ವಿಶೇಷತೆಗಳೇನು ಎಂಬುದನ್ನ ಈಗ ತಿಳಿಯೋಣ.
* ನಿಮ್ಮ ಮಗು ಕೆಲವು ದಿನಗಳ ಕಾಲ ದುಃಖದಲ್ಲಿದ್ದರೆ ಮತ್ತು ಇತರರನ್ನ ಭೇಟಿಯಾಗಲು ಆಸಕ್ತಿ ತೋರಿಸದಿದ್ದರೆ ಅದನ್ನ ಖಿನ್ನತೆ ಎಂದು ಅರ್ಥೈಸಬಹುದು ಎಂದು ತಜ್ಞರು ಹೇಳುತ್ತಾರೆ. ದೀರ್ಘಕಾಲ ಏಕಾಂಗಿಯಾಗಿರಲು ಆಸಕ್ತಿ ಇದ್ದರೂ, ಮಕ್ಕಳೊಂದಿಗೆ ಜಾಗರೂಕರಾಗಿರಿ ಎಂದು ಸೂಚಿಸಲಾಗಿದೆ.
* ಮಕ್ಕಳು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದರೂ, ಒಂಟಿಯಾಗಿ ಕುಳಿತು ಪ್ರಶ್ನೆಗಳನ್ನ ಕೇಳುತ್ತಾ ತಾವೇ ಉತ್ತರ ನೀಡುತ್ತಿದ್ದರೂ ಮಕ್ಕಳ ಮಾನಸಿಕ ಸ್ಥಿತಿಯಲ್ಲಿ ಬದಲಾವಣೆಯಾಗಿದೆ ಎಂಬುದನ್ನ ಗುರುತಿಸಬೇಕು. ತಕ್ಷಣ ಮನೋವೈದ್ಯರನ್ನ ಸಂಪರ್ಕಿಸಬೇಕು.
* ವಿನಾಕಾರಣ ಸಿಟ್ಟಿಗೇಳುವುದು, ಸಣ್ಣದೊಂದು ವಿಷಯಕ್ಕೂ ಕೋಪಗೊಳ್ಳುವುದು, ಕೈಯಲ್ಲಿದ್ದ ವಸ್ತುಗಳನ್ನ ಎಸೆಯುವುದು ಮಕ್ಕಳಲ್ಲಿ ಖಿನ್ನತೆಯ ಲಕ್ಷಣಗಳೆಂದು ಪರಿಗಣಿಸಬೇಕು.
* ಮಕ್ಕಳು ಸದಾ ನಿದ್ದೆ ಮಾಡುತ್ತಿದ್ದರೆ ಮತ್ತು ಯಾವುದೇ ಕೆಲಸದಲ್ಲಿ ಆಸಕ್ತಿ ತೋರಿಸದಿದ್ದರೆ ಇದು ಖಿನ್ನತೆಯ ಲಕ್ಷಣ ಎನ್ನುತ್ತಾರೆ ತಜ್ಞರು.
ಇವುಗಳನ್ನ ಅನುಸರಿಸಿ.!
ಖಿನ್ನತೆಯಿಂದ ದೂರವಿರಲು ಮಕ್ಕಳನ್ನು ಸ್ಮಾರ್ಟ್ ಗ್ಯಾಜೆಟ್’ಗಳಿಂದ ದೂರವಿಡಬೇಕು ಎನ್ನುತ್ತಾರೆ ತಜ್ಞರು. ಆದಷ್ಟು ಹೊರಗೆ ಆಟವಾಡಲು ಬಿಡಬೇಕು. ಅಲ್ಲದೆ ವಯಸ್ಕರು ಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನ ಕಳೆಯಲು ಸೂಚಿಸಲಾಗಿದೆ. ಉದ್ಯಾನವನಗಳಿಗೆ ಹೋಗುವುದು, ಪ್ರದರ್ಶನಗಳಿಗೆ ಕರೆದುಕೊಂಡು ಹೋಗುವುದು ಇತ್ಯಾದಿ.
BREAKING : ಜನ ಸಾಮಾನ್ಯರಿಗೆ ರಿಲೀಫ್ ; ಮಾರ್ಚ್’ನಲ್ಲಿ ಚಿಲ್ಲರೆ ಹಣದುಬ್ಬರ 10 ತಿಂಗಳ ಕನಿಷ್ಠ ಶೇ.4.85ಕ್ಕೆ ಇಳಿಕೆ
BREAKING: ಜ್ಯೋತಿಷಿ ಎಸ್.ಕೆ.ಜೈನ್ ಇನ್ನಿಲ್ಲ, ಅನಾರೋಗ್ಯದಿಂದ ವಿಧಿವಶ!