ತೆಲಂಗಾಣ: ಬಹುತೇಕರು ಇಂದು ಮೊಬೈಲ್ ಬಳಕೆ ಮಾಡ್ತಾರೆ. ಕೆಲಸಕ್ಕೆ ಹೋಗುವ, ತುರ್ತಾಗಿ ಹೋಗುವ ಯಾವ್ಯಾವುದೋ ಸಂದರ್ಭದಲ್ಲಿ ಚಾರ್ಜರ್ ಕರೆಂಟ್ ಪ್ಲಗ್ ನಿಂದ ತೆಗೆಯದೇ ಬಿಟ್ಟು ಹೋಗ್ತಾರೆ. ಮಕ್ಕಳ ಪೋಷಕರೇ ನೀವು ಹಾಗೆ ಬಿಟ್ಟು ಹೋಗುವ ಮುನ್ನಾ ಮುಂದೆ ಸುದ್ದಿ ಓದಿ.
ತೆಲಂಗಾಣದ ನಿರ್ಮಲ್ ಜಿಲ್ಲೆಯ ಕಡಂ ಮಂಡಲದ ಕೋಟ ಮಡ್ಡಿಪಡಗ ಗ್ರಾಮದಲ್ಲಿ ಮೊಬೈಲ್ ಚಾರ್ಜ್ ಹಾಕಿದ್ದಂತ ಚಾರ್ಜ್ ಅನ್ನು ವಿದ್ಯುತ್ ಪಿನ್ ನಲ್ಲೇ ಸ್ವಿಚ್ ಆಫ್ ಮಾಡದೇ ಹಾಗೆ ಬಿಟ್ಟು ಹೋಗಿದ್ದಾರೆ.
ವಿದ್ಯುತ್ ಬೋರ್ಡ್ ನಲ್ಲೇ ನೇತು ಹಾಕಿದ್ದಂತ ಚಾರ್ಜರ್ ಕೇಬಲ್ ಇಡಿದು ಆಟವಾಡುತ್ತಿದ್ದಂತ ಒಂದೂವರೆ ವರ್ಷದ ಮಗು, ಅದನ್ನು ಬಾಯಿಗೆ ಹಾಕಿ ಕಚ್ಚಿ ಬಿಟ್ಟಿದೆ. ಹೀಗೆ ಕಚ್ಚಿದ್ದೇ ತಡ ಮಗುವಿಗೆ ವಿದ್ಯುತ್ ಶಾಕ್ ಹೊಡೆದು, ನಿತ್ರಾಣಗೊಂಡಿದೆ.
ವಿದ್ಯುತ್ ಶಾಕ್ ಗೆ ಒಳಗಾಗಿದ್ದಂತ ಒಂದೂವರೆ ವರ್ಷದ ಬಾಲಕಿ ದುರ್ಗಂ ಆರಾಧ್ಯಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಆದರೇ ಚಿಕಿತ್ಸೆ ಫಲಿಸದೇ ಬಾಲಕಿ ದುರ್ಗಂ ಆರಾಧ್ಯ ಸಾವನ್ನಪ್ಪಿದ್ದಾರೆ.
ಮಗು ವಿದ್ಯುತ್ ಚಾರ್ಜರ್ ನಿಂದ ಶಾಕ್ ಹೊಡೆದ ಪರಿಣಾಮ ಸಾವನ್ನಪ್ಪಿದ್ದು, ಕೊಟ್ಟಮಡ್ಡಿಪಾಡಿಗದ ದುರ್ಗಂ ರಾಜಲಿಂಗು ಹಾಗೂ ಸುಶೀಲಾ ದಂಪತಿಯ ಆಕ್ರಂದನ ಮುಗಿಲು ಮುಟ್ಟಿದೆ. ಸೋ ಪೋಷಕರಾದಂತವರು ಮೊಬೈಲ್ ಚಾರ್ಜ್ ಅನ್ನು ವಿದ್ಯುತ್ ಪ್ಲಗ್ ನಲ್ಲೇ ಬಿಟ್ಟು ಹೋಗೋ ಮುನ್ನ ಎಚ್ಚರಿಕೆ ವಹಿಸಿ. ಇಲ್ಲವಾದಲ್ಲಿ ಪ್ರಾಣ ಹಾನಿಗೂ ಕಾರಣವಾಗಬಹುದು.
ಫಿಲಿಪೈನ್ಸ್ ನಲ್ಲಿ ಐದು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ , 11 ಮಂದಿ ಸಾವು | firebreaks